ಬೆಂಗಳೂರು : ರಾಜ್ಯದ ಮಹಿಳೆಯರಿಗೆ ಸಾರಿಗೆ ಇಲಾಖೆ ಮತ್ತೊಂದು ಸಿಹಿಸುದ್ದಿ ನೀಡಿದ್ದು, ಶಕ್ತಿ ಯೋಜನೆಯಡಿ ಬಸ್ ಗಳಲ್ಲಿ ಉಚಿತ ಪ್ರಯಾಣಕ್ಕೆ ಈಗ ನಿಗದಿತ ಗುರುತಿನ ಚೀಟಿಗಳ ಝರಾಕ್ಸ್ ಪ್ರತಿಗಳನ್ನು ಮಾನ್ಯ ಮಾಡಲು ರಾಜ್ಯ ಸಾರಿಗೆ ಸಂಸ್ಥೆ ನಿರ್ಧರಿಸಿದೆ.
ಮೊಬೈಲ್ ನಲ್ಲಿರುವ ಆಧಾರ್ ಕಾರ್ಡ್ ಸಾಫ್ಟ್ ಕಾಪಿ ತೋರಿಸಿಯೂ ಪ್ರಯಾಣಿಸಬಹುದು. ಹೀಗಾಗಿ ಉಚಿತ ಬಸ್ ಪ್ರಯಾಣಕ್ಕೆ ಐಡಿ ಕಾರ್ಡ್ ಒರಿಜನಲ್ ಕಡ್ಡಾಯ ಎಂಬ ಹಿಂದಿನ ಆದೇಶದಿಂದ ನಿರಾಳರಾಗಿದ್ದಾರೆ. ಸರ್ಕಾರದ ಸೂಚನೆಗಳನ್ನು ಪಾಲಿಸಲು ಅಧಿಕಾರಿಗಳಿಗೆ, ಸಿಬ್ಬಂದಿಗಳಿಗೆ ಸೂಚನೆ ನೀಡಲಾಗಿದೆ.
ಶಕ್ತಿ ಯೋಜನೆಯಡಿ ರಾಜ್ಯದ ಎಲ್ಲಾ ಮಹಿಳಾ ಪ್ರಯಾಣಿಕರಿಗೆ ನಿಗಮದ ವಾಹನಗಳಲ್ಲಿ ಉಚಿತವಾಗಿ ಪ್ರಾಯಾಣಿಸಲು ಅವಕಾಶ ನೀಡಲಾಗಿದೆ. ಸಾರಿಗೆ ಬಸ್ಸುಗಳಲ್ಲಿ ಪ್ರಯಾಣಿಸುವಾಗ ಆಧಾರ್ ಕಾರ್ಡ್ ಮೂಲ, ನಕಲು, ಡಿಜಿಲಾಕರ್ ನಲ್ಲಿ ಹಾರ್ಡ್ ಮತ್ತು ಸಾಫ್ಟ್ ಕಾಪಿ ಮಾದರಿಯಲ್ಲಿ ತೋರಿಸಿದಲ್ಲಿ, ಪ್ರಯಾಣಕ್ಕೆ ಅವಕಾಶ ಕಲ್ಪಿಸಲಾಗಿದೆ