alex Certify Shakti Yojane : ಮಹಿಳೆಯರಿಗೆ ಗುಡ್ ನ್ಯೂಸ್ : ಮೊಬೈಲ್ ನಲ್ಲಿ ‘ಆಧಾರ್ ಕಾರ್ಡ್’ ತೋರಿಸಿ ಪ್ರಯಾಣಿಸಲು ಅವಕಾಶ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

Shakti Yojane : ಮಹಿಳೆಯರಿಗೆ ಗುಡ್ ನ್ಯೂಸ್ : ಮೊಬೈಲ್ ನಲ್ಲಿ ‘ಆಧಾರ್ ಕಾರ್ಡ್’ ತೋರಿಸಿ ಪ್ರಯಾಣಿಸಲು ಅವಕಾಶ

ಬೆಂಗಳೂರು : ಮಹಿಳೆಯರಿಗೆ ಗುಡ್ ನ್ಯೂಸ್ ಸಿಕ್ಕಿದ್ದು, ಮೊಬೈಲ್ ನಲ್ಲಿ ‘ಆಧಾರ್ ಕಾರ್ಡ್’ ತೋರಿಸಿ ಪ್ರಯಾಣಿಸಲು ಸಾರಿಗೆ ಸಂಸ್ಥೆ ಅವಕಾಶ ನೀಡಿದೆ.

ಈ ಕುರಿತು ಕಲಬುರಗಿ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಮುಖ್ಯ ಸಂಚಾರ ವ್ಯವಸ್ಥಾಪಕರು ಸುತ್ತೋಲೆ ಹೊರಡಿಸಿದ್ದು, ಪ್ರಯಾಣಿಕರಿಗೆ ನಿಗಮದ ವಾಹನಗಳಲ್ಲಿ ಉಚಿತವಾಗಿ ಪ್ರಯಾಣಿಸಲು ಅವಕಾಶವನ್ನು ಕಲ್ಪಿಸಿದ್ದು ಹಾಗೂ ಮುಂದುವರೆದ ಉಲ್ಲೇಖಿತ ಪತ್ರ-1ರ ತಿದ್ದುಪಡಿ ಆದೇಶದಲ್ಲಿ ಸದರಿ ಉಚಿತ ಪ್ರಯಾಣಕ್ಕಾಗಿ ಮಹಿಳಾ ಪ್ರಯಾಣಿಕರು ಮೂಲನಕಲು/ಡಿಜಿಲಾಕರ್ (Digilocker) ಹಾರ್ಡ್ ಮತ್ತು ಸಾಫ್ಟ್ ಕಾಪಿ) ಮಾದರಿಯಲ್ಲಿ ತೋರಿಸಿದಲ್ಲಿ ಜರುಪಡಿಸಿದಲ್ಲಿ ಪ್ರಯಾಣಕ್ಕೆ ಅವಕಾಶ ಕಲ್ಪಿಸಲು ತಿಳಿಸಲಾಗಿರುತ್ತದೆ.

ಆದರೆ ಸಹ ಮಹಿಳಾ ಪ್ರಯಾಣಿಕರು ಮೊಬೈಲ್ನಲ್ಲಿ ಅಧಿಕೃತ ಗುರುತಿನ ಚೀಟಿ ತೋರಿಸಿದಾಗ್ಯೂ ಸಹ ಮೊಬೈಲ್ನಲ್ಲಿನ ಗುರುತಿನ ಚೀಟಿ ನಡೆಯುವುದಿಲ್ಲ ಎಂದು ಕೆಲವು ನಿರ್ವಾಹಕರು ಅನಾವಶ್ಯಕವಾಗಿ ಮಹಿಳಾ ಪ್ರಯಾಣಿಕರಿಗೆ ತೊಂದರೆಯುಂಟು ಮಾಡುತ್ತಿರುವ ಬಗ್ಗೆ ಪದೇ ಪದೇ ದೂರುಗಳು ಕೇಳಿ ಬರುತ್ತಿರುವುದಾಗಿ, ಈ ಹಿನ್ನೆಲೆಯಲ್ಲಿ ಮಹಿಳಾ ಪ್ರಯಾಣಿಕರು ಮೊಬೈಲ್ ನಲ್ಲಿ ಉಲ್ಲೇಖಿತ ಆದೇಶಗಳಲ್ಲಿ ತಿಳಿಸಿರುವಂತೆ ತೋರಿಸುವ ಯಾವುದಾದರೂ ಒಂದು ಅಧಿಕೃತ ಗುರುತಿನ ಚೀಟಿಯನ್ನು ಪರಿಗಣಿಸಿ ಶೂನ್ಯ ಮೊತ್ತದ ಮಹಿಳಾ ಟಿಕೆಟ್ ವಿತರಿಸಲು ಮತ್ತೊಮ್ಮೆ ಎಲ್ಲಾ ನಿರ್ವಾಹಕರಿಗೆ ತಿಳುವಳಿಕೆ ನೀಡಲು ಹಾಗೂ ಮಹಿಳಾ ಪ್ರಯಾಣಿಕರಿಗೆ ಉಚಿತ ಪ್ರಯಾಣಕ್ಕೆ ಅಡಚಣೆಯಾಗದಂತೆ ಹಾಗೂ ದೂರುಗಳಿಗೆ ಆಸ್ಪದ ನೀಡದಂತೆ ಕ್ರಮ ವಹಿಸುವಂತೆ ಉಲ್ಲೇಖಿ-4 ರ ಪತ್ರದಲ್ಲಿ ಮುಖ್ಯ ಸಂಚಾರ ವ್ಯವಸ್ಥಾಪಕರು (ಕಾ), ಕ.ರಾ.ರ.ಸಾ.ನಿಗಮ, ಕೇಂದ್ರ ಕಛೇರಿ, ಬೆಂಗಳೂರು ರವರು ತಿಳಿಸಿರುತ್ತಾರೆ.

ಈ ಸಂಬಂಧ, ಉಲ್ಲೇಖಿತ ಆದೇಶಗಳಲ್ಲಿ ತಿಳಿಸಿರುವಂತೆ ಮಹಿಳಾ ಪ್ರಯಾಣಿಕರು ಮೊಬೈಲ್ ನಲ್ಲಿ ತೋರಿಸುವ ಯಾವುದಾದರೂ ಒಂದು ಅಧಿಕೃತ ಗುರುತಿನ ಚೀಟಿಯನ್ನು ಪರಿಗಣಿಸಿ, ಶೂನ್ಯ ಮೊತ್ತದ ಮಹಿಳಾ ಟಿಕೆಟ್ ವಿತರಿಸಲು ಮತ್ತೋಮ್ಮೆ ಎಲ್ಲಾ ನಿರ್ವಾಹಕರಿಗೆ ಸೂಕ್ತ ತಿಳುವಳಿಕೆ ನೀಡಲು ಹಾಗೂ ಮಹಿಳಾ ಪ್ರಯಾಣಿಕರಿಗೆ ಉಚಿತ ಪ್ರಯಾಣಕ್ಕೆ ಅಡಚಣೆಯಾಗದಂತೆ ಹಾಗೂ ದೂರುಗಳಿಗೆ ಆಸ್ಪದ ನೀಡದಂತೆ ಅಗತ್ಯ ಕ್ರಮ ಕೈಗೊಳ್ಳಲು ಈ ಮೂಲಕ ಸೂಚಿಸಲಾಗಿದೆ. ಈ ಬಗ್ಗೆ ದೂರುಗಳು ಸ್ವೀಕೃತಗೊಂಡಲ್ಲಿ ಗಂಭೀರವಾಗಿ ಪರಿಗಣಿಸಿ ಸಂಬಂಧಪಟ್ಟವರ ಮೇಲೆ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಸೂಚನೆ ನೀಡಲಾಗಿದೆ.

 

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...