ಬಳ್ಳಾರಿ : ಕೈಮಗ್ಗ ಮತ್ತು ಜವಳಿ ಇಲಾಖೆಯಿಂದ ಪ್ರಸ್ತಕ ಸಾಲಿನಲ್ಲಿ ಕೈಮಗ್ಗ ನೇಯ್ಗೆ ಚಟುವಟಿಕೆಗಳಲ್ಲಿ ತೊಡಗಿರುವ, ಕೈಮಗ್ಗ ಮತ್ತು ಜವಳಿ ಇಲಾಖೆ ಹಾಗೂ ನೇಕಾರರ ಸಹಕಾರ ಸಂಘಗಳಲ್ಲಿ ನೊಂದಾಯಿತರಾದ ಅರ್ಹ ಪರಿಶಿಷ್ಠ ಜಾತಿ ಮತ್ತು ಪರಿಶಿಷ್ಠ ಪಂಗಡ ವರ್ಗದ ನೇಕಾರರಿಗೆ ದುಡಿಮೆ ಬಂಡವಾಳ, ಕೈಮಗ್ಗ, ಕೈಮಗ್ಗ ಸಲಕರಣೆಗಳನ್ನು ನೀಡಲು ಉದ್ದೇಶಿಸಲಾಗಿದ್ದು, ಅರ್ಹರಿಂದ ಅರ್ಜಿ ಆಹ್ವಾನಿಸಲಾಗಿದೆ.
ಜಿಲ್ಲಾ ವಲಯ ಯೋಜನೆಯಡಿಯಲ್ಲಿ ಎಸ್ಸಿಪಿ ಗೆ ರೂ 1 ಲಕ್ಷ ಮತ್ತು ಟಿಎಸ್ಪಿಗೆ 50 ಸಾವಿರ ಹಂಚಿಕೆ ಮಾಡಿದ್ದು, ಜಿಲ್ಲೆಯ ಕಾರ್ಯನಿರತ ಕೈಮಗ್ಗ ನೇಕಾರರ ಸಹಕಾರ ಸಂಘಗಳಲ್ಲಿ ನೊಂದಾಯಿತ ಹಾಗೂ ಕೈಮಗ್ಗ ನೇಯ್ಗೆ ಚಟುವಟಿಕೆಗಳಲ್ಲಿ ತೊಡಗಿರುವ ಪರಿಶಿಷ್ಠ ಜಾತಿ ಮತ್ತು ಪರಿಶಿಷ್ಠ ಪಂಗಡದ ನೇಕಾರರು ಹಾಗೂ ಸಂಬಂಧಿಸಿದ ಕೈಮಗ್ಗ ನೇಕಾರರ ಸಂಘಗಳು ಅರ್ಜಿ ಸಲ್ಲಿಸಬಹುದಾಗಿದೆ.
ಹೆಚ್ಚಿನ ಮಾಹಿತಿಗಾಗಿ ನೇರವಾಗಿ ನಗರದ ಅನಂತಪುರ ರಸ್ತೆಯ ಹೊಸ ಜಿಲ್ಲಾಡಳಿತ ಭವನದ 1ನೇ ಮಹಡಿಯ “ಎ” ಬ್ಲಾಕ್, ರೂಂ ನಂ. 29 ಕೈಮಗ್ಗ ಮತ್ತು ಜವಳಿ ಇಲಾಖೆಯ ಉಪ ನಿರ್ದೇಶಕರ ಕಚೇರಿ ಇವರನ್ನು ಸಂಪರ್ಕಿಸಬಹುದು ಅಥವಾ ಮೊ.9731905177, 9901313417 ಸಂಖ್ಯೆಗೆ ದೂರವಾಣಿ ಕರೆ ಮೂಲಕ ಸಂಪರ್ಕಿಸಬಹುದು ಎಂದು ಕೈಮಗ್ಗ ಮತ್ತು ಜವಳಿ ಇಲಾಖೆಯ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.