alex Certify ನೇಕಾರರಿಗೆ ಗುಡ್ ನ್ಯೂಸ್ : ‘ನೇಕಾರ್ ಸಮ್ಮಾನ್ ಯೋಜನೆಯಡಿ’ ಸಹಾಯಧನಕ್ಕೆ ಅರ್ಜಿ ಆಹ್ವಾನ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನೇಕಾರರಿಗೆ ಗುಡ್ ನ್ಯೂಸ್ : ‘ನೇಕಾರ್ ಸಮ್ಮಾನ್ ಯೋಜನೆಯಡಿ’ ಸಹಾಯಧನಕ್ಕೆ ಅರ್ಜಿ ಆಹ್ವಾನ

ಸರ್ಕಾರದ ಮಹತ್ತರ ಯೋಜನೆಯಾದ ನೇಕಾರ್ ಸಮ್ಮಾನ್ ಯೋಜನೆಯಡಿ ಕೈಮಗ್ಗ ಹಾಗೂ ವಿದ್ಯುತ್ ಮಗ್ಗ ನೇಕಾರರಿಗೆ ವಾರ್ಷಿಕವಾಗಿ ಒಂದು ಬಾರಿಗೆ ರೂ. 5 ಸಾವಿರ ಗಳ ಸಹಾಯಧನವನ್ನು ಸರ್ಕಾರದಿಂದ ಡಿ.ಬಿ.ಟಿ ಮೂಲಕ (ನೇರ ನಗದು ವರ್ಗಾವಣೆ) ನೀಡಲಾಗುತ್ತಿದೆ.

2024-25 ನೇ ಸಾಲಿಗೆ ಸಹಾಯಧನವನ್ನು ಪಡೆಯಲು ಜಿಲ್ಲೆಯ ಕೈಮಗ್ಗ ಹಾಗೂ ವಿದ್ಯುತ್ ಮಗ್ಗ ನೇಕಾರರು ಹಾಗೂ ನೇಕಾರಿಕೆ ಪೂರಕ ವೃತ್ತಿಯನ್ನು ಅವಲಂಬಿಸಿರುವ ಎಲ್ಲಾ ನೇಕಾರರು ಈ ಯೋಜನೆಯಡಿ ರೂ. 5 ಸಾವಿರ ಗಳ ವಾರ್ಷಿಕ ಒಂದು ಬಾರಿಯ ಸಹಾಯಧನ ಪಡೆಯಲು ಅರ್ಹರಿದ್ದು, ಅರ್ಜಿ ನಮೂನೆಗಳನ್ನು ತಮ್ಮ ನೇಕಾರ ಸಹಕಾರ ಸಂಘಗಳಿಂದ/ ಕಚೇರಿಯಿಂದ ಪಡೆದು ಸಂಘದ ಮೂಲಕ ಸಲ್ಲಿಸಬೇಕಿದೆ. ವೈಯಕ್ತಿಕ ನೇಕಾರರಾಗಿದ್ದಲ್ಲಿ ನೇಕಾರ್ ಸಮ್ಮಾನ್ ಅರ್ಜಿ ನಮೂನೆಗಳನ್ನು ಈ ಕಚೇರಿಯಿಂದ ಪಡೆದು ಸಲ್ಲಿಸಬಹುದಾಗಿದೆ.

ಕೈಮಗ್ಗ ನೇಕಾರರಿಂದ ಸಲ್ಲಿಸಬೇಕಾದ ದಾಖಲಾತಿಗಳು: ಆಧಾರ್ ಕಾರ್ಡ್, ರೇಷನ್ ಕಾರ್ಡ್, ನೇಕಾರ್ ಸಮ್ಮಾನ್ ಐಡಿ/ ಪೆಹಚಾನ್ ಕಾರ್ಡ್, ಆಧಾರ್ ಜೋಡಣೆಯಾದ ಬ್ಯಾಂಕ್ ಖಾತೆ ಪಾಸ್ಬುಕ್ ಪ್ರತಿ, ಕೈಮಗ್ಗ ನೇಕಾರಿಕೆ ವೃತ್ತಿಯಲ್ಲಿ ಇರುವ ಫೋಟೋ, ಕೈಮಗ್ಗದಲ್ಲಿ ಕಾರ್ಯನಿರ್ವಹಿಸುವ ಕೂಲಿ ನೇಕಾರರ ಮಜೂರಿ ಪಾವತಿ ರಶೀದಿ.
ವಿದ್ಯುತ್ ಮಗ್ಗ ನೇಕಾರರಿಂದ ಸಲ್ಲಿಸಬೇಕಾದ ದಾಖಲಾತಿಗಳು: ಘಟಕದ ಮಾಲೀಕರು/ ನೇಕಾರರು/ ಕಾರ್ಮಿಕ ಆಧಾರ್ ಜೋಡಣೆ ಆದ ಬ್ಯಾಂಕ್ ಖಾತೆ ಪಾಸ್ಬುಕ್ ಪ್ರತಿ, ವಿದ್ಯುತ್ ಮಗ್ಗ ಘಟಕದಲ್ಲಿ ಕಾರ್ಯನಿರ್ವಹಿಸುತ್ತಿರುವ ಫಲಾನುಭವಿಯ ಫೋಟೋ, ವಿದ್ಯುತ್ ಸಂಪರ್ಕ ಹೊಂದಿರುವ ಆರ್.ಆರ್.ನಂ.ನ ವಿದ್ಯುತ್ ಬಿಲ್ಲು.
ಘಟಕದ ಉದ್ಯೋಗ್ ಆಧಾರ್/ ಪಿ.ಎಂ.ಟಿ/ ಉದ್ದಿಮೆದಾರರ ಪರವಾನಿಗೆ ಪತ್ರದ ಪ್ರತಿ. ಘಟಕದಲ್ಲಿ ಕಾರ್ಯನಿರ್ವಹಿಸುವ ನೇಕಾರರು/ ಕಾರ್ಮಿಕರ ವಿವರಗಳನ್ನು ಒಳಗೊಂಡ ಮಜೂರಿ ಪಾವತಿಯ ಪ್ರತಿ. ಮಾಲೀಕರಿಂದ ನೇಕಾರರು/ ಕಾರ್ಮಿಕರ ಬಗ್ಗೆ ದೃಢೀಕರಣ ಪ್ರತಿ.

ಕೈಮಗ್ಗ ನೇಕಾರರು ಹಾಗೂ ವಿದ್ಯುತ್ ಮಗ್ಗ ನೇಕಾರರು ಈ ಮೇಲೆ ತಿಳಿಸಿದಂತೆ ಪೂರ್ಣ ದಾಖಲಾತಿಗಳನ್ನು ಅರ್ಜಿ ನಮೂನೆ ಜೊತೆ ಕಡ್ಡಾಯವಾಗಿ ಲಗತ್ತಿಸಬೇಕು. ಭರ್ತಿ ಮಾಡಲಾದ ಅರ್ಜಿಗಳನ್ನು ಸೆಪ್ಟೆಂಬರ್ 30 ರೊಳಗೆ ಸಹಾಯಕ ನಿರ್ದೇಶಕರ ಕಚೇರಿ, ಕೈಮಗ್ಗ ಮತ್ತು ಜವಳಿ ಇಲಾಖೆ, ಜಿಲ್ಲಾ ಕೈಗಾರಿಕಾ ಕೇಂದ್ರ ಕಟ್ಟಡ, ಕೊಹಿನೂರು ರಸ್ತೆ, ಮಡಿಕೇರಿ ಇಲ್ಲಿ ಸಲ್ಲಿಸಬೇಕು. ಅವಧಿ ನಂತರದಲ್ಲಿ ಬಂದ ಅರ್ಜಿಗಳನ್ನು ಸ್ವೀಕರಿಸಲಾಗುವುದಿಲ್ಲ ಎಂದು ಕೈಮಗ್ಗ ಮತ್ತು ಜವಳಿ ಇಲಾಖೆಯ ಸಹಾಯಕ ನಿರ್ದೇಶಕರಾದ ಗುರುಸ್ವಾಮಿ ಅವರು ತಿಳಿಸಿದ್ದಾರೆ.

 

Related News

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...