ಬಳ್ಳಾರಿ: ಕೆನರಾ ಬ್ಯಾಂಕ್ ಗ್ರಾಮೀಣ ಸ್ವ ಉದ್ಯೋಗ ತರಬೇತಿ ಸಂಸ್ಥೆ ವತಿಯಿಂದ ಗ್ರಾಮೀಣ ಪ್ರದೇಶದ 18 ರಿಂದ 45 ವಯೋಮಿತಿಯೊಳಗಿನ ನಿರುದ್ಯೋಗಿ ಯುವಕರಿಗೆ ಮೊಬೈಲ್ ರಿಪೇರಿ, ಸರ್ವಿಸ್, ಎಲೆಕ್ಟ್ರಿಕ್ ಮೋಟರ್ ರಿವೈಂಡಿಂಗ್, ರಿಪೇರ್ ಸರ್ವಿಸ್ ತರಬೇತಿ ನೀಡಲು ಅರ್ಹರಿಂದ ಅರ್ಜಿ ಆಹ್ವಾನಿಸಲಾಗಿದೆ.
ಆ.16 ರಿಂದ 30 ದಿನಗಳ ಕಾಲ ವಸತಿ ಸಹಿತವಾಗಿ ಉಚಿತ ತರಬೇತಿ ನೀಡಲಾಗುತ್ತದೆ.
*ಅರ್ಹತೆಗಳು
ಬಿ.ಪಿ.ಏಲ್. ಕಾರ್ಡ ಹೊಂದಿರಬೇಕು ಕನ್ನಡವನ್ನು ಓದಲು ಹಾಗೂ ಬರೆಯಲು ಬರುವಂತಹ ನಿರುದ್ಯೋಗಿ ಸ್ವ-ಉದ್ಯೋಗ ಗ್ರಾಮೀಣ ಪ್ರದೇಶದ ಅಭ್ಯರ್ಥಿಗಳು ತರಬೇತಿಯಲ್ಲಿ ಭಾಗವಹಿಸಲು ಅರ್ಹರಾಗಿರುತ್ತಾರೆ.
ವಿದ್ಯಾರ್ಹತೆ ಕನಿಷ್ಟ 10ನೇ ತರಗತಿ ಪಾಸಾಗಿರಬೇಕು. ತರಬೇತಿಯ ಬಗ್ಗೆ ಪ್ರಾಥಮಿಕ ಅನುಭವ ಹೊಂದಿದವರಿಗೆ ಆದ್ಯತೆ ಕೊಡಲಾಗುವುದು. 35 ಜನರಿಗೆ ಮಾತ್ರ ಅವಕಾಶ ನೀಡಲಾಗುತ್ತದೆ. ಸಂದರ್ಶನ ಮೂಲಕ ಆಯ್ಕೆ ಮಾಡಲಾಗುವುದು. ಈ ಮೊದಲು ತರಬೇತಿ ಪಡೆದವರು ಪುನಃ ತರಬೇತಿ ಪಡೆಯಲು ಅರ್ಹರಿರುವುದಿಲ್ಲ.
ಆಸಕ್ತ ಅರ್ಹ ಅಭ್ಯರ್ಥಿಗಳು ತ್ವರಿತವಾಗಿ ತಮ್ಮ ಹೆಸರು, ವಿಳಾಸ, ಸಂಪರ್ಕಕ್ಕೆ ಲಭ್ಯವಿರುವ ದೂರವಾಣಿ ಸಂಖ್ಯೆ, ವಯಸ್ಸು, ವಿದ್ಯಾರ್ಹತೆ, ಪಡೆಯಲಿಚ್ಚಿಸಿರುವ ತರಬೇತಿ, ಸಂಬAಧಿತ ವಿಷಯದಲ್ಲಿ ಇರುವ ಪ್ರಾಥಮಿಕ ಜ್ಞಾನ, ಅನುಭವ ಮುಂತಾದ ಮಾಹಿತಿಯೊಂದಿಗೆ ಬಿಳಿ ಹಾಳೆಯ ಮೇಲೆ ಅರ್ಜಿಯನ್ನು ಬರೆದು ಪಾಸ್ ಪೋರ್ಟ್ ಅಳತೆಯ ಇತ್ತೀಚಿನ ಭಾವಚಿತ್ರದೊಂದಿಗೆ ರೇಷನ್ ಕಾರ್ಡ್ನ ಒಂದು ಝೆರಾಕ್ಸ್ ಪ್ರತಿಯನ್ನು ಲಗತ್ತಿಸಿ ಅರ್ಜಿಯನ್ನು ಆ.14 ರೊಳಗಾಗಿ ಸಲ್ಲಿಸಬೇಕು.
ಅರ್ಜಿಗಳು ನಮಗೆ ತಲುಪಿದ ನಂತರ ತರಬೇತಿಯಲ್ಲಿ ಭಾಗವಹಿಸುವ ಬಗೆಗೆ ಅರ್ಜಿಯಲ್ಲಿ ನಮೂದಿಸಿದ ಫೋನ್ ನಂಬರ್ಗೆ ಫೋನ್ ಮಾಡಿ ತಿಳಿಸಲಾಗುವುದು. ತರಬೇತಿಯಲ್ಲಿ ಪಾಲ್ಗೊಳ್ಳಲು ತಗುಲುವ ಪ್ರಯಾಣ ಭತ್ಯೆಯನ್ನು ತಾವೇ ಭರಿಸಬೇಕು.
ಹೆಚ್ಚಿನ ಮಾಹಿತಿಗಾಗಿ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜು ಹತ್ತಿರದ ಡಿಐಸಿ ಕಾಂಪೌಂಡ್ನ ಕೆನರಾ ಬ್ಯಾಂಕ್ ಗ್ರಾಮೀಣ ಸ್ವ-ಉದ್ಯೋಗ ತರಬೇತಿ ಸಂಸ್ಥೆಯ ನಿರ್ದೇಶಕರ ಕಚೇರಿ ಅಥವಾ ದೂ.08392-299117, ಮೊ.8310766951 ಗೆ ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.