ಬೆಂಗಳೂರು : ಪ್ರವಾಸೋದ್ಯಮ ಇಲಾಖೆಯು ರಾಜ್ಯ ಹಾಗೂ ಅಂತಾರಾಜ್ಯದ ವಿವಿಧ ಪ್ರವಾಸಿ ತಾಣಗಳಿಗೆ ಪ್ರವಾಸಗಳನ್ನು ಆಯೋಜಿಸುತ್ತಾ ಬಂದಿದೆ. ಈ ನಿಟ್ಟಿನಲ್ಲಿ ಪ್ರವಾಸೋದ್ಯಮ ಅಭಿವೃದ್ಧಿ ನಿಗಮವು ಹೆಚ್ಚುವರಿಯಾಗಿ 3 ಹೊಸ ವೋಲ್ವೋ ಬಸ್ಗಳನ್ನು ಖರೀದಿಸಿದೆ.
ತಿರುಪತಿ ಪ್ರವಾಸಕ್ಕೆ 55 ಆಸನಗಳ ಮಲ್ಟಿ ಆಕ್ಸೆಲ್ ಬಸ್, ಶಿರಡಿ ಪ್ರವಾಸಕ್ಕೆ 47 ಆಸನಗಳ ವೋಲ್ವೋ ಬಸ್ ಮತ್ತು ಪಾಂಡಿಚೇರಿ ಪ್ರವಾಸಕ್ಕೆ 47 ಆಸನಗಳ ವೋಲ್ವೋ ಬಸ್ಗಳನ್ನು ಖರೀದಿಸಲಾಗಿದೆ.
ಈ ಪ್ರವಾಸಕ್ಕೆ ತೆರಳಲು ಇಚ್ಛಿಸುವವರು ಯಶವಂತಪುರ ಕೇಂದ್ರ ಕಚೇರಿಯ ಬುಕ್ಕಿಂಗ್ ಕೌಂಟರ್, ಮೈಸೂರು ಸಾರಿಗೆ ವಿಭಾಗದ ಬುಕ್ಕಿಂಗ್ ಕೌಂಟರ್, ಕೆಂಪೇಗೌಡ ಬುಕ್ಕಿಂಗ್ ಕೌಂಟರ್, ರೆಡ್ಬಸ್ ಪೋರ್ಟಲ್, ಕೆಎಸ್ಆರ್ಟಿಸಿ ಅವತಾರ್ ಹಾಗೂ ನಿಗಮದ ಅಧಿಕೃತ ಟ್ರಾವೆಲ್ ಏಜೆಂಟ್ಗಳ ಮೂಲಕ ಮುಂಗಡ ಬುಕ್ಕಿಂಗ್ ಮಾಡಿಕೊಳ್ಳಬಹುದು. https://www.kstdc.co/ ನಲ್ಲಿ ಆನ್ಲೈನ್ ಬುಕ್ಕಿಂಗ್ಗೂ ಅವಕಾಶವಿದೆ. ಹೆಚ್ಚಿನ ಮಾಹಿತಿಗಾಗಿ 080-43344334/35, 8970650070 ಅಥವಾ 8970650075 ಗೆ ಕರೆ ಮಾಡಬಹುದು ಎಂದು ಪ್ರಕಟಣೆ ತಿಳಿಸಿದೆ.