ಕೊಡಚಾದ್ರಿಗೆ ತೆರಳುವ ಪ್ರವಾಸಿಗರಿಗೆ ಹಾಗೂ ಭಕ್ತರಿಗೆ ಗುಡ್ ನ್ಯೂಸ್ ಒಂದು ಇಲ್ಲಿದೆ. ಹಿಡ್ಲಮನೆ ಫಾಲ್ಸ್ ಮೂಲಕ ಚಾರಣ ಮಾಡಲು ಆಗಸ್ಟ್ 30 ರಿಂದ ಅವಕಾಶ ಕಲ್ಪಿಸಿಕೊಡಲಾಗಿದ್ದು, ಆದರೆ ಕೆಲವೊಂದು ಷರತ್ತುಗಳನ್ನು ವಿಧಿಸಲಾಗಿದೆ.
ಕಳೆದ ತಿಂಗಳು ಮಲೆನಾಡಿನಲ್ಲಿ ಅತಿಯಾಗಿ ಸುರಿದ ಮಳೆ ಕಾರಣಕ್ಕೆ ಪ್ರವಾಸಿಗರು ಹಾಗೂ ಭಕ್ತರ ಸುರಕ್ಷತೆ ದೃಷ್ಟಿಯಿಂದ ಚಾರಣ ಮಾಡಲು ನಿರ್ಬಂಧವನ್ನು ವಿಧಿಸಲಾಗಿತ್ತಾದರೂ ಬಳಿಕ ಜುಲೈ 30 ರಿಂದ ಇದನ್ನು ತೆರವುಗೊಳಿಸಲಾಗಿತ್ತು. ಅಲ್ಲದೆ ಆಗಸ್ಟ್ 16 ರಿಂದ ವಾಹನದಲ್ಲಿ ಹೋಗಲು ಅವಕಾಶ ಕಲ್ಪಿಸಿಕೊಡಲಾಗಿತ್ತು.
ಇದೀಗ ಅಂದರೆ ಆಗಸ್ಟ್ 30 ರಿಂದ ಹಿಡ್ಲಮನೆ ಫಾಲ್ಸ್ ಮೂಲಕ ಚಾರಣ ಮಾಡಲು ಅವಕಾಶ ಕಲ್ಪಿಸಿಕೊಡಲಾಗಿದ್ದು, ಪ್ರವಾಸಿಗರ ಸುರಕ್ಷತೆ ದೃಷ್ಟಿಯಿಂದ ಕೆಲವೊಂದು ಷರತ್ತುಗಳನ್ನು ವಿಧಿಸಲಾಗಿದೆ. ಕೊಡಚಾದ್ರಿಗೆ ತರಳುವವರು ಯಾವುದೇ ಅಪಾಯ ಅಥವಾ ಪ್ರಾಣ ಹಾನಿಯಾದರೆ ಅದಕ್ಕೆ ತಾವೇ ಜವಾಬ್ದಾರರು ಎಂದು ಮುಚ್ಚಳಿಕೆ ಬರೆದು ಕೊಡಬೇಕಾಗುತ್ತದೆ.