ಬಳ್ಳಾರಿ : ವಿಶ್ವ ಪ್ರಸಿದ್ದ ಹಂಪಿಗೆ ಬರುವ ಪ್ರವಾಸಿಗರು ಇನ್ಮುಂದೆ ಸಂಗೀತ ಸ್ವಾದವನ್ನು ಕ್ಯೂ ಆರ್ ಕೋಡ್ ಮೂಲಕ ಆಸ್ವಾದಿಸಬಹುದು.
ಹೌದು. ಹಂಪಿಯ ವಿಜಯ ವಿಠ್ಠಲ ದೇವಸ್ಥಾನದ ಸಂಗೀತ ಮಂಟಪದಲ್ಲಿನ ಶಿಲಾ ಕಂಬಗಳನ್ನು ಮೀಟಿದರೆ ಬರುವ ಸಂಗೀತ ತರಂಗವನ್ನು ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿ ಆಲಿಸಬಹುದು.
ಕಂಬಗಳನ್ನು ನಿರಂತರ ಮೀಟಿದರೆ ಅವು ಶಿಥಿಲಗೊಳ್ಳುವ ಸಾಧ್ಯತೆ ಹೆಚ್ಚು. ಈ ಕಾರಣಕ್ಕಾಗಿಯೇ ಕ್ಯೂಆರ್ ಕೋಡ್ ವ್ಯವಸ್ಥೆ ಮಾಡಲಾಗಿದೆ. ಪ್ರವಾಸಿಗರು ಅದನ್ನು ಸ್ಕ್ಯಾನ್ ಮಾಡಿದರೆ ಶಿಲೆಗಳ ಸಂಗೀತವನ್ನು ಕೇಳಬಹುದು.
ಭಾರತೀಯ ಪುರಾತತ್ವ ಸರ್ವೇಕ್ಷಣ ಇಲಾಖೆ ವತಿಯಿಂದ ಹಂಪಿಯ ವಿಜಯ ವಿಠಲ ದೇವಸ್ಥಾನದ ಸಂಗೀತ ಮಂಟಪದಲ್ಲಿ ಸಂಗೀತದ ಕಂಬಗಳಿಗೆ ಕ್ಯೂ ಆರ್ ಕೋಡ್ ಅಳವಡಿಸಲಾಗಿದೆ.
ಹಂಪಿಯ ವಿಜಯ ವಿಠ್ಠಲ ದೇವಸ್ಥಾನದ ಸಂಗೀತ ಮಂಟಪದಲ್ಲಿನ ಶಿಲಾ ಕಂಬಗಳನ್ನು ಮೀಟಿದರೆ ಬರುವ ಸಂಗೀತ ತರಂಗವನ್ನು ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿ ಆಲಿಸಬಹುದು.
ಕಂಬಗಳನ್ನು ನಿರಂತರ ಮೀಟಿದರೆ ಅವು ಶಿಥಿಲಗೊಳ್ಳುವ ಸಾಧ್ಯತೆ ಹೆಚ್ಚು. ಈ ಕಾರಣಕ್ಕಾಗಿಯೇ ಕ್ಯೂಆರ್ ಕೋಡ್ ವ್ಯವಸ್ಥೆ ಮಾಡಲಾಗಿದೆ. ಪ್ರವಾಸಿಗರು ಅದನ್ನು ಸ್ಕ್ಯಾನ್ ಮಾಡಿದರೆ… pic.twitter.com/SKvgLltADB
— DIPR Karnataka (@KarnatakaVarthe) November 26, 2024