ಬೆಂಗಳೂರು : ನಿಗಮ-ಮಂಡಳಿ ನೇಮಕದ ನಿರೀಕ್ಷೆಯಲ್ಲಿರುವ ಕಾಂಗ್ರೆಸ್ ಮುಖಂಡರು, ಶಾಸಕರಿಗೆ ಸಿಹಿಸುದ್ದಿಯೊಂದು ಸಿಕ್ಕಿದ್ದು, ನಿಗಮ ಮಂಡಳಿಗಳ ನೇಮಕಾತಿಗೆ ಇಂದೇ ಗ್ರೀನ್ ಸಿಗ್ನಲ್ ಸಿಗುವ ಸಾಧ್ಯತೆ ಇದೆ.
ನಿಗಮ ಮಂಡಳಿ ನೇಮಕ ಸಂಬಂಧ ಚರ್ಚೆ ನಡೆಸಲು ಇಂದು ಬೆಂಗಳೂರಿಗೆ ಸುರ್ಜೆವಾಲಾ ಹಾಗೂ ವೇಣುಗೋಪಾಲ್ ಅವರು ಬಂದಿದ್ದು, ಇಂದು ಮಧ್ಯಾಹ್ನ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ್ ಅವರ ಜೊತೆಗೆ ಚರ್ಚೆ ನಡೆಸಿ ಅಂತಿಮ ಪಟ್ಟಿ ಪ್ರಕಟಿಸಲಿದ್ದಾರೆ ಎಂದು ಹೇಳಲಾಗುತ್ತಿದೆ.
ನಿಗಮ- ಡಳಿಗಳಿಗೆ ಯಾವೆಲ್ಲಾ ಶಾಸಕರಿಗೆ ಹಾಗೂ ಮುಖಂಡರಿಗೆ ಅವಕಾಶ ಕೊಡಬೇಕೆಂದು ಸಭೆಯಲ್ಲಿ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ. ಶಿವಕುಮಾರ್ ಚರ್ಚೆ ನಡೆಸಿದ್ದು, ಶೇ. 50 ರಂತೆ ನಿಗಮ-ಮಂಡಳಿಗಳನ್ನು ಹಂಚಿಕೊಂಡು ಪಟ್ಟಿ ಅಂತಿಮಗೊಳಿಸಿದ್ದಾರೆ ಎಂದು ಹೇಳಲಾಗುತ್ತಿದೆ.
ಕಾಂಗ್ರೆಸ್ ಮುಖಂಡರು ಹಾಗೂ ಶಾಸಕರು ನಿರೀಕ್ಷೆ ಇಟ್ಟುಕೊಂಡಿರುವ ನಿಗಮ-ಮಂಡಳಿ ನೇಮಕ ಸಂಭಾವ್ಯ ಪಟ್ಟಿ ತಯಾರು ಮಾಡುವ ಪ್ರಕ್ರಿಯೆ ಕೊನೆಯ ಹಂತ ತಲುಪಿದ್ದು, ಯಾರ್ಯಾರಿಗೆ ನಿಗಮ-ಮಂಡಳಿ ಸ್ಥಾನ ಸಿಗಲಿದೆ ಕಾದು ನೋಡಬೇಕು.