ನವದೆಹಲಿ : ಸರ್ಕಾರಿ ಹುದ್ದೆಯ ನಿರೀಕ್ಷೆಯಲ್ಲಿದ್ದವರಿಗೆ ಏರ್ಪೋರ್ಟ್ ಅಥಾರಿಟಿ ಆಫ್ ಇಂಡಿಯಾ (AAI) ವಿವಿಧ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನಿಸಲಾಗಿದೆ.
ಏರ್ಪೋರ್ಟ್ ಅಥಾರಿಟಿ ಆಫ್ ಇಂಡಿಯಾ (AAI) ಜ್ಯೂನಿಯರ್ ಅಸಿಸ್ಟೆಂಟ್, ಸೀನಿಯರ್ ಅಸಿಸ್ಟೆಂಟ್ ಮತ್ತು ಜೂನಿಯರ್ ಎಕ್ಸಿಕ್ಯೂಟಿವ್ ಹುದ್ದೆಗಳಿಗೆ ನೇಮಕಾತಿ ಪ್ರಕಟಣೆ ಹೊರಡಿಸಿದೆ. ಅಧಿಸೂಚನೆಯ ಪ್ರಕಾರ, ಜೂನಿಯರ್ ಅಸಿಸ್ಟೆಂಟ್ (ಆಫೀಸ್), ಸೀನಿಯರ್ ಅಸಿಸ್ಟೆಂಟ್ (ಅಕೌಂಟ್ಸ್) ಮತ್ತು ಜೂನಿಯರ್ ಎಕ್ಸಿಕ್ಯೂಟಿವ್ ಹುದ್ದೆಗಳ ನೇಮಕಾತಿಗೆ ಅರ್ಜಿ ಸಲ್ಲಿಸಲು ಸೆಪ್ಟೆಂಬರ್ 4 ಕೊನೆಯ ದಿನಾಂಕವಾಗಿದೆ. ಏರ್ಪೋರ್ಟ್ ಅಥಾರಿಟಿ ಆಫ್ ಇಂಡಿಯಾದಲ್ಲಿ ಒಟ್ಟು 342 ಹುದ್ದೆಗಳು ಖಾಲಿ ಇವೆ. www.aai.aero ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡುವ ಮೂಲಕ ಅರ್ಜಿಯನ್ನು ಸಲ್ಲಿಸಬೇಕು.
ಅರ್ಜಿ ಶುಲ್ಕ
ಅರ್ಜಿ ಶುಲ್ಕದ ಬಗ್ಗೆ ಮಾತನಾಡುವುದಾದರೆ, ಎಸ್ಸಿ / ಎಸ್ಟಿ / ಅಂಗವಿಕಲ ಅಭ್ಯರ್ಥಿಗಳಿಗೆ ಇದು ಉಚಿತವಾಗಿದೆ. ಇತರೆ ವರ್ಗದ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕ 1000 ರೂ. ವಿಮಾನ ನಿಲ್ದಾಣ ಪ್ರಾಧಿಕಾರದಲ್ಲಿ ವಿವಿಧ ಹುದ್ದೆಗಳಿಗೆ ಆನ್ಲೈನ್ ಪರೀಕ್ಷೆಯ ಮೂಲಕ ನೇಮಕಾತಿ ನಡೆಯಲಿದೆ. ಆದರೆ, ಪರೀಕ್ಷೆಯ ದಿನಾಂಕವನ್ನು ಇನ್ನೂ ಘೋಷಿಸಲಾಗಿಲ್ಲ.
ಖಾಲಿ ಹುದ್ದೆಗಳ ವಿವರ
ಜೂನಿಯರ್ ಅಸಿಸ್ಟೆಂಟ್ (ಆಫೀಸ್)-9
ಸೀನಿಯರ್ ಅಸಿಸ್ಟೆಂಟ್ (ಅಕೌಂಟ್ಸ್)- 9
ಜೂನಿಯರ್ ಎಕ್ಸಿಕ್ಯೂಟಿವ್ (ಕಾಮನ್ ಕೇಡರ್)-237
ಜೂನಿಯರ್ ಎಕ್ಸಿಕ್ಯೂಟಿವ್ (ಫೈನಾನ್ಸ್)-66
ಜೂನಿಯರ್ ಎಕ್ಸಿಕ್ಯೂಟಿವ್ (ಫೈರ್ ಸರ್ವಿಸ್)-3
ಜೂನಿಯರ್ ಎಕ್ಸಿಕ್ಯೂಟಿವ್ (ಕಾನೂನು)-18
ವಯಸ್ಸಿನ ಮಿತಿ
ಜೂನಿಯರ್ ಅಸಿಸ್ಟೆಂಟ್ ಮತ್ತು ಸೀನಿಯರ್ ಅಸಿಸ್ಟೆಂಟ್ – 18 ರಿಂದ 30 ವರ್ಷ
ಜೂನಿಯರ್ ಎಕ್ಸಿಕ್ಯೂಟಿವ್ – 27 ವರ್ಷ
ವಯೋಮಿತಿ ಸಡಿಲಿಕೆ: ಮೀಸಲಾತಿ ವರ್ಗದ ಅಭ್ಯರ್ಥಿಗಳಿಗೆ ನಿಯಮಾನುಸಾರ ಸಡಿಲಿಕೆ ನೀಡಲಾಗುವುದು.
ಶೈಕ್ಷಣಿಕ ಅರ್ಹತೆ
ಜೂನಿಯರ್ ಅಸಿಸ್ಟೆಂಟ್ (ಆಫೀಸ್)- ಪದವಿ
ಸೀನಿಯರ್ ಅಸಿಸ್ಟೆಂಟ್ (ಅಕೌಂಟ್ಸ್) – B.Com+ ಎರಡು ವರ್ಷಗಳ ಅನುಭವ.
ಜೂನಿಯರ್ ಎಕ್ಸಿಕ್ಯೂಟಿವ್ (ಕಾಮನ್ ಕೇಡರ್)- ಪದವಿ
ಜೂನಿಯರ್ ಎಕ್ಸಿಕ್ಯೂಟಿವ್ (ಫೈನಾನ್ಸ್)-ಬಿ.ಕಾಂ+ ಐಸಿಡಬ್ಲ್ಯೂಎ/ಐಸಿಡಬ್ಲ್ಯೂಎ ಸಿಎ/ಫೈನಾನ್ಸ್ ನಲ್ಲಿ ಎಂಬಿಎ
ಜ್ಯೂನಿಯರ್ ಎಕ್ಸಿಕ್ಯೂಟಿವ್ (ಫೈರ್ ಸರ್ವಿಸ್)-B.Tech ಸಂಬಂಧಿತ ಕ್ಷೇತ್ರದಲ್ಲಿ
ಜೂನಿಯರ್ ಎಕ್ಸಿಕ್ಯೂಟಿವ್ (ಕಾನೂನು)-ಕಾನೂನು ಪದವಿ