alex Certify BREAKING : ‘ಲೋಕಾಯುಕ್ತ’ ಸಂಸ್ಥೆಯ ಸಿಬ್ಬಂದಿಗಳಿಗೆ ಗುಡ್ ನ್ಯೂಸ್ : ‘ವಿಶೇಷ ಭತ್ಯೆ’ ಹೆಚ್ಚಳ ಮಾಡಿ ರಾಜ್ಯ ಸರ್ಕಾರ ಆದೇಶ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BREAKING : ‘ಲೋಕಾಯುಕ್ತ’ ಸಂಸ್ಥೆಯ ಸಿಬ್ಬಂದಿಗಳಿಗೆ ಗುಡ್ ನ್ಯೂಸ್ : ‘ವಿಶೇಷ ಭತ್ಯೆ’ ಹೆಚ್ಚಳ ಮಾಡಿ ರಾಜ್ಯ ಸರ್ಕಾರ ಆದೇಶ

ಬೆಂಗಳೂರು : ಲೋಕಾಯುಕ್ತ ಸಂಸ್ಥೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ನೌಕರರು ಹಾಗೂ ಪೊಲೀಸ್ ಸಿಬ್ಬಂದಿಗಳಿಗೆ ರಾಜ್ಯ ಸರ್ಕಾರ ಗುಡ್ ನ್ಯೂಸ್ ನೀಡಿದ್ದು, ವಿಶೇಷ ಭತ್ಯೆ ಹೆಚ್ಚಳ ಮಾಡಿ ಆದೇಶ ಹೊರಡಿಸಿದೆ.

ಕರ್ನಾಟಕ ಲೋಕಾಯುಕ್ತ ಸಂಸ್ಥೆಯ ಸಿಬ್ಬಂದಿಗಳ ನಿರ್ದಿಷ್ಟ ಕಾರ್ಯವೈಖರಿ ಮತ್ತು ಹುದ್ದೆಯ ಕಾರ್ಯದ ನಿರ್ವಹಣೆಯಲ್ಲಿನ ಗುರುತರ ಹೊಣೆಗಾರಿಕೆಯನ್ನು ಗಮನದಲ್ಲಿರಿಸಿ, ಈ ಕೆಳಕಂಡಂತೆ ವಿಶೇಷ ಭತ್ಯೆಯನ್ನು ಪರಿಷ್ಕರಿಸಿ ಆದೇಶಿಸಿದೆ.

ವಿಶೇಷ ಘಟಕಗಳಾದ ರಾಜ್ಯ ಗುಪ್ತವಾರ್ತೆ ಮತ್ತು ಆಂತರಿಕ ಭದ್ರತಾ ಘಟಕಗಳಿಗೆ ಮಂಜೂರಾದ ರೀತಿಯಲ್ಲಿ ಕರ್ನಾಟಕ ಲೋಕಾಯುಕ್ತ ಸಂಸ್ಥೆಯಲ್ಲಿರುವ ಪೊಲೀಸ್ ವಿಭಾಗದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಪೊಲೀಸ್ ಪೇದೆ ಹುದ್ದೆಯಿಂದ ಪೊಲೀಸ್ ಅಧೀಕ್ಷಕರ (ನಾನ್ ಐ.ಪಿ.ಎಸ್) ಹುದ್ದೆಯಲ್ಲಿರುವ ಅಧಿಕಾರಿ/ಸಿಬ್ಬಂದಿಯವರಿಗೆ ವಿಶೇಷ ಭತ್ಯೆಯನ್ನು ಮಂಜೂರು ಮಾಡುವಂತೆ ಕೋರಿರುತ್ತಾರೆ. ಈ ಹಿನ್ನೆಲೆ ಪ್ರಸ್ತಾವನೆಯನ್ನು ಪರಿಶೀಲಿಸಿದ್ದು, ಪೊಲೀಸ್ ಇಲಾಖೆಯ ರಾಜ್ಯ ಗುಪ್ತವಾರ್ತೆ ಹಾಗೂ ಆಂತರಿಕ ಭದ್ರತಾ ವಿಭಾಗಗಳಲ್ಲಿನ ಕಾರ್ಯನಿರತ ಸಿಬ್ಬಂದಿಗಳಿಗೆ ಮೇಲೆ ಓದಲಾದ (2) ರ ಆದೇಶದಲ್ಲಿ ಮಂಜೂರು ಮಾಡಿರುವ ವಿಶೇಷ ಭತ್ಯೆಯ ದರಗಳಂತೆ ಲೋಕಾಯುಕ್ತ ಸಂಸ್ಥೆಯ ತತ್ಸಮಾನ ಹುದ್ದೆಯ ಸಿಬ್ಬಂದಿಗಳಿಗೆ ವಿಸ್ತರಿಸಲು, ವಿಶೇಷ ಪ್ರಕರಣವೆಂದು ಪರಿಗಣಿಸಿ ಸಹಮತಿ ನೀಡಿರುವುದರಿಂದ ಈ ಆದೇಶ ಹೊರಡಿಸಿದೆ.

Related News

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...