ಬೆಂಗಳೂರು : ಮೆಟ್ರೋ ಪ್ರಯಾಣಿಕರಿಗೆ ಬಿಎಮ್ಆರ್ಸಿಎಲ್ ಸಿಹಿ ಸುದ್ದಿ ನೀಡಿದ್ದು, ಮೆಟ್ರೋ ರೈಲು ಸೇವೆಯು ಪ್ರತಿ ಸೋಮವಾರ ಬೆಳಗ್ಗೆ 4.15 ರಿಂದಲೇ ಆರಂಭವಾಗಲಿದೆ.
ಪ್ರಯಾಣಿಕರ ಅನುಕೂಲಕ್ಕಾಗಿ ಸೋಮವಾರದಂದು ಮಾತ್ರ ಮುಂಜಾನೆ 5 ಗಂಟೆಯ ಬದಲಾಗಿ ಬೆಳಗ್ಗೆ 4.15ರಿಂದಲೇ ಮೆಟ್ರೋ ರೈಲು ಸಂಚರಿಸಲಿದೆ. ಉಳಿದಂತೆ ಮತ್ತೆಲ್ಲಾ ದಿನಗಳಂದು ಮೆಟ್ರೋ ಸೇವೆಯಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ.
ಮುಂಜಾನೆ 5 ಗಂಟೆ ಬದಲಿಗೆ ಬೆಳಗಿನ ಜಾವ 4.15ಕ್ಕೆ ಪ್ರತಿ ಸೋಮವಾರ ಮೆಟ್ರೋ ಸಂಚಾರ ಆರಂಭಿಸಲಾಗುವುದು. ಪ್ರತಿ ಸೋಮವಾರದ ಮೆಟ್ರೋ ರೈಲು ಸಂಚಾರದಲ್ಲಿ ಮಾತ್ರ ಬದಲಾವಣೆ ಮಾಡಲಾಗಿದೆ. ನಗರಕ್ಕೆ ಹಿಂತಿರುಗುವ ಪ್ರಯಾಣಿಕರ ಅನುಕೂಲಕ್ಕಾಗಿ ಎಲ್ಲಾ ಟರ್ಮಿನಲ್ ಸ್ಟೇಷನ್ ಗಳಿಂದಲೂ ಈ ಸೇವೆ ಇರುತ್ತದೆ. ಈ ಕುರಿತು ಬಿಎಂಆರ್ಸಿಎಲ್ ನಿಂದ ಮಾಧ್ಯಮ ಪ್ರಕಟಣೆ ನೀಡಲಾಗಿದೆ.
ಮೆಟ್ರೋ ರೈಲು ಸೇವೆಯು ಪ್ರತಿ ಸೋಮವಾರ ಬೆಳಗ್ಗೆ 4.15 ರಿಂದಲೇ ಆರಂಭವಾಗಲಿದೆ. ಪ್ರಯಾಣಿಕರ ಅನುಕೂಲಕ್ಕಾಗಿ ಇಂದಿನಿಂದಲೇ ಜಾರಿಗೆ ಬರುವಂತೆ ಸೋಮವಾರದಂದು ಮಾತ್ರ ಮುಂಜಾನೆ 5 ಗಂಟೆಯ ಬದಲಾಗಿ ಬೆಳಗ್ಗೆ 4.15ರಿಂದಲೇ ಮೆಟ್ರೋ ರೈಲು ಸಂಚರಿಸಲಿದೆ. ಉಳಿದಂತೆ ಮತ್ತೆಲ್ಲಾ ದಿನಗಳಂದು ಮೆಟ್ರೋ ಸೇವೆಯಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ.#NammaMetro pic.twitter.com/GiI1LWmCn6
— DIPR Karnataka (@KarnatakaVarthe) January 13, 2025