ಬೆಂಗಳೂರು : ಹೊಸ ವರ್ಷಕ್ಕೆ ‘ಮದ್ಯ’ ಪ್ರಿಯರಿಗೆ ಗುಡ್ ನ್ಯೂಸ್ ಸಿಕ್ಕಿದ್ದು, ಸರ್ಕಾರದಿಂದ ‘ಪ್ರೀಮಿಯಂ ಮದ್ಯ ಮಾರಾಟ ಮಳಿಗೆ’ ಆರಂಭವಾಗಿದೆ.
ಸದ್ಯ ಇದನ್ನು ಬಸವೇಶ್ವರ ನಗರದಲ್ಲಿ ಪ್ರಾರಂಭ ಮಾಡಲಾಗಿದ್ದು, ಮುಂದಿನ ದಿನಗಳಲ್ಲಿ ಬೆಂಗಳೂರಿನ ಹಲವು ಕಡೆ ಸ್ಥಾಪನೆ ಮಾಡಲು ಸರ್ಕಾರ ಚಿಂತನೆ ನಡೆಸಿದೆ. ಸರ್ಕಾರದ ಸಂಸ್ಥೆಯಾದ ಎಂಎಸ್ಐಎಲ್ ರಾಜ್ಯಾದ್ಯಂತ ಮಾರಾಟ ಮಳಿಗೆ ಹೊಂದಿದ್ದು ತನ್ನ ವ್ಯಾಪ್ತಿಯನ್ನು ಮತ್ತಷ್ಟು ವಿಸ್ತರಣೆ ಮಾಡುತ್ತಿದೆ. ಉನ್ನತ ಮಟ್ಟದ ಮದ್ಯ ಮಾರಾಟ ಮಳಿಗೆ ಸ್ಥಾಪಿಸಿ ಕಡಿಮೆ ದರದಲ್ಲಿ ಮದ್ಯ ಪ್ರಿಯರಿಗೆ ಮದ್ಯ ಸಿಗುವ ಹಾಗೆ ಯೋಜನೆ ಹಮ್ಮಿ ಕೊಂಡಿದೆ…. ಬೆಂಗಳೂರಿನ ಬಸವೇಶ್ವರ ನಗರದಲ್ಲಿ ವಿನೂತನ ಹೊಸ ರೂಪದೊಂದಿಗೆ ಹೊಸ ಮಳಿಗೆ ಆರಂಭಗೊಂಡಿದೆ. ಸರ್ಕಾರಿ ಪ್ರೀಮಿಯಂ ಮದ್ಯ ಮಾರಾಟ ಮಳಿಗೆಯನ್ನು ಎಂಎಸ್ ಐಎಲ್ ಎಂ.ಡಿ ಮನೋಜ್ ಕುಮಾರ್ ಉದ್ಘಾಟನೆ ಮಾಡಿದ್ದಾರೆ.
ಕಡಿಮೆ ದರದಲ್ಲಿ ಮದ್ಯ ಮಾರಾಟ ಮಾಡುವ ಮೂಲಕ ಖಾಸಗಿ ಎಣ್ಣೆ ಅಂಡಿಗಳಿಗೆ ಸೆಡ್ಡು ಹೊಡೆದು ಆದಾಯ ಹೆಚ್ಚಿಸಿಕೊಳ್ಳಲು ಸರ್ಕಾರ ತಯಾರಿ ನಡೆಸಿದೆ… ಈ ಮಳಿಗೆಗಳನ್ನು ರಾಜ್ಯವ್ಯಾಪಿ ತಾಲೂಕು ಹಾಗೂ ಜಿಲ್ಲಾ ಕೇಂದ್ರಗಳಲ್ಲಿ ವಿಸ್ತರಣೆ ಮಾಡಲಿದೆ.ಇಲ್ಲಿ ಸಾಮಾನ್ಯ ಬೆಲೆಯಿಂದ ಹಿಡಿದು ಅತ್ಯಂತ ದುಬಾರಿ ಬೆಲೆಯ ಬ್ರಾಂಡೆಡ್ ಮದ್ಯದ ಉತ್ಪನ್ನಗಳು ಸುಲಭವಾಗಿ ಸಿಗಲಿದೆ. ಎಂಎಸ್ಐಎಲ್ ರಾಜ್ಯದಲ್ಲಿ ಒಟ್ಟು 1,029 ಮದ್ಯ ಮಾರಾಟ ಮಳಿಗೆಗಳನ್ನು ನಡೆಸುತ್ತಿದೆ. ಈ ಪೈಕಿ 200 ಮಳಿಗೆಗಳನ್ನು ಬೋಟಿಕ್ ಆಗಿ ಮೇಲ್ದರ್ಜೆಗೇರಿಸಲಾಗುತ್ತಿದೆ. ಎಮ್ ಎಸ್ ಐ ಎಲ್ ಮದ್ಯ ಮಳಿಗೆಗಳಿಗೆ ಕಾರ್ಪೊರೇಟ್ ಟಚ್ ನೀಡಲಾಗುತ್ತಿದೆ. ಎಂಎಸ್ಐಎಲ್ ಅಧ್ಯಕ್ಷರೂ ಆದ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ ಅವರ ಸಲಹೆ ಮೇರೆಗೆ ಹಾಲಿ ಇರುವ ಮದ್ಯ ಮಾರಾಟ ಮಳಿಗೆಗಳನ್ನು ಹೈಟೆಕ್ ರೀತಿಯಲ್ಲಿ ವಿನ್ಯಾಸ ಮಾಡಲು ಆರಂಭಿಸಲಾಗಿದೆ ಎಂದು ತಿಳಿದು ಬಂದಿದೆ.