ಬೆಂಗಳೂರು : ರಾಜ್ಯದ ರೈತರಿಗೆ ಹವಾಮಾನ ಇಲಾಖೆ ನೆಮ್ಮದಿಯ ಸುದ್ದಿಯೊಂದನ್ನು ನೀಡಿದೆ. ರಾಜ್ಯದಲ್ಲಿ ಶೇ. 50 ರಷ್ಟು ಹೆಚ್ಚು ಹಿಂಗಾರು ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.
ಅಕ್ಟೋಬರ್, ನವೆಂಬರ್ ಹಾಗೂ ಡಿಸೆಂಬರ್ ತಿಂಗಳಲ್ಲಿ ರಾಜ್ಯದಲ್ಲಿ ವಾಡಿಕೆ ಪ್ರಮಾಣಕ್ಕಿಂತ ಶೇ. 50 ರಷ್ಟು ಹೆಚ್ಚಿನ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಈ ಮೂಲಕ ರಾಜ್ಯದ ರೈತರಿಗೆ ನೆಮ್ಮದಿಯ ಸುದ್ದಿ ನೀಡಿದೆ.
ಅಕ್ಟೋಬರ್ 15 ರ ಬಳಿಕ ರಾಜ್ಯದಿಂದ ಮುಂಗಾರು ಮಳೆ ಹಿಂಮುಖವಾಗಲಿದೆ. ಬಳಿಕ ಹಿಂಗಾರು ಆರಂಭಗೊಳ್ಳಲಿದೆ. ಹಿಂಗಾರು ಅವಧಿಯ ಒಟ್ಟಾರೆ ಪ್ರಮಾಣಕ್ಕಿಂತ ಶೇ. 50 ರಷ್ಟು ಹೆಚ್ಚಿನ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.