ಮುಂದಿನ ವಾರ ಬೆಳೆಹಾನಿ ಪರಿಹಾರದ ಮೊದಲ ಕಂತು 2000 ರೂ. ಪಾವತಿ ಮಾಡುವುದಾಗಿ ಕಂದಾಯ ಸಚಿವ ಕೃಷ್ಣಭೈರೇಗೌಡ ಹೇಳಿದ್ದಾರೆ.
ಇಂದು ಬೆಳಗಾವಿಯಲ್ಲಿ ವಿಧಾನ ಪರಿಷತ್ ಪ್ರಶ್ನೋತ್ತರ ಕಲಾಪದಲ್ಲಿ ಬಿಜೆಪಿ ಸದಸ್ಯ ರವಿಕುಮಾರ್ ಕೇಳಿದಂತ ಪ್ರಶ್ನೆಗೆ ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರು ಉತ್ತರಿಸಿದರು.
ಮುಂಗಾರು ಅವಧಿಯಲ್ಲಿ ಸೆಪ್ಟೆಂಬರ್.13ರಂದು ರಾಜ್ಯದಲ್ಲಿ ಬರಗಾಲ ಘೋಷಣೆ ಮಾಡಲಾಗಿತ್ತು .ರಾಜ್ಯದ ರೈತರಿಗೆ ಬರ ಪರಿಹಾರದ ಮೊದಲ ಕಂತಿನ ಹಣ 2000 ಮುಂದಿನ ವಾರ ರೈತರ ಖಾತೆಗೆ ಡಿಬಿಟಿ ಮೂಲಕ ಜಮಾ ಆಗಲಿದೆ. ದೇಶದ 12 ರಾಜ್ಯಗಳಲ್ಲಿ ಮುಂಗಾರು ಅವಧಿಯ ಬರಗಾಲವಿದೆ. 18 ರಾಜ್ಯಗಳಲ್ಲಿ ಹಿಂಗಾರು ಅವಧಿಯ ಬರಗಾಲ ಆವರಿಸಿದೆ.
ಸೆ.22ರಂದು ಕೇಂದ್ರ ಸರ್ಕಾರಕ್ಕೆ ಬರ ಪರಿಹಾರ ಬಿಡುಗಡೆಗೆ ಕೋರಲಾಗಿದೆ. ಮೇವಿನ ಕೊರತೆಯಾಗದಂತೆ 7 ಲಕ್ಷ ಭಿತ್ತನೆ ಬೀಜಗದ ಕಿಟ್ ಗಳನ್ನು ಬರ ಪೀಡಿತ ತಾಲ್ಲೂಕುಗಳಲ್ಲಿ ರೈತರಿಗೆ ಕೊಟ್ಟಿದ್ದೇವೆ ಎಂದರು. ಸೆ.22ರಂದು ಕೇಂದ್ರ ಸರ್ಕಾರಕ್ಕೆ ಬರ ಪರಿಹಾರ ಬಿಡುಗಡೆಗೆ ಕೋರಲಾಗಿದೆ. ಮೇವಿನ ಕೊರತೆಯಾಗದಂತೆ 7 ಲಕ್ಷ ಭಿತ್ತನೆ ಬೀಜದ ಕಿಟ್ ಗಳನ್ನು ಬರ ಪೀಡಿತ ತಾಲ್ಲೂಕುಗಳಲ್ಲಿ ರೈತರಿಗೆ ನೀಡಲಾಗಿದೆ ಎಂದು ಮಾಹಿತಿ ನೀಡಿದರು.