ಬೆಂಗಳೂರು : ಮುಜರಾಯಿ ದೇಗುಲದ ಅರ್ಚಕರ ಕುಟುಂಬಕ್ಕೆ ಸರ್ಕಾರ ಸಿಹಿಸುದ್ದಿ ನೀಡಿದ್ದು, ಉಚಿತ ಕಾಶಿಯಾತ್ರೆ ಭಾಗ್ಯ ಕಲ್ಪಿಸಿದೆ.
ಹೌದು, ಮುಜರಾಯಿ ಇಲಾಖಾ ವ್ಯಾಪ್ತಿಯ ದೇವಾಲಯಗಳ ಅರ್ಚಕರಿಗೆ ಹಾಗೂ ಅವರ ಕುಟುಂಬದವರಿಗೂ ಉಚಿತ ಕಾಶಿಯಾತ್ರೆಗೆ ಸರ್ಕಾರ ಒಪ್ಪಿಗೆ ನೀಡಿದೆ.
ಕರ್ನಾಟಕ ಭಾರತ್ ಗೌರವ್ ಯೋಜನೆಯಡಿ ಈಗಾಗಲೇ ಮುಜರಾಯಿ ಇಲಾಖೆ ಅರ್ಚಕರಿಗೆ ಉಚಿತ ಕಾಶಿಯಾತ್ರೆ ಭಾಗ್ಯ ಕಲ್ಪಿಸಿದೆ. ಇನ್ನುಮುಂದೆ ಅರ್ಚಕರ ಜೊತೆ ಅರ್ಚಕರ ಮಕ್ಕಳು, ತಂದೆ., ತಾಯಿ. ಹೆಂಡತಿ, ಮಕ್ಕಳು ಕೂಡ ಈ ಸೌಲಭ್ಯ ಪಡೆಯಲಿದ್ದಾರೆ. ಪ್ರತಿ ಟ್ರಿಪ್ ನಲ್ಲಿ 60 ಜನರಂತೆ, ವರ್ಷಕ್ಕೆ 1200 ಅರ್ಚಕರು ನೌಕರರು ಯಾತ್ರೆ ಮಾಡಬಹುದಾಗಿದೆ.