alex Certify ‘ರಾಜ್ಯ ಸರ್ಕಾರ’ದಿಂದ ವಿಕಲಚೇತನರಿಗೆ ಗುಡ್ ನ್ಯೂಸ್ : ವಿವಿಧ ಯೋಜನೆಗಳಡಿ ‘ಸೌಲಭ್ಯ’ ಪಡೆಯಲು ಅರ್ಜಿ ಆಹ್ವಾನ.! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

‘ರಾಜ್ಯ ಸರ್ಕಾರ’ದಿಂದ ವಿಕಲಚೇತನರಿಗೆ ಗುಡ್ ನ್ಯೂಸ್ : ವಿವಿಧ ಯೋಜನೆಗಳಡಿ ‘ಸೌಲಭ್ಯ’ ಪಡೆಯಲು ಅರ್ಜಿ ಆಹ್ವಾನ.!

ಬೆಂಗಳೂರು : ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ವತಿಯಿಂದ 03 ಫಲಾನುಭವಿ ಆಧಾರಿತ ಯೋಜನೆಗಳಿಗೆ ವಿಕಲಚೇತನರಿಂದ ಅರ್ಜಿ ಆಹ್ವಾನಿಸಲಾಗಿದೆ.

ವಿಕಲಚೇತನ ವ್ಯಕ್ತಿಗಳೊಡನೆ ವಿವಾಹ ಏರ್ಪಡುವ ಪ್ರಕರಣಗಳಲ್ಲಿ, ವಿಕಲಚೇತನ ವ್ಯಕ್ತಿಯ ಹೆಸರಿನಲ್ಲಿ 50,000 ರೂಗಳನ್ನು ಹೂಡಿಕೆಯ ರೂಪದಲ್ಲಿನ ವಿವಾಹ ಪ್ರೋತ್ಸಾಹಧನ ಯೋಜನೆ, ವಿಕಲಚೇತನ ವಿದ್ಯಾರ್ಥಿಗಳಿಗೆ ಶುಲ್ಕ ಮರುಪಾವತಿ ಯೋಜನೆ, ಬುದ್ಧಿಮಾಂದ್ಯರು, ಸೆರಬ್ರಲ್ ಪಾಲ್ಸಿ, ಆಟಿಸಂ ಮತ್ತು ಬಹುವಿಧ ಅಂಗವಿಕಲತೆಗೆ ಒಳಗಾದ ಬಡತನ ರೇಖೆಗಿಂತ ಕೆಳಗಿರುವ ಕುಟುಂಬದ ವಿಕಲಚೇತನರಿಗೆ “ನಿರಾಮಯ” ಆರೋಗ್ಯ ವಿಮಾ ಯೋಜನೆಗಳ ಸೌಲಭ್ಯ ಪಡೆಯಬಹುದಾಗಿದೆ.

ಬೆಂಗಳೂರು ಗ್ರಾಮಾಂತರ ಜಿಲ್ಲಾ ವ್ಯಾಪ್ತಿಗೆ ಬರುವ ತಾಲ್ಲೂಕು ಪಂಚಾಯತಿಯಲ್ಲಿರುವ ಎಂ.ಆರ್.ಡಬ್ಲ್ಯೂ, ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿರುವ ವಿ.ಆರ್.ಡಬ್ಲ್ಯೂ ಹಾಗೂ ನಗರಸಭೆ/ಪುರಸಭೆ/ಪಟ್ಟಣ ಪಂಚಾಯತಿ ವ್ಯಾಪ್ತಿಯಲ್ಲಿರುವ ಯು.ಆರ್.ಡಬ್ಲ್ಯೂ ಗಳಿಂದ ನಿಗಧಿತ ಅರ್ಜಿ ಪಡೆದು ಅಗತ್ಯ ದಾಖಲಾತಿಗಳೊಂದಿಗೆ ಇದೇ ನವ್ಹೆಂಬರ್ 20 ರೊಳಗೆ ಅರ್ಜಿ ಸಲ್ಲಿಸುವ ಮೂಲಕ ಸೌಲಭ್ಯಗಳನ್ನು ಪಡೆಯಬಹುದಾಗಿದೆ.
ಹೆಚ್ಚಿನ ಮಾಹಿತಿಗಾಗಿ: ತಾಲ್ಲೂಕು ಮಟ್ಟದ ವಿಕಲಚೇತನರ ನೋಡಲ್ ಅಧಿಕಾರಿಗಳನ್ನು ಮತ್ತು ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ, ಕೊಠಡಿ ಸಂಖ್ಯೆ-03 ಜಿಲ್ಲಾಡಳಿತ ಭವನ, ಬೀರಸಂದ್ರ ಗ್ರಾಮ ಕುಂದಾಣ ಹೋಬಳಿ ದೇವನಹಳ್ಳಿ ತಾಲ್ಲೂಕು ಬೆಂಗಳೂರು ಗ್ರಾಮಾಂತರ ಜಿಲ್ಲೆ ದೂರವಾಣಿ ಸಂಖ್ಯೆ: 080-29787441 ಮೂಲಕ ಸಂಪರ್ಕಿಸಬಹುದು ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾ ಅಂಗವಿಕಲರ ಕಲ್ಯಾಣ ಅಧಿಕಾರಿ ಜಗದೀಶ ಎನ್.ಎಂ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

 

Related News

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...