ಬೆಂಗಳೂರು : ರಾಜ್ಯ ಸರ್ಕಾರ ಬ್ರಾಹ್ಮಣ ಸಮುದಾಯಕ್ಕೆ ಈಗಾಗಲೇ ಹಲವು ಯೋಜನೆಗಳನ್ನು ಘೋಷಣೆ ಮಾಡಿದ್ದು, ಬ್ರಾಹ್ಮಣ ಸಮುದಾಯದ ಜನರು ಯೋಜನೆಗಳ ಸದುಪಯೋಗ ಪಡೆಯಬಹುದಾಗಿದೆ. ಈ ಬಗ್ಗೆ ಸರ್ಕಾರ ಪ್ರಕಟ ಹೊರಡಿಸಿದೆ.
ಬ್ರಾಹ್ಮಣ ಅಭಿವೃದ್ಧಿ ಮ೦ಡಳಿಯ ಮೂಲಕ ಈವರೆಗೆ ಕಾಂಗ್ರೆಸ್ ಸರ್ಕಾರ ರೂಪಿಸಿರುವ ಪ್ರಮುಖ ಯೋಜನೆ
ಅನ್ನದಾತ ಯೋಜನೆ
• ಕೃಷಿ ಆಧಾರಿತ ಉದ್ಯಮಗಳನ್ನು ಸ್ಥಾಪಿಸಲು ಕಡಿಮೆ ಬಡ್ಡಿ ದರಗಳಲ್ಲಿ ಅರ್ಹ ಬ್ರಾಹ್ಮಣ ರೈತರಿಗೆ ಸಾಲ ಸೌಲಭ್ಯ
• ವ್ಯವಸಾಯಕ್ಕಾಗಿ ತೆರೆದ ಬಾವಿ ಅಥವಾ ಬೋರ್ವೆಲ್ಗಳನ್ನು ಕೊರೆಯಲು ಸಹಾಯ ಧನ
• ಹೈನುಗಾರಿಕೆ ಹಾಗೂ ಕೃಷಿ ಆಧಾರಿತ ಚಟುವಟಿಕೆಗಳಿಗೆ ಸಹಾಯಧನ ಮತ್ತು ತರಬೇತಿ
ಬ್ರಾಹ್ಮಣ ಅಭಿವೃದ್ಧಿ ಮ೦ಡಳಿಯ ಮೂಲಕ ಈವರೆಗೆ ಕಾಂಗ್ರೆಸ್ ಸರ್ಕಾರ ರೂಪಿಸಿರುವ ಪ್ರಮುಖ ಯೋಜನೆಗಳು
ಆಚಾರ್ಯತ್ರಯ ವೇದ ಶಿಷ್ಯವೇತನ ಯೋಜನೆ
ಬ್ರಾಹ್ಮಣ ಸಮುದಾಯದ ವೇದ ವಿದ್ಯಾರ್ಥಿಗಳಿಗೆ | ಆಗಮ ವಿದ್ಯಾರ್ಥಿಗಳಿಗೆ /ಆಗಮಿಕರಿಗೆ ಮತ್ತು ಸಂಸ್ಕೃತ ವಿದ್ಯಾರ್ಥಿಗಳಿಗೆ / ವಿದ್ವಾಂಸರಿಗೆ ಶಿಷ್ಯವೇತನ
ವಿಶ್ವಾಮಿತ್ರ ಪ್ರತಿಭಾ ಪುರಸ್ಕಾರ ಯೋಜನೆ
ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾದ ಬ್ರಾಹ್ಮಣ ವಿದ್ಯಾರ್ಥಿಗಳಿಗೆ ಹಾಗೂ ವಿವಿಧ ಕ್ಷೇತ್ರಗಳ ಬ್ರಾಹ್ಮಣ ಸಾಧಕರಿಗೆ ಪ್ರತಿಭಾ ಪುರಸ್ಕಾರ
ಬ್ರಾಹ್ಮಣ ಯುವತಿಯರಿಗೆ 3 ಲಕ್ಷ ಪ್ರೋತ್ಸಾಹಧನ
ಅರ್ಚಕ, ಪುರೋಹಿತರನ್ನು ಮದುವೆಯಾಗುವ ಬ್ರಾಹ್ಮಣ ಯುವತಿಯರಿಗೆ 3 ಲಕ್ಷ ಪ್ರೋತ್ಸಾಹಧನ ನೀಡಲಾಗುತ್ತದೆ ಎಂದು ರಾಜ್ಯ ಸರ್ಕಾರ ಪ್ರಕಟಣೆ ಹೊರಡಿಸಿದೆ.
ಬ್ರಾಹ್ಮಣ ಅಭಿವೃದ್ಧಿ ಮ೦ಡಳಿಯ ಮೂಲಕ ಈವರೆಗೆ ಕಾಂಗ್ರೆಸ್ ಸರ್ಕಾರ ರೂಪಿಸಿರುವ ಪ್ರಮುಖ ಯೋಜನೆಗಳು ಇದಾಗಿದೆ. ಅರುಂಧತಿ ಯೋಜನೆಯಡಿ ಬಡ ಬ್ರಾಹ್ಮಣ ಹುಡುಗಿಯ ಮದುವೆ ಸ೦ದರ್ಭದಲ್ಲಿ ₹25 ಸಾವಿರ ಪ್ರೋತ್ಸಾಹ ಧನ ಹಾಗೂ ಮೈತ್ರೇಯಿ ಯೋಜನೆಯಡಿ ಅರ್ಚಕರು ಮತ್ತು ಪುರೋಹಿತರನ್ನು ವಿವಾಹವಾಗುವ ಬ್ರಾಹ್ಮಣ ಯುವತಿಯರಿಗೆ ವರ್ಷಕ್ಕೆ ₹1 ಲಕ್ಷದಂತೆ ಒಟ್ಟು 3 ಲಕ್ಷ ಪ್ರೋತ್ಸಾಹ ಧನ ನೀಡಲಾಗುತ್ತದೆ ಎಂದು ಸರ್ಕಾರ ಪ್ರಕಟಣೆಯಲ್ಲಿ ತಿಳಿಸಿದೆ.ಅರ್ಚಕರು ಹಾಗೂ ಪುರೋಹಿತರನ್ನು ವಿವಾಹ ಆಗಲು ಯುವತಿಯರು ಹಿಂದೇಟು ಹಾಕುತ್ತಿರುವ ಹಿನ್ನೆಲೆಯಲ್ಲಿಯೂ ಮೈತ್ರಿ ಯೋಜನೆ ಜಾರಿಗೆ ತರಲಾಗಿದೆ.
ಬ್ರಾಹ್ಮಣ ಅಭಿವೃದ್ಧಿ ಮಂಡಳಿಯ ಮೂಲಕ ಬ್ರಾಹ್ಮಣರ ಶ್ರೇಯೋಭಿವೃದ್ಧಿಗಾಗಿ ಕಾಂಗ್ರೆಸ್ ಸರ್ಕಾರ ರೂಪಿಸಿರುವ ಪ್ರಮುಖ ಯೋಜನೆಗಳು#DevelopSchemes #KarnatakaGovt pic.twitter.com/7Ow2gFMcE8
— DIPR Karnataka (@KarnatakaVarthe) January 3, 2025