ಬೆಂಗಳೂರು: ತಾಂತ್ರಿಕ ಶಿಕ್ಷಣ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಅತಿಥಿ ಉಪನ್ಯಾಸಕರುಗಳಿಗೆ ರಾಜ್ಯ ಸರ್ಕಾರ ಗುಡ್ ನ್ಯೂಸ್ ನೀಡಿದ್ದು, ಗೌರವಧನ ಹೆಚ್ಚಿಸಿ ಹಾಗೂ ವಿಮಾ ಸೌಲಭ್ಯ ಜಾರಿಗೊಳಿಸಿ ಆದೇಶಿಸಿದೆ.
ಈ ಕುರಿತಂತೆ ಉನ್ನತ ಶಿಕ್ಷಣ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿಗಳು ಆದೇಶ ಹೊರಡಿಸಿದ್ದುಪ್ರಸ್ತುತ, ಸರ್ಕಾರದ ಪತ್ರ ಸಂಖ್ಯೆ: ಇಡಿ 174 ಡಿಟಿಇ 2020, ದಿನಾಂಕ:22.12.2020ರ ಯ ಇಂಜಿನಿಯರಿಂಗ್ ಕಾಲೇಜುಗಳಲ್ಲಿನ ಅರೆಕಾಲಿಕ ಉಪನ್ಯಾಸಕರುಗಳಿಗೆ ಗರಿಷ್ಠ ಮಾಸಿಕ ಕಾರ್ಯಭಾರ 32 ಗಂಟೆಗೆ ಗರಿಷ್ಠ ಕಾರ್ಯಭಾರಕ್ಕೆ ಮಾಸಿಕ ಗೌರವಧನ ರೂ.15,000/- ಗಳನ್ನು ಹಾಗೂ ಪಾಲಿಟೆಕ್ನಿಕ್ ಮತ್ತು ಸರ್ಕಾರಿ ಕಿರಿಯ ತಾಂತ್ರಿಕ ಶಾಲೆಗಳಲ್ಲಿನ ಅರೆಕಾಲಿಕ ಉಪನ್ಯಾಸಕರುಗಳಿಗೆ ಗರಿಷ್ಠ ಮಾಸಿಕ ಕಾರ್ಯಭಾರ 36 ಗಂಟೆಗೆ ಗರಿಷ್ಠ ಕಾರ್ಯಭಾರಕ್ಕೆ ಮಾಸಿಕ ಗೌರವಧನ ರೂ.12,500/-ಗಳನ್ನು ಪಾವತಿಸಲಾಗುತ್ತಿದ್ದು ಮುಂದುವರೆದು, ಪ್ರಸ್ತುತ ಸಲ್ಲಿಸಿರುವ ಸೇವಾ ಅವಧಿಗೆ ಅನುಗುಣವಾಗಿ ಈ ಕೆಳಕಂಡಂತೆ ಗೌರವಧನವನ್ನು ಹೆಚ್ಚಿಸಿ ಆದೇಶಿಸಲಾಗಿದೆ.
ಪ್ರಸ್ತುತ ಸಲ್ಲಿಸುತ್ತಿರುವ ಸೇವಾ ಅವಧಿಗೆ ಅನುಗುಣವಾಗಿ ಗೌರವಧನವನ್ನು 5 ವರ್ಷಕ್ಕಿಂತ ಕಡಿಮೆ ಸೇವಾವಧಿಗೆ ರೂ.5,000, 5 ವರ್ಷದಿಂದ 10 ವರ್ಷಗಳ ಸೇವಾವಧಿಗೆ 6000, 10 ವರ್ಷದಿಂದ 15 ವರ್ಷಗಳ ಸೇವಾವಧಿಗೆ ರೂ.7000 ಹಾಗೂ 15 ವರ್ಷ ಮೇಲ್ಪಟ್ಟು ಸೇವಾವಧಿಗೆ ರೂ.8000 ಹೆಚ್ಚಿಸಿ ಆದೇಶ ಹೊರಡಿಸಲಾಗಿದೆ. ಹಾಗೂ 60 ವರ್ಷ ಮೀರಿದಂತ ಅತಿಥಿ ಉಪನ್ಯಾಸಕರುಗಳಿಗೆ ಭದ್ರತಾ ರೂಪದಲ್ಲಿ ವಾರ್ಷಿಕ ರೂ.50,000ದಂತೆ ಗರಿಷ್ಠ 5 ಲಕ್ಷಗಳ ಮೊತ್ತದ ಇಡಿಗಂಟಿನ ಸೌಲಭ್ಯ ಮಂಜೂರು ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.