![](https://kannadadunia.com/wp-content/uploads/2020/12/Vidhan-Soudha-1.jpg)
ಬೆಂಗಳೂರು : ಖಾಸಗಿ ಅನುದಾನಿತ ಶಾಲೆಗಳಲ್ಲಿ ದಿನಾಂಕ: 01.04.2006 ರ ಪೂರ್ವದಲ್ಲಿ ನೇಮಕಾತಿಯಾಗಿ ನಂತರ ಅನುದಾನಕ್ಕೆ ಒಳಪಟ್ಟ ನೌಕರರಿಗೆ ಹಳೆಯ ನಿಶ್ಚಿತ ಪಿಂಚಣಿ ಯೋಜನಾ ವ್ಯಾಪ್ತಿಗೆ ಒಳಪಡಿಸುವ ಕುರಿತು ರಾಜ್ಯ ಸರ್ಕಾರ ಮಹತ್ವದ ಆದೇಶ ಹೊರಡಿಸಿದೆ.
ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ ಉಲ್ಲೇಖಿತ ಸರ್ಕಾರದ ಪತ್ರದಲ್ಲಿ ಖಾಸಗಿ ಅನುದಾನಿತ ಶಾಲೆಗಳಲ್ಲಿ ದಿನಾಂಕ: 01.04.2006 ರ ಪೂರ್ವದಲ್ಲಿ ನೇಮಕಾತಿಯಾಗಿ ನಂತರ ಅನುದಾನಕ್ಕೆ ಒಳಪಟ್ಟ ನೌಕರರಿಗೆ ಹಳೆಯ ನಿಶ್ಚಿತ ಪಿಂಚಣಿ ಯೋಜನಾ ವ್ಯಾಪ್ತಿಗೆ ಒಳಪಡಿಸುವ ಕುರಿತು ಪರಿಶೀಲಿಸಲು ಲಗತ್ತಿಸಿರುವ ಅನುಬಂಧದಲ್ಲಿ ಮಾಹಿತಿಯನ್ನು ಭರ್ತಿ ಮಾಡಿ ಕೂಡಲೇ ಸರ್ಕಾರಕ್ಕೆ ಸಲ್ಲಿಸುವಂತೆ ತಿಳಿಸಲಾಗಿದೆ.
ಉಲ್ಲೇಖಿತ ಸರ್ಕಾರದ ಪತ್ರಗಳು ಮತ್ತು ಅದರೊಂದಿಗಿನ ಅನುಬಂಧವನ್ನು ಈ ಪತ್ರದೊಂದಿಗೆ ಲಗತ್ತಿಸಿ ಕಳುಹಿಸುತ್ತಾ, ಸರ್ಕಾರದ ವತ್ರದಲ್ಲಿ ತಿಳಿಸಿರುವಂತೆ ದಿನಾಂಕ: 01.04.2006 ರ ಪೂರ್ವದಲ್ಲಿ ನೇಮಕಾತಿಯಾಗಿ ನಂತರ ಅನುದಾನಕ್ಕೆ ಒಳಪಟ್ಟ ಶಿಕ್ಷಕರು / ಸಿಬ್ಬಂದಿಗಳ ನಿವೃತ್ತಿ ನಂತರ ನಿಗಧಿಪಡಿಸಬೇಕಾದ ಪಿಂಚಣಿ ಲೆಕ್ಕಾಚಾರ ಮಾಡಿ ಪ್ರಾಥಮಿಕ / ಪ್ರೌಢಶಾಲೆಗಳ ಮಾಹಿತಿಯನ್ನು ಪ್ರತ್ಯೇಕವಾಗಿ ಅನುಬಂಧದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳಿಂದ ಪಡೆದು ಜಿಲ್ಲಾವಾರು ಕ್ರೋಢೀಕರಿಸಿ ಹಾಗೂ ದೃಢೀಕರಿಸಿ ಈ ಕಛೇರಿಯ ಇ-ಮೇಲ್ ವಿಳಾಸ: giaest2@gmail.com ಗೆ ಕಳುಹಿಸಲು ತಿಳಿಸಿದೆ. ಮತ್ತು ಒಂದು ವೇಳೆ ಈ ಮಾಹಿತಿಯಲ್ಲಿ ಯಾವುದೇ ಶಿಕ್ಷಕರು / ಸಿಬ್ಬಂದಿಗಳ ಮಾಹಿತಿ ಬಿಟ್ಟು ಹೋಗಿದ್ದಲ್ಲಿ ಸಂಬಂಧಿಸಿದ ಜಿಲ್ಲಾ ಉಪನಿರ್ದೇಶಕರುಗಳೇ ನೇರ ಹೊಣೆಗಾರರೆಂದು ತಿಳಿಸಿದೆ.
![](https://kannadadunia.com/wp-content/uploads/2024/01/WhatsApp-Image-2024-01-26-at-11.59.27-AM-1.jpeg)
![](https://kannadadunia.com/wp-content/uploads/2024/01/WhatsApp-Image-2024-01-26-at-11.59.27-AM.jpeg)