
ಆದಾಯ ತೆರಿಗೆ ರಿಟರ್ನ್ ಸಲ್ಲಿಸುವವರಿಗೆ ಖುಷಿ ಸುದ್ದಿಯೊಂದಿದೆ. ಐಟಿ ರಿಟರ್ನ್ಸ್ ಸಲ್ಲಿಸುವುದು ಇನ್ಮುಂದೆ ಮತ್ತಷ್ಟು ಸುಲಭವಾಗಲಿದೆ. ಇಂಡಿಯಾ ಪೋಸ್ಟ್ ಈಗ ಹೊಸ ಸೇವೆಯನ್ನು ಶುರು ಮಾಡಿದೆ.
ಅಂಚೆ ಕಚೇರಿ ಸೇವಾ ಕೇಂದ್ರದ ಕೌಂಟರ್‌ನಲ್ಲಿ ಐಟಿಆರ್ ಸಲ್ಲಿಸುವ ಸೌಲಭ್ಯವನ್ನು ನೀಡುತ್ತಿದೆ. ಇಂಡಿಯಾ ಪೋಸ್ಟ್ ಈಗಾಗಲೇ ಈ ಬಗ್ಗೆ ಅಧಿಕೃತ ಮಾಹಿತಿ ನೀಡಿದೆ. ಸಿಎಸ್ಸಿ ಕೌಂಟರ್ ನಲ್ಲಿ ಐಟಿಆರ್ ಸಲ್ಲಿಸುವ ಸೌಲಭ್ಯ ನೀಡಲಾಗ್ತಿದೆ ಎಂದು ಇಂಡಿಯನ್ ಪೋಸ್ಟ್ ಹೇಳಿದೆ. ಇದ್ರಿಂದ ಲಕ್ಷಾಂತರ ತೆರಿಗೆದಾರರಿಗೆ ನೆಮ್ಮದಿಯಾಗಿದೆ. ತೆರಿಗೆದಾರರು ಐಟಿಆರ್ ಫೈಲ್ ಮಾಡಲು ಹೆಚ್ಚು ದೂರ ಹೋಗ್ಬೇಕಿಲ್ಲ. ಹತ್ತಿರದ ಅಂಚೆ ಕಚೇರಿ ಸಿಎಸ್ಸಿ ಕೌಂಟರ್ ನಲ್ಲಿ ಸುಲಭವಾಗಿ ಫೈಲ್ ಮಾಡಬಹುದು.
ಅಂಚೆ ಕಚೇರಿಯ ಸಿಎಸ್ಸಿ ಕೌಂಟರ್, ಅಂಚೆ ಬ್ಯಾಂಕಿಂಗ್, ವಿಮೆಗೆ ಸಂಬಂಧಿಸಿದಂತೆ ಅನೇಕ ಸೇವೆಗಳನ್ನು ನೀಡುತ್ತದೆ. ಸರ್ಕಾರದ ವಿವಿಧ ಯೋಜನೆಗಳ ಬಗ್ಗೆ ಇಲ್ಲಿ ಮಾಹಿತಿ ಪಡೆಯಬಹುದು. ಹಾಗೆ ಯೋಜನೆಗಳ ಲಾಭ ಪಡೆಯಬಹುದು. ಭಾರತ ಸರ್ಕಾರ, ಡಿಜಿಟಲ್ ಇಂಡಿಯಾ ಕಾರ್ಯಕ್ರಮದಡಿ ವಿವಿಧ ಇ-ಸೇವೆಯನ್ನು ಸಿಎಸ್ಸಿ ಕೌಂಟರ್ ನಲ್ಲಿ ನೀಡ್ತಿದೆ.