ಬೆಂಗಳೂರು : ಪ್ರಸಕ್ತ ಸಾಲಿನ ಪ್ರಥಮ ಹಾಗೂ ದ್ವಿತೀಯ ಪಿಯುಸಿ ತರಗತಿಗಳ ದಾಖಲಾತಿಗೆ ನೀಡಲಾಗಿದ್ದ ದಂಡ ಶುಲ್ಕ ರಹಿತ ಕಾಲಾವಕಾಶವನ್ನು ಪದವಿ ಪೂರ್ವ ಶಿಕ್ಷಣ ಇಲಾಖೆ ಜೂನ್ 30ರವರೆಗೆ ವಿಸ್ತರಿಸಿದೆ.
ಯಾವುದೇ ದಂಡವಿಲ್ಲದೇ ಪ್ರವೇಶ ಪಡೆಯಲು ಜೂನ್ 30, ದಂಡ ಶುಲ್ಕ ರಹಿತ ಕಾಲಾವಕಾಶವನ್ನು ಜು.10ರವರೆಗೆ ಹಾಗೂ ದಂಡ ಶುಲ್ಕ ಪಾವತಿಸಿ ಜು.20ರವರೆಗೆ ದಾಖಲಾತಿ ಪಡೆಯಲು ಅವಕಾಶ ನೀಡಿದೆ.ಈ ಮೊದಲು ದಂಡ ಶುಲ್ಕವಿಲ್ಲದೆ ಪ್ರವೇಶ ಪಡೆಯಲು ಜೂ.15 ಕೊನೆಯ ದಿನವಾಗಿತ್ತು. ದಂಡ ಶುಲ್ಕದೊಂದಿಗೆ ದಾಖಲಾತಿಗೆ ಜೂ.22ರವರೆಗೆ ಅವಕಾಶ ನೀಡಲಾಗಿತ್ತು. ವಿದ್ಯಾರ್ಥಿಗಳು ಹಾಗೂ ಪೋಷಕರ ಮನವಿ ಮೇರೆಗೆ ದಂಡ ಶುಲ್ಕ ರಹಿತ ಕಾಲಾವಕಾಶವನ್ನು ಪದವಿ ಪೂರ್ವ ಶಿಕ್ಷಣ ಇಲಾಖೆ ಜೂನ್ 30ರವರೆಗೆ ವಿಸ್ತರಿಸಿದೆ.
ಜೂ.30ರ ನಂತರ ಜು.10ರವರೆಗೆ ಪ್ರವೇಶ ಪಡೆಯುವವರಿಗೆ 670 ರು. ದಂಡ ಶುಲ್ಕದೊಂದಿಗೆ ಹಾಗೂ ಜು.10ರ ನಂತರ ಜು.20ರವರೆಗೆ ಪ್ರವೇಶ ಪಡೆಯುವವರಿಗೆ 2890 ರು. ವಿಶೇಷ ದಂಡ ಶುಲ್ಕದೊಂದಿಗೆ ದಾಖಲಾತಿ ಪಡೆಯಲು ಅವಕಾಶ ನೀಡಿ ಪದವಿ ಪೂರ್ವ ಶಿಕ್ಷಣ ಇಲಾಖೆ ಸುತ್ತೋಲೆ ಹೊರಡಿಸಿದೆ.