alex Certify GOOD NEWS : 7ನೇ ವೇತನ ಆಯೋಗ ಜಾರಿಗೊಳಿಸಿ ರಾಜ್ಯ ಸರ್ಕಾರ ಅಧಿಕೃತ ಆದೇಶ..! ಸಂಬಳದ ಬಗ್ಗೆ ಇಲ್ಲಿದೆ ಡೀಟೇಲ್ಸ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

GOOD NEWS : 7ನೇ ವೇತನ ಆಯೋಗ ಜಾರಿಗೊಳಿಸಿ ರಾಜ್ಯ ಸರ್ಕಾರ ಅಧಿಕೃತ ಆದೇಶ..! ಸಂಬಳದ ಬಗ್ಗೆ ಇಲ್ಲಿದೆ ಡೀಟೇಲ್ಸ್

ಬೆಂಗಳೂರು : ರಾಜ್ಯ ಸರ್ಕಾರಿ ನೌಕರರಿಗೆ ಗುಡ್ ನ್ಯೂಸ್ ಸಿಕ್ಕಿದ್ದು, 7ನೇ ವೇತನ ಆಯೋಗ ಜಾರಿಗೊಳಿಸಿ ಅಧಿಕೃತ ಆದೇಶ ಹೊರಡಿಸಿದೆ.

ಈ ಕುರಿತು ಸರ್ಕಾರ ಆದೇಶ ಹೊರಡಿಸಿದ್ದು, ಮುಖ್ಯ ವೇತನ ಶ್ರೇಣಿ ಮತ್ತು ಸ್ಥಾಯಿ ವೇತನ ಶ್ರೇಣಿಗಳ ಪರಿಷ್ಕರಣೆ ಬಗ್ಗೆ 7ನೇ ರಾಜ್ಯ ವೇತನ ಆಯೋಗದ ಶಿಫಾರಸ್ಸುಗಳನ್ನು ರಾಜ್ಯ ಸರ್ಕಾರವು ಅಂಗೀಕರಿಸಿರುತ್ತದೆ. ಅದರಂತೆ, 7ನೇ ರಾಜ್ಯ ವೇತನ ಆಯೋಗವು ಶಿಫಾರಸ್ಸು ಮಾಡಿರುವ ಮುಖ್ಯ ವೇತನ ಶ್ರೇಣಿ ಮತ್ತು ಪರಿಷ್ಕೃತ 25 ಸ್ಥಾಯಿ ವೇತನ ಶ್ರೇಣಿಗಳನ್ನು ದಿನಾಂಕ: 01.07.2022ರಿಂದ ಜಾರಿಗೆ ಬರುವಂತೆ ಅನುಷ್ಠಾನಗೊಳಿಸಲು ಸರ್ಕಾರವು ಹರ್ಷಿಸುತ್ತದೆ.ಪರಿಷ್ಕೃತ ವೇತನ ಶ್ರೇಣಿಗಳಲ್ಲಿ ಈ ಕೆಳಕಂಡಂತೆ ವೇತನವನ್ನು ನಿಗದಿಪಡಿಸತಕ್ಕದ್ದು ಎಂದು ಹೇಳಿದೆ.

(ಅ) ದಿನಾಂಕ: 01.07.2022 ರಲ್ಲಿದ್ದಂತೆ ಮೂಲ ವೇತನ.
(ಆ) ದಿನಾಂಕ: 01.07.2022 ರಲ್ಲಿದ್ದಂತಹ ಬೆಲೆ ಸೂಚ್ಯಂಕ ಹಂತ 361.704 ಕ್ಕೆ ಸಂವಾದಿಯಾಗಿ ಲಭ್ಯವಿದ್ದ 31% ತುಟ್ಟಿ ಭತ್ಯೆ.
(ಇ) ದಿನಾಂಕ: 01.07.2022 ರಲ್ಲಿ ಲಭ್ಯವಿದ್ದ ಮೂಲ ವೇತನದ ಮೇಲೆ 27.50% ರಷ್ಟು ಫಿಟ್ಮೆಂಟ್ ಸೌಲಭ್ಯ.
(ಈ) ಮೇಲಿನ (ಅ), (ಆ), (ಇ) ಯನ್ನು ಒಟ್ಟುಗೂಡಿಸಿ ಲೆಕ್ಕ ಹಾಕಿದಾಗ ಬರುವ ಮೊತ್ತದ ನಂತರದ ಹಂತದಲ್ಲಿ ವೇತನವನ್ನು ಪರಿಷ್ಕೃತ ವೇತನ ಶ್ರೇಣಿಯಲ್ಲಿ ನಿಗದಿಪಡಿಸುವುದು.

ಪರಿಷ್ಕೃತ ವೇತನ ಶ್ರೇಣಿಗಳ ಅನುಷ್ಠಾನದ ಆರ್ಥಿಕ ಸೌಲಭ್ಯವು 1ನೇ ಆಗಸ್ಟ್ 2024ರಿಂದ ಪ್ರಾಪ್ತವಾಗತಕ್ಕದ್ದು.
4. ಪಿಂಚಣಿ ಮತ್ತು ಪಿಂಚಣಿ ಸೌಲಭ್ಯಗಳ ಪರಿಷ್ಕರಣೆ ಕುರಿತಂತೆ 7ನೇ ರಾಜ್ಯ ವೇತನ ಆಯೋಗದ ಶಿಫಾರಸ್ಸುಗಳನ್ನು ಅಂಗೀಕರಿಸಲು ಸರ್ಕಾರವು ಹರ್ಷಿಸುತ್ತದೆ. ಅದರಂತೆ, ಕನಿಷ್ಠ ಮತ್ತು ಗರಿಷ್ಠ ಪಿಂಚಣಿಯ ಪ್ರಸ್ತುತ ಮೊತ್ತವನ್ನು ಕ್ರಮವಾಗಿ ಮಾಸಿಕ ರೂ.8,500/- ಮತ್ತು .75,300/- 8 .13,500/- 4.1,20,600/- ಪಿಂಚಣಿಯ ಕನಿಷ್ಠ ಮತ್ತು ಗರಿಷ್ಠ ಮಿತಿಯನ್ನು ಅನುಕ್ರಮವಾಗಿ ಮಾಸಿಕ ರೂ.8,500/- ಮತ್ತು ರೂ.45,180/- ರಿಂದ ಮತ್ತು ರೂ.13,500/- ಮತ್ತು ರೂ.80,400/-ಗಳಿಗೆ ಪರಿಷ್ಕರಿಸತಕ್ಕದ್ದು. ಪರಿಷ್ಕೃತ ಪಿಂಚಣಿ ಮತ್ತು ಕುಟುಂಬ ಪಿಂಚಣಿಗಳು ದಿನಾಂಕ: 01.07.2022 ರಿಂದ ಜಾರಿಗೆ ಬರುತ್ತವೆ. ಆದರೆ, ಪಿಂಚಣಿ ಪರಿಷ್ಕರಣೆಯ ಆರ್ಥಿಕ ಲಾಭವು ದಿನಾಂಕ: 01.08.2024 ರಿಂದ ಪ್ರಾಪ್ತವಾಗತಕ್ಕದ್ದು. ಮರಣ ಮತ್ತು ನಿವೃತ್ತಿ ಉಪದಾನದ ಪ್ರಸ್ತುತ ಗರಿಷ್ಠ ಮಿತಿ ರೂ.20 ಲಕ್ಷಗಳಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ.

5. ದಿನಾಂಕ: 01.07.2022 ಕ್ಕೆ ಪೂರ್ವದಲ್ಲಿ ನಿವೃತ್ತರಾದ ಅಥವಾ ಸೇವೆಯಲ್ಲಿದ್ದಾಗ ಮೃತರಾದ ಸರ್ಕಾರಿ ನೌಕರರ ಪಿಂಚಣಿ ಮತ್ತು ಕುಟುಂಬ ಪಿಂಚಣಿಯನ್ನು ಈ ಕೆಳಗಿನಂತೆ ನಿಗದಿಪಡಿಸತಕ್ಕದ್ದು:-
ಅ) ದಿನಾಂಕ: 01.07.2022 ರಂದು ಇದ್ದ ಮೂಲ ನಿವೃತ್ತಿ ವೇತನ/ಕುಟುಂಬ ನಿವೃತ್ತಿ ವೇತನ:
ಆ) ದಿನಾಂಕ: 01.07.2022 ರಂದು ಲಭ್ಯವಿದ್ದ 31% ರಷ್ಟು ತುಟ್ಟಿ ಭತ್ಯೆ.
ಇ) ದಿನಾಂಕ: 01.07.2022 ರಂದು ಇದ್ದ ನಿವೃತ್ತಿ ವೇತನ/ಕುಟುಂಬ ವೇತನದ ಮೇಲೆ
27.50% ರಷ್ಟು ಫಿಟ್ಮೆಂಟ್ ಸೌಲಭ್ಯ.
ನಿವೃತ್ತಿ ವೇತನ ಮತ್ತು ಕುಟುಂಬ ನಿವೃತ್ತಿ ವೇತನದ ಈ ಮೇಲಿನ (ಅ) + (ಆ) + (ಇ) ರ ಒಟ್ಟಾರೆ ಮೊತ್ತವು ಮಾಹೆಯಾನ ರೂ.13,500/- ಗಳ ಕನಿಷ್ಠ ಪಿಂಚಣಿಗೆ ಕಡಿಮೆ ಇಲ್ಲದಂತೆ ಮತ್ತು ನಿವೃತ್ತಿ ವೇತನವು ಗರಿಷ್ಠ ಮಾಹೆಯಾನ ರೂ.1,20,600/- ರ ಮಿತಿಗೆ ಹಾಗೂ ಕುಟುಂಬ ನಿವೃತ್ತಿ ವೇತನದ ಗರಿಷ್ಠ ಮೊತ್ತವು ಮಾಹೆಯಾನ ರೂ.80,400/- ಮಿತಿಗೆ ಒಳಪಟ್ಟಿರುತ್ತದೆ. ಈ ಪರಿಷ್ಕೃತ ಪಿಂಚಣಿಯ ಆರ್ಥಿಕ ಲಾಭವು ದಿನಾಂಕ: 01.08.20224 ರಿಂದ ಪ್ರಾಪ್ತವಾಗತಕ್ಕದ್ದು.

6. ಪರಿಷ್ಕೃತ ವೇತನ ಶ್ರೇಣಿಗಳಲ್ಲಿ ವೇತನ ಸಂಬಂಧಿತ ಭತ್ಯೆಗಳಾದ ಮನೆ ಬಾಡಿಗೆ ಭತ್ಯೆ, ನಗರ ಪರಿಹಾರ ಭತ್ಯೆ, ವೈದ್ಯಕೀಯ ಭತ್ಯೆಗಳ ಪರಿಷ್ಕರಣೆಯ ಶಿಫಾರಸ್ಸು ಮತ್ತು ಪರಿಷ್ಕೃತ ವೇತನ ಹಾಗೂ ಪರಿಷ್ಕೃತ ಪಿಂಚಣಿಯಲ್ಲಿ ತುಟ್ಟಿ ಭತ್ಯೆ ಲೆಕ್ಕಾಚಾರ ಮಾಡಲು ಶಿಫಾರಸ್ಸು ಮಾಡಲಾದ ಪರಿಷ್ಕೃತ ಸೂತ್ರಕ್ಕೆ ಸಂಬಂಧಿಸಿದ ವೇತನ ಆಯೋಗದ ಶಿಫಾರಸ್ಸುಗಳನ್ನು ಅಂಗೀಕರಿಸಲಾಗಿದೆ. ಪ್ರಸ್ತುತ ಚಾಲ್ತಿಯಲ್ಲಿರುವ ಪ್ರಭಾರ ಭತ್ಯೆ ಮಂಜೂರಾತಿಯ ಪ್ರಸ್ತುತ ದರಗಳು ಪರಿಷ್ಕೃತ ವೇತನ ಶ್ರೇಣಿಗಳಲ್ಲಿ ಯಾವುದೇ ಬದಲಾವಣೆ ಇಲ್ಲದೇ ಮುಂದುವರೆಯುತ್ತದೆ.

7. ನೌಕರರ ಸಾಮೂಹಿಕ ವಿಮಾ ಯೋಜನೆಗೆ ನೌಕರರ ವಂತಿಗೆ ಹೆಚ್ಚಳದ ಪರಿಷ್ಕರಣೆಯ ಶಿಫಾರಸ್ಸುಗಳನ್ನು ಅಂಗೀಕರಿಸಲಾಗಿದೆ.

8. ಅನ್ವಯಿಸುವ ಬದಲಾವಣೆಯೊಂದಿಗೆ ಈ ಮೇಲಿನ ಎಲ್ಲಾ ಸೌಲಭ್ಯಗಳನ್ನು ಅನುದಾನಿತ ಶಿಕ್ಷಣ ಸಂಸ್ಥೆಗಳು, ಸ್ಥಳೀಯ ಸಂಸ್ಥೆಗಳ ನೌಕರರು ಮತ್ತು ವಿಶ್ವವಿದ್ಯಾಲಯಗಳ ಬೋಧಕೇತರ ಸಿಬ್ಬಂದಿಗಳಿಗೂ ಸಹ ವಿಸ್ತರಿಸಲು ಸರ್ಕಾರವು ಹರ್ಷಿಸುತ್ತದೆ.

9. ಮುಂದುವರೆದು, ಈ ಮೇಲಿನಂತೆ ವೇತನ ಶ್ರೇಣಿಗಳ ಪರಿಷ್ಕರಣೆಯ ಕಾರಣದಿಂದಾಗಿ ಉಂಟಾಗುವ ವೇತನ ಮತ್ತು ಭತ್ಯೆಗಳ ಹೆಚ್ಚಳವನ್ನು ದಿನಾಂಕ: 01.08.2024ರಿಂದ ನಗದಾಗಿ ಪಾವತಿ ಮಾಡತಕ್ಕದ್ದು. ದಿನಾಂಕ: 01.07.2022 ರಿಂದ 31.07.2024ರ ಅವಧಿಯಲ್ಲಿ ಸೇವೆಯಿಂದ ನಿವೃತ್ತರಾದ ಅಥವಾ ಸೇವೆಯಲ್ಲಿರುವಾಗಲೇ ಮರಣ ಹೊಂದಿದ ಅಥವಾ ಸೇವೆಯಲ್ಲಿರುವುದು ಸಮಾಪ್ತಿಗೊಂಡ ಸರ್ಕಾರಿ ನೌಕರರ ಪ್ರಕರಣಗಳಲ್ಲಿ, ಪರಿಷ್ಕೃತ ವೇತನ ಶ್ರೇಣಿಗಳಲ್ಲಿ ನಿಗದಿಪಡಿಸಲಾದ ಕಾಲ್ಪನಿಕ ವೇತನವನ್ನು ನಿವೃತ್ತಿ ವೇತನ ಮತ್ತು ಕುಟುಂಬ ನಿವೃತ್ತಿ ವೇತನವನ್ನು ಲೆಕ್ಕ ಹಾಕುವ ಉದ್ದೇಶಗಳಿಗಾಗಿ ಪರಿಗಣಿಸತಕ್ಕದ್ದು. ಆದರೆ, ಸದರಿ ಕಾಲ್ಪನಿಕ ಪುನರ್ ನಿಗದಿಯ ಆ) ದಿನಾಂಕ: 01.07.2022 ರಂದು ಲಭ್ಯವಿದ್ದ 31% ರಷ್ಟು ತುಟ್ಟಿ ಭತ್ಯೆ.

ಇ) ದಿನಾಂಕ: 01.07.2022 ರಂದು ಇದ್ದ ನಿವೃತ್ತಿ ವೇತನ/ಕುಟುಂಬ ವೇತನದ ಮೇಲೆ 27.50% ರಷ್ಟು ಫಿಟ್ಮೆಂಟ್ ಸೌಲಭ್ಯ.
ನಿವೃತ್ತಿ ವೇತನ ಮತ್ತು ಕುಟುಂಬ ನಿವೃತ್ತಿ ವೇತನದ ಈ ಮೇಲಿನ (ಅ) + (ಆ) + (ಇ) ರ ಒಟ್ಟಾರೆ ಮೊತ್ತವು ಮಾಹೆಯಾನ ರೂ.13,500/- ಗಳ ಕನಿಷ್ಠ ಪಿಂಚಣಿಗೆ ಕಡಿಮೆ ಇಲ್ಲದಂತೆ ಮತ್ತು ನಿವೃತ್ತಿ ವೇತನವು ಗರಿಷ್ಠ ಮಾಹೆಯಾನ ರೂ.1,20,600/- ರ ಮಿತಿಗೆ ಹಾಗೂ ಕುಟುಂಬ ನಿವೃತ್ತಿ ವೇತನದ ಗರಿಷ್ಠ ಮೊತ್ತವು ಮಾಹೆಯಾನ ರೂ.80,400/- ಮಿತಿಗೆ ಒಳಪಟ್ಟಿರುತ್ತದೆ. ಈ ಪರಿಷ್ಕೃತ ಪಿಂಚಣಿಯ ಆರ್ಥಿಕ ಲಾಭವು ದಿನಾಂಕ: 01.08.20224 ರಿಂದ ಪ್ರಾಪ್ತವಾಗತಕ್ಕದ್ದು.
6. ಪರಿಷ್ಕೃತ ವೇತನ ಶ್ರೇಣಿಗಳಲ್ಲಿ ವೇತನ ಸಂಬಂಧಿತ ಭತ್ಯೆಗಳಾದ ಮನೆ ಬಾಡಿಗೆ ಭತ್ಯೆ, ನಗರ ಪರಿಹಾರ ಭತ್ಯೆ, ವೈದ್ಯಕೀಯ ಭತ್ಯೆಗಳ ಪರಿಷ್ಕರಣೆಯ ಶಿಫಾರಸ್ಸು ಮತ್ತು ಪರಿಷ್ಕೃತ ವೇತನ ಹಾಗೂ ಪರಿಷ್ಕೃತ ಪಿಂಚಣಿಯಲ್ಲಿ ತುಟ್ಟಿ ಭತ್ಯೆ ಲೆಕ್ಕಾಚಾರ ಮಾಡಲು ಶಿಫಾರಸ್ಸು ಮಾಡಲಾದ ಪರಿಷ್ಕೃತ ಸೂತ್ರಕ್ಕೆ ಸಂಬಂಧಿಸಿದ ವೇತನ ಆಯೋಗದ ಶಿಫಾರಸ್ಸುಗಳನ್ನು ಅಂಗೀಕರಿಸಲಾಗಿದೆ. ಪ್ರಸ್ತುತ ಚಾಲ್ತಿಯಲ್ಲಿರುವ ಪ್ರಭಾರ ಭತ್ಯೆ ಮಂಜೂರಾತಿಯ ಪ್ರಸ್ತುತ ದರಗಳು ಪರಿಷ್ಕೃತ ವೇತನ ಶ್ರೇಣಿಗಳಲ್ಲಿ ಯಾವುದೇ ಬದಲಾವಣೆ ಇಲ್ಲದೇ ಮುಂದುವರೆಯುತ್ತದೆ.

 

Related News

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...
Objavte množstvo užitočných tipov a trikov pre každodenný život, zdravé recepty a užitočné články týkajúce sa záhradkárstva na našom webe. Pridajte viac zábavy, chutí a praktických rád do svojho života s našimi nápadmi a návrhmi. Čerstvý šalát z mladej kapusty Jesenná rovnodennosť: Tajomstvo za mystickým sviatkom, tradície Rajčiny s ricottou, medom a piniovými orieškami Všetko je Letné paradajkové predjedlo Chutný šalát s kuracím mäsom Pollock proti Zimný Prečo Päť znamení zverokruhu Recept na 5 Nakladané uhorky so syrom a medom Delikátna pečeň z kačice "Forrester" s Chuťový zelený Ako správne zbierať Šalát s morskými riasami a rybami Pekelný karas: recepty na Záverečné skúšky Ovocné vločky s ovocím a zeleninou Šalát zemiakov Chrumkavé šampiňóny s fazuľkami a krutónmi „Ríbezľový džem za päť minút“ Čerstvé a chutné šaláty Ako pripraviť lahko nasolené uhorky v Je možné jesť Osviežujúci Zaujímavé tipy a triky, skvelé recepty a užitočné články pre váš záhradný a kuchynský život. Objavte nové spôsoby, ako zlepšiť váš domáci život a vytvoriť úžasné jedlá zo záhradných plodín.