ಮಡಿಕೇರಿ : ಕೇಂದ್ರ ಸರ್ಕಾರದ ಆಲಿಮ್ಕೋ ಸಂಸ್ಥೆಯಿಂದ ಅಡಿಪ್ ಯೋಜನೆಯಡಿ ವಿಕಲಚೇತನರಿಗೆ ಹಾಗೂ ರಾಷ್ಟ್ರೀಯ ವಯೋಶ್ರೀ ಯೋಜನೆಯಡಿ ಹಿರಿಯ ನಾಗರಿಕರಿಗೆ ವಿವಿಧ ಸಾಧನ ಸಲಕರಣೆಗಳನ್ನು ವಿತರಿಸಲು ಅರ್ಜಿ ಆಹ್ವಾನಿಸಲಾಗಿದೆ.
ಜಿಲ್ಲೆಯ ವಿಶೇಷಚೇತನರು ಹಾಗೂ ಹಿರಿಯ ನಾಗರಿಕರು ಮೌಲ್ಯಮಾಪನ ತಪಾಸಣಾ ಶಿಬಿರಕ್ಕೆ ಹಾಜರಾಗಲು ತಾಲ್ಲೂಕುವಾರು ದಿನಾಂಕಗಳನ್ನು ನಿಗದಿಪಡಿಸಲಾಗಿದೆ.
ಜುಲೈ, 26 ರಂದು ಕುಶಾಲನಗರ ತಾಲ್ಲೂಕು ಕಲಾಮಂದಿರ ಅಥವಾ ಗಾಯತ್ರಿ ಕಲ್ಯಾಣ ಮಂಟಪ, ಜುಲೈ, 27 ರಂದು ಸೋಮವಾರಪೇಟೆ ಚನ್ನಬಸಪ್ಪ ಸಭಾಂಗಣ, ಜುಲೈ, 28 ರಂದು ವಿರಾಜಪೇಟೆ ಮತ್ತು ಪೊನ್ನಂಪೇಟೆ ತಾಲ್ಲೂಕಿಗೆ ಗೋಣಿಕೊಪ್ಪಲು ಕೃಷಿ ವಿಜ್ಞಾನ ಕೇಂದ್ರ ಹಾಗೂ ಜುಲೈ, 29 ಮತ್ತು 30 ರಂದು ಮಡಿಕೇರಿ ತಾಲ್ಲೂಕಿನ ಇಂಡಿಯನ್ ರೆಡ್ ಕ್ರಾಸ್ ಸೊಸೈಟಿ ಸಭಾಂಗಣ.
ಈ ದಿನಾಂಕಗಳಂದು ಶಿಬಿರಗಳಲ್ಲಿ ಭಾಗವಹಿಸುವ ವಿಶೇಷಚೇತನರು ಯುಡಿಐಡಿ ಕಾರ್ಡ್, ಆಧಾರ್ ಕಾರ್ಡ್, ಜಾತಿ ಮತ್ತು ಆದಾಯ ಪ್ರಮಾಣಪತ್ರ ಅಥವಾ ಬಿಪಿಎಲ್ ಕಾರ್ಡ್, ಪಾಸ್ ಪೋರ್ಟ್ ಅಳತೆಯ ಭಾವಚಿತ್ರ ಹಾಗೂ ಹಿರಿಯ ನಾಗರಿಕರು ಆಧಾರ್ ಕಾರ್ಡ್, ಹಿರಿಯ ನಾಗರಿಕರ ಗುರುತಿನ ಚೀಟಿ, ಆದಾಯ ಪ್ರಮಾಣಪತ್ರ ಅಥವಾ ಬಿಪಿಎಲ್ ಕಾರ್ಡ್, ಪಾಸ್ಪೋರ್ಟ್ ಅಳತೆಯ ಭಾವಚಿತ್ರವನ್ನು ತರಬೇಕು. ಹೆಸರು ನೋಂದಾಯಿಸಿಕೊಳ್ಳಲು ಎಂಆರ್ಡಬ್ಲ್ಯುಗಳಾದ ಸೋಮವಾರಪೇಟೆ ಹಾಗೂ ಕುಶಾಲನಗರ ತಾಲ್ಲೂಕಿನ ಹರೀಶ್ ಟಿ.ಆರ್. ಮೊ.ಸಂ.8861428931, ವಿರಾಜಪೇಟೆ ತಾಲ್ಲೂಕಿನವರು ಪ್ರಥನ್ಕುಮಾರ್ ಸಿ.ಬಿ. ಮೊ.ಸಂ.9900883654 ಹಾಗೂ ಮಡಿಕೇರಿ ತಾಲ್ಲೂಕಿನವರು ರಾಜೇಶ್ ಮೊ.ಸಂ. 807392914 ಹಾಗೂ ಹೆಚ್ಚಿನ ಮಾಹಿತಿಗೆ ಕಚೇರಿ ದೂ.ಸಂ. 08272-295829 ನ್ನು ಕಚೇರಿ ವೇಳೆಯಲ್ಲಿ ಸಂಪರ್ಕಿಸಬಹುದು ಎಂದು ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ವಿಮಲಾ ಅವರು ತಿಳಿಸಿದ್ದಾರೆ.