ಬೆಂಗಳೂರು : ರಾಜ್ಯದ ಶಾಲಾ ಮಕ್ಕಳಿಗೆ ರಾಜ್ಯ ಸರ್ಕಾರವು ಸಿಹಿಸುದ್ದಿ ನೀಡಿದ್ದು, ಈ ವರ್ಷ ಸೈಕಲ್ ವಿತರಣೆ ಮಾಡುವ ಸಾಧ್ಯತೆ ಇದೆ.
ಶಿಕ್ಷಣ ಇಲಾಖೆಯು ಸೈಕಲ್ ನೀಡುವುದನ್ನು ಮತ್ತೆ ಆರಂಭಿಸಬೇಕೆಂದು ಅನುದಾನ ಕೋರಿದೆ. ಈ ಯೋಜನೆಗೆ ವರ್ಷಕ್ಕೆ 190-200 ಕೋಟಿ ರೂ. ಅವಶ್ಯಕತೆ ಬೀಳಲಿದೆ. ಯೋಜನೆಗೆ ಅನುದಾನ ನೀಡುವಂತೆ ಕೋರಿ ಈ ಹಿಂದೆ 792 ಕೋಟಿ ರೂ.ಗಳ ಪ್ರಸ್ತಾವನೆಯನ್ನು ಸಹ ಶಿಕ್ಷಣ ಇಲಾಖೆಯು ಸಲ್ಲಿಸಿತ್ತು. ಈ ವರ್ಷ ಯೋಜನೆಗೆ ಸರಕಾರ ಬಜೆಟ್‌ನಲ್ಲಿ ಅನುದಾನ ಹಂಚಿಕೆ ಮಾಡುವ ನಿರೀಕ್ಷೆಯಿದೆ ಎಂದು ಹೇಳಲಾಗಿದೆ.
ಶಾಲಾ ವಿದ್ಯಾರ್ಥಿಗಳಿಗೆ ಸೈಕಲ್ ಜೊತೆಗೆ ಉತ್ತಮ ಗುಣಮಟ್ಟದ ಶೂ, ಸಾಕ್ಸ್ ವಿದ್ಯಾರ್ಥಿಗಳು ಕೂಡುವುದಕ್ಕೆ ಬೆಂಚ್, ಪೌಷ್ಠಿಕ ಆಹಾರಕ್ಕಾಗಿ ರಾಗಿಮಲ್ಟ್, ಮೊಟ್ಟೆ ಸೇರಿದಂತೆ ವಿವಿಧ ಪ್ರಸ್ತಾವನೆಯನ್ನು ಸಲ್ಲಿಸಲಾಗಿದೆ. ಜೊತೆಗೆ ಸೈಕಲ್ ಯೋಜನೆಗೆ 200 ಕೋಟಿ ರೂ. ಅನುದಾನ ಅಗತ್ಯವಿದ್ದು, ಮುಂದಿನ ಬಜೆಟ್ ನಲ್ಲಿ ಮೀಸಲಿಡುವುದಾಗಿ ಸಿಎಂ ಸಿದ್ದರಾಮಯ್ಯ ಭರವಸೆ ನೀಡಿದ್ದಾರೆ ಎನ್ನಲಾಗಿದೆ.