![](https://kannadadunia.com/wp-content/uploads/2023/06/big_202181_A-STUDENT-OF-MARY-IMMACULATE-GIRLS-HIGH-SCHOOL-COVERS-HER-FACE-WITH-HER-HAND-TO-PROTECT-FROM-THE-SCORCHING-HEAT-ON-MAR-09-23-SAGUN-9-.jpg)
ಬೆಂಗಳೂರು : ರಾಜ್ಯದ ಶಾಲಾ ಮಕ್ಕಳಿಗೆ ಶಿಕ್ಷಣ ಇಲಾಖೆ ಸಿಹಿಸುದ್ದಿ ನೀಡಿದೆ, ಬ್ಯಾಗ್ ಹೊರೆ ತಗ್ಗಿಸುವ ನಿಟ್ಟಿಲ್ಲಿ ಮಹತ್ವದ ಕ್ರಮಕ್ಕೆ ಮುಂದಾಗಿದೆ.
ಶಾಲಾ ಮಕ್ಕಳ ಬ್ಯಾಗ್ ಹೊರೆ ಕಡಿಮೆ ಮಾಡಲು ಶಿಕ್ಷಣ ಇಲಾಖೆ ಚಿಂತನೆ ನಡೆಸಿದ್ದು, ಪ್ರಸಕ್ತ ವರ್ಷದಿಂದ ಪಠ್ಯಪುಸ್ತಕಗಳು ಭಾಗ-1 ಮತ್ತು ಭಾಗ-2 ಎಂದು ಎರಡು ವಿಭಾಗಗಳಾಗಿ ಮುದ್ರಿಸಿ ಸರಬರಾಜು ಮಾಡಲು ಇಲಾಖೆ ತೀರ್ಮಾನ ಮಾಡಿದೆ . ಅರ್ಧವಾರ್ಷಿಕ ಪರೀಕ್ಷೆ ವರೆಗೆ ಭಾಗ-1 ಹಾಗೂ ದಸರಾ ರಜೆ ಮುಗಿದ ಬಳಿಕ ಭಾಗ-2 ಪಠ್ಯಪುಸ್ತಕಗಳನ್ನು ವಿತರಣೆ ಮಾಡಲು ಶಿಕ್ಷಣ ಇಲಾಖೆ ನಿರ್ಧರಿಸಿದೆ ಎನ್ನಲಾಗಿದೆ.
ಪಠ್ಯಪುಸ್ತಕ ವಿಭಜಿಸಿ ನೀಡುವುದರಿಂದ ಮಕ್ಕಳ ಶಾಲಾ ಬ್ಯಾಗ್ ತೂಕ ಕಡಿಮೆಯಾಗಲಿದೆ. ನಿರ್ವಹಣೆ ಸುಲಭವಾಗುತ್ತದೆ. ಮಕ್ಕಳ ಒತ್ತಡ ಇಳಿಕೆಯಾಗುತ್ತದೆ. ಈ ನಿಟ್ಟಿನಲ್ಲಿ ನೂತನ ಯೋಜನೆ ಜಾರಿಗೊಳಿಸಲಿದ್ದು, ಪುಸ್ತಕಗಳ ಮುದ್ರಣ ವೆಚ್ಚ ಅಂದಾಜು 10 ಕೋಟಿ ರೂಪಾಯಿಯಷ್ಟು ಹೆಚ್ಚಾಗಬಹುದು ಹೇಳಲಾಗಿದೆ.