![](https://kannadadunia.com/wp-content/uploads/2023/05/application-web-780x405-1-1.jpg)
ಬೆಂಗಳೂರು : ಕೇಂದ್ರ ಸರ್ಕಾರವು ಎಸ್ ಸಿ ಸಮುದಾಯದ ವಿದ್ಯಾರ್ಥಿಗಳಿಗೆ ಭರ್ಜರಿ ಸಿಹಿಸುದ್ದಿ ನೀಡಿದ್ದು, ಕೇಂದ್ರ ಸರ್ಕಾರದ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಇಲಾಖೆಯಿಂದ 2023-24ನೇ ಸಾಲಿನಲ್ಲಿ ಮೇಟ್ರಿಕ್ ನಂತರ ವ್ಯಾಸಂಗ ಮಾಡುವ ಎಸ್‌ಸಿ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಆಹ್ವಾನಿಸಲಾಗಿದೆ.
ಆಸಕ್ತ ವಿದ್ಯಾರ್ಥಿಗಳು ಈ ವಿದ್ಯಾರ್ಥಿ ವೇತನದ ಸದುಪಯೋಗ ಸರ್ಕಾರದಿಂದ ಪಡೆದುಕೊಳ್ಳಬಹುದು. ಪರಿಶಿಷ್ಟಜಾತಿಯ ಮಕ್ಕಳು ಉನ್ನತ ಶಿಕ್ಷಣದಿಂದ ವಿತರಣೆ ವಂಚಿತರಾಗಬಾರದು ಎಂಬ ಉದ್ದೇಶದಿಂದ 69ಲಕ್ಷ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ವಿತರಿಸುವ ಯೋಜನೆ ಜಾರಿಗೆ ತರಲಾಗಿದೆ.
ಆಯಾ ರಾಜ್ಯಗಳ ವಿದ್ಯಾರ್ಥಿವೇತನ ಪೋರ್ಟಲ್‌ಗಳ ಮೂಲಕ ಅರ್ಜಿ ಸಲ್ಲಿಸಬಹುದು. ಪಾಲಕರ ವಾರ್ಷಿಕ ಆದಾಯ 2.5ಲಕ್ಷ ಮೀರಿರಬಾರದು. ಕಾಲೇಜಿನ ಟ್ಯೂಷನ್ ಶುಲ್ಕ ಸೇರಿ ವಾರ್ಷಿಕವಾಗಿ 2,500 ರೂ.ನಿಂದ 13,500 ರೂ. ಶೈಕ್ಷಣಿಕ ಭತ್ಯೆ (ಅಂಗವಿಕಲರಿಗೆ ಶೇ.10 ಹೆಚ್ಚಳ) ಪಾವತಿಸಲಾಗುತ್ತದೆ. ಹೆಚ್ಚಿನ ಮಾಹಿತಿಗಾಗಿ http://socialjustice.gov.in/ schemes ಗೆ ಭೇಟಿ ನೀಡಬಹುದು.