ಬೆಂಗಳೂರು : ರಾಜ್ಯ ಸರ್ಕಾರವು ಪರಿಶಿಷ್ಟ ಜಾತಿ ವಿದ್ಯಾರ್ಥಿಗಳಿಗೆ ಭರ್ಜರಿ ಸಿಹಿಸುದ್ದಿ ನೀಡಿದ್ದು, ರಾಜ್ಯದ ಪದವಿ ಪೂರ್ವ, ಪದವಿ ಮತ್ತು ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಉಚಿತ ಪ್ರವೇಶಕ್ಕೆ ಅವಕಾಶ ಕೊಟ್ಟಿದೆ.
ಪರಿಶಿಷ್ಟ ಜಾತಿಯ ಎಲ್ಲ ಅರ್ಹ ವಿದ್ಯಾರ್ಥಿಗಳಿಗೆ ಆರ್ಥಿಕ ನೆರವು ನೀಡಲು ಸಮಾಜ ಕಲ್ಯಾಣ ಇಲಾಖೆಯಿಂದ ವಿದ್ಯಾರ್ಥಿ ವೇತನ ಯೋಜನೆಯನ್ನು ಘೋಷಿಸಿದೆ.
ಮೆಟ್ರಿಕ್ ನಂತರದ ಕೋರ್ಸುಗಳಲ್ಲಿ ವ್ಯಾಸಂಗ ಮಾಡುತ್ತಿರುವ ಹಾಗೂ ವಾರ್ಷಿಕ ಆದಾಯ ಮಿತಿ ರೂ 2.5 ಲಕ್ಷದ ಒಳಗಿರುವ ಪರಿಶಿಷ್ಟ ಜಾತಿ ವಿದ್ಯಾರ್ಥಿಗಳಿಗೆ ಕೇಂದ್ರ ಪುರಸ್ಕೃತ ಮೆಟ್ರಿಕ್ ನಂತರದ ವಿದ್ಯಾರ್ಥಿವೇತನ ನೀಡಲಾಗುತ್ತಿದೆ. ಮುಖ್ಯವಾಗಿ ಎಲ್ಲಾ ಅರ್ಹ ಅರ್ಜಿದಾರರಿಗೆ Ernship Card ಮಂಜೂರು ು ಮಾಡಲಾಗುವುದು.
1.ಕುಟುಂಬದ ವಾರ್ಷಿಕ ಆದಾಯ ರೂ. 2.50 ಲಕ್ಷದ ಒಳಗಿರುವ ಪರಿಶಿಷ್ಟ ಜಾತಿಯ ಎಲ್ಲಾ ವಿದ್ಯಾರ್ಥಿಗಳಿಗೆ ಎಲ್ಲಾ ಮೆಟ್ರಿಕ್ ನಂಗರದ ಕೋರ್ಸುಗಳಿಗೆ ಉಚಿತ ಪ್ರವೇಶ
- ಸರ್ಕಾರವು ಅಯಾ ಕೋರ್ಸಿಗೆ ನಿಗದಿಪಡಿಸಿದ ದರಗಳಲ್ಲಿ ಶುಲ್ಕವನ್ನು ಇಲಾಖೆಯಿಂದ ವಿದ್ಯಾರ್ಥಿಗಳಿಗೆ ಮೆರುಾವತಿ ಮಾಡಲಾಗುವುದು.
- ಯಾವುದೇಶಿಕ್ಷಣಸಂಸ್ಥೆ ಸದರಿ ಪರಿಶಿಷ್ಕವಿದ್ಯಾರ್ಥಿಯಿಂದ ಮರುಪಾವತಿ ಮಾಡಲಾಗುವ ಶುಲ್ಕಗಳನ್ನು ಹೊರಡುವಡಿಸಿ ಇತರೆ ಕಡ್ಡಾಯ ಕುಲಗಳನ್ನು ಆರಂಭದಲ್ಲಿಯೇ ಪಾವತಿ ಮಾಡುವಂತೆ ಒತ್ತಾಯ ಮಾಡತಕ್ಕದ್ದಲ್ಲ.
ಅರ್ಜಿ ಸಲ್ಲಿಸಲು https://ssp.postmatric.karnataka gov.in/2324_SA/signin.aspx and ಲಿಂಕ್ ಮೂಲಕ ಅರ್ಜಿ ಸಲ್ಲಿಸುವುದು.
ಬೇಕಾಗಿರುವ ದಾಖಲಾತಿಗಳು
ವಿದ್ಯಾರ್ಥಿಯ ಅಧಾರ್ ಸಂಖ್ಯೆ
ವಿದ್ಯಾರ್ಥಿಯ ಮೊಬೈಲ್ ಸಂಖ್ಯೆ
ವಿದ್ಯಾರ್ಥಿಯ ಆದಾಯ ಮತ್ತು ಜಾತಿ ಪ್ರಮಾಣ ಪತ್ರದ QR ಸಂಖ್ಯೆ
ವಿದ್ಯಾರ್ಥಿಯ ಎಸ್.ಎಸ್.ಎಲ್.ಸಿ ನೋಂದಣಿ ಸಂಖ್ಯೆ
ವಿದ್ಯಾರ್ಥಿಯ ಯೂನಿವರ್ಸಿಟಿ / ಮಂಡಳಿ ನೋಂದಣಿ ಸಂಖ್ಯೆ
ಸ್ಕಾಲರ್‌ಶಿಪ್ ಸಹಾಯವಾಣಿ 9482 300 400