ಬೆಂಗಳೂರು : ರಾಜ್ಯ ಸರ್ಕಾರವು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಯುವಜನತೆಗೆ ಸಿಹಿಸುದ್ದಿ ನೀಡಿದ್ದು, ಪರಿಶಿಷ್ಟ ಜಾತಿ/ಪರಿಶ: ಬೆಂಗಡದ ಯುವಜನ ರಿಗೆ ಉದ್ಯಮಶೀಲ ತರಬೇತಿ ಕಾರ್ಯ ಕ್ರಮವನ್ನು ಆಯೋಜಿಸಿದ್ದು, ಆಸಕ್ತ ಅಭ್ಯರ್ಥಿಗಳು ಆನ್‌ಲೈನ್ ಮೂಲಕಅರ್ಜಿಗಳನ್ನು https://www.scsptsp.karnataka.gov.in/BMS/CDOC/EDPRegistrationForm.aspx ಮೂಲಕ ಸಲ್ಲಿಸಬಹುದಾಗಿದೆ.
ನಿಗದಿಪಡಿಸಿರುವ ಅರ್ಹತೆಗಳು:
- ವಯೋಮಿತಿ ಕನಿಷ್ಠ21 ವರ್ಷ ಹಾಗೂ ಗರಿಷ್ಟ 50 ವರ್ಷ.
- ಶೈಕ್ಷಣಿಕ ಅರ್ಹತೆ ಪಿ.ಯು.ಸಿ ಮತ್ತು ಮೇಲ್ಮಟ್ಟು
ತರಬೇತಿಯ ಬಗ್ಗೆ ವಿವರ
- ಉದ್ದಿಮೆ/ವಾಣಿಜ್ಯಚಟುವಟಿಕೆಗಳನ್ನುಪ್ರಾರಂಭಿಸಲು ಉತ್ತೇಜನ ಮತ್ತು ಮಾರ್ಗದರ್ಶನ ನೀಡಲು ಉದ್ಯಮಶೀಲತಾ ತರಬೇತಿಯನ್ನು ಆಯೋಜಿಸಲಾಗಿದೆ.
- ಸರ್ಕಾರದವಿವಿಧಇಲಾಖೆಗಳಿಂದ ಪ.ಜಾತಿ/ಪ.ಪಂಗಡದವರಿಗೆ ಉದ್ದಿಮೆಗಳನ್ನು ಸ್ಥಾಪಿಸಲು ನೀಡಲಾಗುವ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಲಾಗುವುದು.
- ರಾಷ್ಟ್ರೀಕೃತ ಬ್ಯಾಂಕ್ ಹಾಗೂಇತರ ಬ್ಯಾಂಕ್‌ಗಳು ಸೇರಿದಂತೆ ವಿವಿಧ ಹಣಕಾಸು ಸಂಸ್ಥೆಗಳಿಂದ ನೀಡಲಾಗುವ ಸಾಲ ಸೌಲಭ್ಯದ ಮಾಹಿತಿಯನ್ನು ನೀಡಲಾಗುವುದು.
- ಆಯಾಜಿಲ್ಲಾ ಕೇಂದ್ರಗಳಲ್ಲಿ ಹತ್ತು ದಿನಗಳ ಉಚಿತ ತರಬೇತಿ ಕಾರ್ಯಕ್ರಮವನ್ನು ಆಯೋಜಿಸಲಾಗುತ್ತಿದೆ.
- ತರಬೇತಿಗೆ ಹಾಜರಾಗಲುಪ್ರತಿ ಅಭ್ಯರ್ಥಿಗೆ ಪ್ರಯಾಣ ಭತ್ಯೆಯಾಗಿ ಹತ್ತು ದಿನಗಳಿಗೆ ರೂ.1,000/- ಗಳನ್ನು ನೀಡಲಾಗುವುದು.
- ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 30.11.2023 ಆಗಿದೆ.