alex Certify SBI ಗ್ರಾಹಕರಿಗೆ ಭರ್ಜರಿ ‌ಗುಡ್‌ ನ್ಯೂಸ್: PoS ಯಂತ್ರವಾಗಿ ಬದಲಾಗಲಿದೆ ಸ್ಮಾರ್ಟ್‌ ಫೋನ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

SBI ಗ್ರಾಹಕರಿಗೆ ಭರ್ಜರಿ ‌ಗುಡ್‌ ನ್ಯೂಸ್: PoS ಯಂತ್ರವಾಗಿ ಬದಲಾಗಲಿದೆ ಸ್ಮಾರ್ಟ್‌ ಫೋನ್

ಸ್ಟೇಟ್​ ಬ್ಯಾಂಕ್​ ಆಫ್​ ಇಂಡಿಯಾದ ಅಂಗಸಂಸ್ಥೆಯಾದ ಎಸ್​ಬಿಐ ಪೇಮೆಂಟ್ಸ್​, ಭಾರತದಲ್ಲಿ ಡಿಜಿಟಲೀಕರಣಕ್ಕೆ ಒತ್ತು ನೀಡುವ ಸಲುವಾಗಿ ಮಹತ್ವದ ಹೆಜ್ಜೆಯನ್ನಿಟ್ಟಿದೆ.

ವ್ಯಾಪಾರಿ ಕ್ಷೇತ್ರದಲ್ಲಿ ಡಿಜಿಟಲೀಕರಣಕ್ಕಾಗಿ ಯೊನೊ ಮರ್ಚೆಂಟ್​ ಅಪ್ಲಿಕೇಶನ್​ನ್ನು ಪ್ರಾರಂಭಿಸಿದ್ದು, ಮೊಬೈಲ್​ ಪಾವತಿ ತಂತ್ರಜ್ಞಾನದ ಮೂಲಕ ಲಕ್ಷಾಂತರ ವ್ಯಾಪಾರಿಗಳು ಮೊಬೈಲ್​​ನಲ್ಲೇ ಗ್ರಾಹಕರ ಪಾವತಿಗಳನ್ನ ಸ್ವೀಕರಿಸಬಹುದಾಗಿದೆ.

ಮುಂದಿನ 2 ವರ್ಷಗಳಲ್ಲಿ ಭಾರತದಲ್ಲಿ 20ಮಿಲಿಯನ್​ ವ್ಯಾಪಾರಿಗಳನ್ನ ಗುರಿಯಲ್ಲಿ ಇಟ್ಟುಕೊಂಡು ಸ್ಟೇಟ್​ ಬ್ಯಾಂಕ್​ ಆಫ್​ ಇಂಡಿಯಾ ಈ ಯೋಜನೆಯನ್ನು ರೂಪಿಸಿದೆ.

ಈ ಯೊನೊ ಮರ್ಚೆಂಟ್​ ಅಪ್ಲಿಕೇಶನ್​ ಮೂಲಕ ವ್ಯಾಪಾರಿಗಳು ತಮ್ಮ ಆಂಡ್ರಾಯ್ಡ್ ಮೊಬೈಲ್​​ಗಳನ್ನೇ ಪಿಒಎಸ್​ ಮಷಿನ್​ಗಳ ರೀತಿಯಲ್ಲಿ ಬಳಕೆ ಮಾಡಬಹುದಾಗಿದೆ. ಸರಳ ಮೊಬೈಲ್​ ಅಪ್ಲಿಕೇಶನ್​ ಮೂಲಕ ಪಾವತಿ ಸ್ವೀಕಾರ ಮಾಡಬಹುದಾಗಿದೆ ಎಂದು ಎಸ್​ಬಿಐ ತಿಳಿಸಿದೆ.

ಯೊನೊ ಮರ್ಚೆಂಟ್​​ ಅಪ್ಲಿಕೇಶನ್​ ಲಾಂಚ್​ ವಿಚಾರವಾಗಿ ಮಾತನಾಡಿದ ಎಸ್​ಬಿಐ ಅಧ್ಯಕ್ಷ ದಿನೇಶ್​ ಕುಮಾರ್​ ಖಾರಾ, ನಮ್ಮ ಅಂಗಸಂಸ್ಥೆಯಾದ ಎಸ್​ಬಿಐ ಪೇಮೆಂಟ್​ ವತಿಯಿಂದ ಎಸ್​ಬಿಐ ಮರ್ಚೆಂಟ್​ ಅಪ್ಲಿಕೇಶನ್​ ಬಿಡುಗಡೆ ಮಾಡೋದಾಗಿ ಘೋಷಣೆ ಮಾಡಲು ನನಗೆ ತುಂಬಾನೇ ಸಂತೋಷವಾಗಿದೆ. ಮೂರು ವರ್ಷಗಳ ಹಿಂದೆಯೇ ಎಸ್​ಬಿಐ ಯೊನೊ ವೇದಿಕೆಯನ್ನ ಆರಂಭಿಸಿದೆ. ಯೊನೊ ಈಗಾಗಲೇ 35.8 ಮಿಲಿಯನ್​ ಬಳಕೆದಾರರನ್ನ ಹೊಂದಿದೆ. ಇದೇ ಅಪ್ಲಿಕೇಶನ್​​ನ ವಿಸ್ತರಣೆಯ ಭಾಗವಾಗಿ ಯೊನೊ ಮರ್ಚೆಂಟ್​ ಅಪ್ಲಿಕೇಶನ್​ನ್ನು ಪರಿಚಯಿಸುತ್ತಿದ್ದೇವೆ. ಮುಂದಿನ 2-3 ವರ್ಷಗಳಲ್ಲಿ ಲಕ್ಷಾಂತರ ವ್ಯಾಪಾರಿಗಳು ಪಿಒಎಸ್​ ಸಾಧನಗಳ ಬದಲಾಗಿ ಈ ಅಪ್ಲಿಕೇಶನ್​​ಗಳನ್ನ ಬಳಸುವಂತಾಗಬೇಕು ಎಂಬ ಗುರಿಯನ್ನ ಹೊಂದಿದ್ದೇವೆ ಎಂದು ಹೇಳಿದ್ದಾರೆ.

ಇನ್ನು ಇದೇ ವಿಚಾರವಾಗಿ ಮಾತನಾಡಿದ ಎಸ್​ಬಿಐ ಪೇಮೆಂಟ್ಸ್​ ಎಂಡಿ ಹಾಗೂ ಸಿಇಓ ಗಿರಿ ಕುಮಾರ್​ ನಾಯರ್, ಎಸ್​ಬಿಐ ಪೇಮೆಂಟ್ಸ್​ ಗ್ರಾಹಕರಿಗೆ ಅತ್ಯಾಧುನಿಕ ಸೌಲಭ್ಯ ಹಾಗೂ ನವೀನ ಉತ್ಪನ್ನಗಳನ್ನ ನೀಡುವಲ್ಲಿ ಮುಂಚೂಣಿಯಲ್ಲಿದೆ. ಮುಂದಿನ 2-3 ವರ್ಷಗಳಲ್ಲಿ 5-10 ಮಿಲಿಯನ್​ ಗ್ರಾಹಕರನ್ನ ಹೊಂದುವ ಗುರಿ ಇಟ್ಟುಕೊಂಡಿದ್ದೇವೆ. ಚಿಲ್ಲರೆ ವ್ಯಾಪಾರಿಗಳಿಂದ ಹಿಡಿದು ಎಲ್ಲಾ ಉದ್ಯಮಿಗಳಿಗೆ ಯೊನೊ ಎಸ್​ಬಿಐ ಮರ್ಚೆಂಟ್​ ಉತ್ತಮ ಪಾವತಿ ಅಪ್ಲಿಕೇಶನ್​ ಆಗಿದೆ. ಬಳಕೆದಾರರ ಅನುಭವ ಹಾಗೂ ಅನುಕೂಲತೆಯನ್ನೇ ಆಧರಿಸಿ ಅಪ್ಲಿಕೇಶನ್​ನ್ನು ಸುಧಾರಿಸಲಿದ್ದೇವೆ ಎಂದು ಹೇಳಿದ್ರು.

 

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...