ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಗ್ರಾಹಕರ ಅನುಕೂಲಕ್ಕಾಗಿ ಅನೇಕ ಸೌಲಭ್ಯಗಳನ್ನು ನೀಡ್ತಿದೆ. ಈಗ ಸ್ಥಿರ ಠೇವಣಿ ಖಾತೆದಾರರಿಗೆ ಎಫ್ ಡಿ ಪ್ರಮಾಣಪತ್ರ ಪ್ರಕ್ರಿಯೆಯನ್ನು ಸುಲಭಗೊಳಿಸಿದೆ.
ಎಸ್‌ಬಿಐ ಗ್ರಾಹಕರು ಮನೆಯಲ್ಲೇ ಕುಳಿತು ಎಫ್‌ಡಿ ಬಡ್ಡಿ ಪ್ರಮಾಣಪತ್ರವನ್ನು ಆನ್‌ಲೈನ್‌ನಲ್ಲಿ ಸುಲಭವಾಗಿ ಪಡೆಯಬಹುದು. ಗ್ರಾಹಕರು ಎಸ್‌ಬಿಐನ ಅಧಿಕೃತ ವೆಬ್‌ಸೈಟ್‌ಗೆ ಹೋಗಿ ನೆಟ್ ಬ್ಯಾಂಕಿಂಗ್ ಮೂಲಕ ಪ್ರಮಾಣಪತ್ರವನ್ನು ಡೌನ್‌ಲೋಡ್ ಮಾಡಬೇಕಾಗುತ್ತದೆ. ಎಸ್‌ಬಿಐ ಈ ಮಾಹಿತಿಯನ್ನು ಟ್ವೀಟ್ ಮಾಡುವ ಮೂಲಕ ಗ್ರಾಹಕರಿಗೆ ನೀಡಿದೆ.
ಎಸ್‌ಬಿಐ ಅಧಿಕೃತ ವೆಬ್ಸೈಟ್ ಗೆ ಲಾಗಿನ್ ಆಗಿ, ನಾಲ್ಕು ಸರಣಿ ಹಂತದ ಮೂಲಕ ಪ್ರಮಾಣ ಪತ್ರವನ್ನು ಡೌನ್ಲೋಡ್ ಮಾಡಬಹುದು. ಮೊದಲು ಬಳಕೆದಾರರ ಐಡಿ ಮತ್ತು ಪಾಸ್‌ವರ್ಡ್‌ನೊಂದಿಗೆ ಬ್ಯಾಂಕಿನ ವೆಬ್‌ಸೈಟ್ https://onlinesbi.com ಗೆ ಲಾಗಿನ್ ಮಾಡ್ಬೇಕು. ಇದರ ನಂತರ ವೈಯಕ್ತಿಕ ಬ್ಯಾಂಕಿಂಗ್ ವಿಭಾಗಕ್ಕೆ ಹೋಗಿ, ಇ-ಸೇವಾ ಟ್ಯಾಬ್ ಕ್ಲಿಕ್ ಮಾಡಿ ನಂತರ ಪ್ರಮಾಣಪತ್ರ ಆಯ್ಕೆಗೆ ಹೋಗಿ. Interest Certificates of Deposit A/Csಗೆ ಹೋಗಿ ಅಲ್ಲಿ ಡೌನ್ಲೋಡ್ ಮಾಡಬೇಕು. ಈ ಪ್ರಕ್ರಿಯೆ ಮೂಲಕ ಸುಲಭವಾಗಿ ಎಫ್ ಡಿ ಬಡ್ಡಿ ಪ್ರಮಾಣಪತ್ರವನ್ನು ಡೌನ್ಲೋಡ್ ಮಾಡಬಹುದು. ಇದಕ್ಕಾಗಿ ಬ್ಯಾಂಕ್ ಶಾಖೆಗೆ ಹೋಗಬೇಕಾಗಿಲ್ಲ.