ನವದೆಹಲಿ: ದೇಶದ ಅತಿದೊಡ್ಡ ಸಾಲದಾತ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್.ಬಿ.ಐ.) ತನ್ನ ಯೋನೊ ಅಪ್ಲಿಕೇಶನ್ ಮೂಲಕ 35 ಲಕ್ಷ ರೂಪಾಯಿವರೆಗಿನ ಸಾಲ ಒದಗಿಸುವ ಸರಳ ಸೌಲಭ್ಯವನ್ನು ಪರಿಚಯಿಸಿದೆ.
ಯೋನೊ ಅಪ್ಲಿಕೇಶನ್ ಬಳಸಿ ರಿಯಲ್-ಟೈಮ್ ಎಕ್ಸ್ಪ್ರೆಸ್ ಕ್ರೆಡಿಟ್ (RTXC) ಸೌಲಭ್ಯವನ್ನು ಪಡೆಯಬಹುದು.
ಈ ಸಾಲ ಪಡೆಯುವ ಪ್ರಕ್ರಿಯೆಯು ಸಂಪೂರ್ಣವಾಗಿ ಡಿಜಿಟಲ್ ಆಗಿದೆ. ಹಾಗೂ ಯಾವುದೇ ದಾಖಲೆಗಳ ಅಗತ್ಯ ಇದಕ್ಕೆ ಇಲ್ಲ. ಗ್ರಾಹಕರನ್ನು ಡಿಜಿಟಲ್ ಬ್ಯಾಂಕಿಂಗ್ ಮೂಲಕ ಸಬಲಗೊಳಿಸುವುದಲ್ಲದೆ, ಅವರ ಮನೆ ಬಳಿ ಬ್ಯಾಂಕ್ ಶಾಖೆ ಇಲ್ಲದಿದ್ದರೂ ಸಾಲ ಪಡೆಯುವ ಅವಕಾಶವನ್ನು ನೀಡುತ್ತದೆ.
ಆದಾಗ್ಯೂ, ಈ ಸೌಲಭ್ಯವು ಸಂಬಳ ಪಡೆಯುವ ವ್ಯಕ್ತಿಗಳಿಗೆ ಮಾತ್ರ ಲಭ್ಯ. ಇದಕ್ಕಾಗಿ ಅವರು ಎಸ್.ಬಿ.ಐ.ನಲ್ಲಿ ತಮ್ಮ ಸಂಬಳ ಖಾತೆಯನ್ನು ಹೊಂದಿರಬೇಕು. ಬ್ಯಾಂಕ್ ಖಾತೆ ಡಿಜಿಟಲ್ ರೂಪದಲ್ಲಿ ಲಭ್ಯವಾಗಲಿದೆ. ಎಲ್ಲ ದಾಖಲಾತಿ ಪರಿಶೀಲನೆ ಮತ್ತು ಉಳಿದ ಪ್ರಕ್ರಿಯೆಗಳನ್ನು ಆನ್ಲೈನ್ನಲ್ಲೇ ಪೂರ್ಣಗೊಳಿಸಲಾಗುತ್ತದೆ.
ಮೂವರು ಬಾಲಕರು ನೀರು ಪಾಲು ಪ್ರಕರಣ; ಓರ್ವನ ಶವ ಪತ್ತೆ
ರಿಯಲ್-ಟೈಮ್ ಎಕ್ಸ್ಪ್ರೆಸ್ ಕ್ರೆಡಿಟ್ ಅಡಿಯಲ್ಲಿ, ಬ್ಯಾಂಕ್ನ ಕೇಂದ್ರ/ರಾಜ್ಯ ಸರ್ಕಾರ ಮತ್ತು ರಕ್ಷಣಾ ಇಲಾಖೆಯಿಂದ ಸಂಬಳ ಪಡೆಯುವ ಗ್ರಾಹಕರು ಇನ್ನು ಮುಂದೆ ವೈಯಕ್ತಿಕ ಸಾಲ ಪಡೆಯಲು ಶಾಖೆಗೆ ಭೇಟಿ ನೀಡುವ ಅಗತ್ಯವಿಲ್ಲ. ಕ್ರೆಡಿಟ್ ಚೆಕ್ಗಳು, ಅರ್ಹತೆ, ಮಂಜೂರಾತಿ ಮತ್ತು ದಾಖಲಾತಿಗಳೆಲ್ಲವೂ ಈಗ ನೈಜ ಸಮಯದಲ್ಲಿ ಡಿಜಿಟಲ್ ರೂಪದಲ್ಲಿ ನಡೆಯಲಿದೆ.
ಎಸ್.ಬಿ.ಐ. ರಿಯಲ್-ಟೈಮ್ ಎಕ್ಸ್ಪ್ರೆಸ್ ಕ್ರೆಡಿಟ್ ಪಡೆಯಲು ಇರಬೇಕಾದ ಅರ್ಹತೆಗಳು ಹೀಗಿವೆ –
• SBI ನಲ್ಲಿ ಸಂಬಳ ಖಾತೆಗಳನ್ನು ಹೊಂದಿರುವವರು
• ಕನಿಷ್ಠ ₹15,000 ಮಾಸಿಕ ಆದಾಯವನ್ನು ಹೊಂದಿರುವವರು
• ಕೇಂದ್ರ/ರಾಜ್ಯ/ಅರೆ-ಸರಕಾರ/ಕೇಂದ್ರ PSUಗಳು ಮತ್ತು ಲಾಭ ಗಳಿಸುತ್ತಿರುವ ರಾಜ್ಯದ PSUಗಳು/ರಾಷ್ಟ್ರೀಯ ಖ್ಯಾತಿಯ ಶಿಕ್ಷಣ ಸಂಸ್ಥೆಗಳು/ಬ್ಯಾಂಕ್ನೊಂದಿಗೆ ಅಥವಾ ಸಂಬಂಧವಿಲ್ಲದ ಆಯ್ದ ಕಾರ್ಪೊರೇಟ್ ಉದ್ಯೋಗಿಗಳು.