ರಾಯಲ್ ಎನ್‌ಫೀಲ್ಡ್ ಭಾರತದಲ್ಲೂ ಬೈಕ್ ಪ್ರಿಯರ ಫೇವರಿಟ್. ರಾಯಲ್ ಎನ್‌ಫೀಲ್ಡ್ ಮೋಟಾರ್ ಸೈಕಲ್‌ಗಳು ವಿಶೇಷವಾಗಿ ಪರ್ವತಗಳಲ್ಲಿ ಸುತ್ತಾಡಲು ಇಷ್ಟಪಡುವವರಿಗೆ ಹೇಳಿ ಮಾಡಿಸಿದಂತಿರುತ್ತವೆ. ಕೆಲವರು ಸ್ವಂತ ಬೈಕ್ ಖರೀದಿಸಿದರೆ ಇನ್ನು ಕೆಲವರು ಬಾಡಿಗೆಗೆ ತೆಗೆದುಕೊಂಡು ಮಲೆನಾಡಿನಲ್ಲಿ ಸವಾರಿ ಮಾಡುತ್ತಾರೆ. ರಾಯಲ್ ಎನ್‌ಫೀಲ್ಡ್‌ನ ಕ್ಲಾಸಿಕ್ 350 ಮೋಟಾರ್‌ಸೈಕಲ್ ಬಹಳ ಜನಪ್ರಿಯವಾಗಿದೆ. ಇದು ಕಂಪನಿಯ ಹೆಚ್ಚು ಮಾರಾಟವಾಗುವ ಮೋಟಾರ್‌ಸೈಕಲ್‌ಗಳಲ್ಲಿ ಒಂದಾಗಿದೆ.
ಈಗ ಕಂಪನಿಯು ತನ್ನ ಅಭಿಮಾನಿಗಳಿಗಾಗಿ ಇನ್ನೂ ಕೆಲವು ಹೊಸ ಮೋಟಾರ್‌ಸೈಕಲ್‌ಗಳನ್ನು ಬಿಡುಗಡೆ ಮಾಡಲು ತಯಾರಿ ನಡೆಸುತ್ತಿದೆ. ಈ ಹೊಸ ಮೋಟಾರ್‌ಸೈಕಲ್‌ಗಳು 350cc ಮತ್ತು 650cc ವಿಭಾಗಗಳಲ್ಲಿ ಬರಬಹುದು. ಹೊಸ ಮೋಟಾರ್‌ಸೈಕಲ್ 2024ರ ಅಂತ್ಯದ ವೇಳೆಗೆ ಮಾರುಕಟ್ಟೆಗೆ ಪ್ರವೇಶಿಸುವ ನಿರೀಕ್ಷೆಯಿದೆ.
ಗೆರಿಲ್ಲಾ 450
ರಾಯಲ್ ಎನ್‌ಫೀಲ್ಡ್, ಗೆರಿಲ್ಲಾ 450 ಎಂಬ ಹೆಸರಿನ ಹೊಸ ಮೋಟಾರ್‌ಸೈಕಲ್ ಅನ್ನು ಲಾಂಚ್ ಮಾಡಲಿದೆ. 2024ರ ಅಂತ್ಯದಲ್ಲಿ ಅಥವಾ 2025ರ ಆರಂಭದಲ್ಲಿ ಇದು ಬಿಡುಗಡೆಯಾಗುವ ನಿರೀಕ್ಷೆಯಿದೆ. ಇದು 17 ಇಂಚಿನ ಮಿಶ್ರಲೋಹದ ಚಕ್ರಗಳನ್ನು ಹೊಂದಿರಲಿದೆ.
ಕ್ಲಾಸಿಕ್ 650 ಟ್ವಿನ್
ರಾಯಲ್ ಎನ್‌ಫೀಲ್ಡ್‌ನ ಕ್ಲಾಸಿಕ್ 650 ಟ್ವಿನ್‌ನಲ್ಲಿ 648cc ಪ್ಯಾರಲಲ್ ಟ್ವಿನ್ ಎಂಜಿನ್ ಇರಲಿದೆ. ಈ ಎಂಜಿನ್ 52Nm ಟಾರ್ಕ್ ಅನ್ನು ಉತ್ಪಾದಿಸುತ್ತದೆ.
ಬುಲೆಟ್ 650
ಕಂಪನಿ ಮಾರುಕಟ್ಟೆಗೆ ಬಿಡುಗಡೆ ಮಾಡಲು ತಯಾರಿ ನಡೆಸುತ್ತಿರುವ ಮೂರನೇ ಮೋಟಾರ್‌ಸೈಕಲ್‌ನ ಹೆಸರು ರಾಯಲ್ ಎನ್‌ಫೀಲ್ಡ್ ಬುಲೆಟ್ 650. ರಾಯಲ್ ಎನ್‌ಫೀಲ್ಡ್ ಬುಲೆಟ್ 350 ಬೈಕ್ ಅನ್ನು ಗ್ರಾಹಕರು ಸಿಕ್ಕಾಪಟ್ಟೆ ಇಷ್ಟಪಟ್ಟಿದ್ದರು. ಹಾಗಾಗಿ ಇದು ಅತ್ಯುತ್ತಮ ಮಾರಾಟವನ್ನೂ ಕಂಡಿದೆ. ಇದನ್ನು ಗಮನದಲ್ಲಿಟ್ಟುಕೊಂಡು ಕಂಪನಿ ಈಗ ಬುಲೆಟ್ 650 ಅನ್ನು ಬಿಡುಗಡೆ ಮಾಡಲು ತಯಾರಿ ನಡೆಸುತ್ತಿದೆ. ಈ ಮೋಟಾರ್ ಸೈಕಲ್‌ನಲ್ಲಿ 648cc ಪ್ಯಾರಲಲ್ ಟ್ವಿನ್ ಎಂಜಿನ್ ಅಳವಡಿಸಬಹುದು.