ಬೆಂಗಳೂರು : ನಿವೃತ್ತ ಸಾರಿಗೆ ನೌಕರರಿಗೆ ಸಾರಿಗೆ ಸಚಿವ ರಾಮಲಿಂಗ ರೆಡ್ಡಿ ಸಿಹಿಸುದ್ದಿ ನೀಡಿದ್ದು, ನಿವೃತ್ತ ನೌಕರರಿಗೂ ವೇತನ ಹೆಚ್ಚಳ ಬಾಕಿಗೆ ಒಪ್ಪಿಗೆ ನೀಡಿದ್ದಾರೆ.
ಸಾರಿಗೆ ಇಲಾಖೆಯಲಿ ಹಾಲಿ ಕಾರ್ಯನಿರ್ವಹಿಸುತ್ತಿರುವ ನೌಕರರಂತೆಯೇ 2020 ರ ಜ. 01 ರಿಂದ 2023 ರ ಫೆ. 28 ರವರೆಗೆ ನಿವೃತ್ತ ಹಾಗೂ ಸಂಸ್ಥೆಯಿಂದ ಹೊರ ಹೋಗಿರುವ ಎಲ್ಲ ನೌಕರರಿಗೂ ಶೇ. ೧೫ ರಷ್ಟು ವೇತನ ಹೆಚ್ಚಳ ಬಾಕಿ ನೀಡುವುದಕ್ಕೆ ಸಚಿವ ರಾಮಲಿಂಗ ರೆಡ್ಡಿ ಸೂಚನೆ ನೀಡಿದ್ದಾರೆ.
01.01.2020 ರಿಂದ 28.02.2023ರ ವರೆಗಿನ ನಿವೃತ್ತಿ ಹೊಂದಿರುವ ಹಾಗೂ ಸಂಸ್ಥೆಯಿಂದ ಹೊರಗೆ ಹೋಗಿರುವ ಎಲ್ಲಾ ಅಂದಾಜು 10000 ನೌಕರರಿಗೂ ಶೇ.15 ರಷ್ಟು ವೇತನ ಹೆಚ್ಚಳದ ಹಣ ಸುಮಾರು ರೂ. 220 ಕೋಟಿ ಬಾಕಿ ಹಣ ನೀಡುವುದಾಗಿ ಸಚಿವರು ಭರವಸೆ ನೀಡಿದರು.