
ಬೆಂಗಳೂರು : ರಾಜ್ಯ ಸರ್ಕಾರವು ನಿವೃತ್ತ ಪೊಲೀಸ್ ಅಧಿಕಾರಿ/ಸಿಬ್ಬಂದಿಗಳಿಗೆ ಸಿಹಿಸುದ್ದಿ ನೀಡಿದ್ದು, ಆರೋಗ್ಯ ಯೋಜನೆಯಡಿ ಚಿಕಿತ್ಸೆ ನೀಡಲು ಮತ್ತೊಂದು ಆಸ್ಪತ್ರೆ ಸೇರ್ಪಡೆ ಮಾಡಿ ಆದೇಶ ಹೊರಡಿಸಿದೆ.
ನಿವೃತ್ತ ಪೊಲೀಸ್ ಅಧಿಕಾರಿ/ಸಿಬ್ಬಂದಿಗಳಿಗೆ ಆರೋಗ್ಯ ಯೋಜನೆಯನ್ನು ಜಾರಿಗೆ ತರಲಾಗಿರುತ್ತದೆ. ನಿವೃತ್ತ ಪೊಲೀಸ್ ಅಧಿಕಾರಿ/ಸಿಬ್ಬಂದಿ ಮತ್ತು ಅವರ ಪತಿ/ಪತ್ನಿ ರವರಿಗೆ ಚಿಕಿತ್ಸೆ ಒದಗಿಸುವ ಸಂಬಂಧ Dr. Agarwal’s Eye Hospital, Mysore ಆಸ್ಪತ್ರೆಯನ್ನು ನಿವೃತ್ತ ಪೊಲೀಸ್ ಅಧಿಕಾರಿ/ಸಿಬ್ಬಂದಿಗಳಿಗೆ ಆರೋಗ್ಯ ಯೋಜನೆಯಡಿಯಲ್ಲಿ ಸೇರ್ಪಡೆಗೊಳಿಸಲಾಗಿದೆ.
ಆರೋಗ್ಯ ಭಾಗ್ಯ ಯೋಜನೆಯಡಿಯಲ್ಲಿ ಸೇವಾನಿರತ ಪೊಲೀಸ್ ಅಧಿಕಾರಿ/ಸಿಬ್ಬಂದಿ ಮತ್ತು ಅವರ ಕುಟುಂಬದವರಿಗೆ ಸಿ.ಜಿ.ಹೆಚ್.ಎಸ್ ದರದಲ್ಲಿ ಚಿಕಿತ್ಸೆ ಒದಗಿಸುತ್ತಿದ್ದೀರಿ. ಅದೇ ರೀತಿ ನಿವೃತ್ತ ಪೊಲೀಸ್ ಅಧಿಕಾರಿ/ಸಿಬ್ಬಂದಿ ಮತ್ತು ಅವರ ಪತಿ/ಪತ್ನಿ ರವರಿಗೆ ಚಿಕಿತ್ಸೆ ಒದಗಿಸುವ ಬಗ್ಗೆ ಸಾಮಾನ್ಯ ವೈದ್ಯಕೀಯ ಚಿಕಿತ್ಸೆ ಪ್ರಕ್ರಿಯೆಗೆ ಗರಿಷ್ಠ ಮಿತಿ ಒಂದು ವರ್ಷಕ್ಕೆ ಓರ್ವ ಸದಸ್ಯನ ಕುಟುಂಬಕ್ಕೆ ರೂ.1.00 ಲಕ್ಷ, ವಿಶೇಷ ಹಾಗೂ ಸಂಕೀರ್ಣ ಶಸ್ತ್ರ ಚಿಕಿತ್ಸೆಗಳಲ್ಲಿ (ಇಂಪ್ಲಾಂಟ್, ಸ್ಟಂಟ್ ಸೇರಿ) ಹೆಚ್ಚಿನ ರೂ.1.00 ಲಕ್ಷ (ಒಟ್ಟಾಗಿ ರೂ.2.00 ಲಕ್ಷಗಳ) ಗರಿಷ್ಠ ಮಿತಿ ಇದ್ದು, ಸದರಿ ಮೊತ್ತವನ್ನು ಟ್ರಸ್ಟ್‌ವತಿಯಿಂದ ನೀಡಲಾಗುತ್ತದೆ. ಚಿಕಿತ್ಸೆ ನೀಡಲು ಸಂಬಂಧಪಟ್ಟ ಘಟಕಾಧಿಕಾರಿ ರವರಿಂದ ದೃಢೀಕರಣ ಪತ್ರವಿದ್ದಲ್ಲಿ ಮಾತ್ರ ಚಿಕಿತ್ಸೆಯನ್ನು ನೀಡಬಹುದಾಗಿರುತ್ತದೆ.