ಬೆಂಗಳೂರು : ರಾಜ್ಯ ಸರ್ಕಾರವು ಪಡಿತರ ವಿತರಕರಿಗೆ ಭರ್ಜರಿ ಸಿಹಿಸುದ್ದಿ ನೀಡಿದ್ದು, ಕಮಿಷನ್ ಮೊತ್ತವನ್ನು ಹೆಚ್ಚಿಸುವುದಾಗಿ ಸಿಎಂ ಸಿದ್ದರಾಮಯ್ಯ ಘೋಷಿಸಿದ್ದಾರೆ.
ಬೆಂಗಳೂರಿನ ಅರಮನೆ ಮೈದಾನದಲ್ಲಿ ಅನ್ನಭಾಗ್ಯ ಯೋಜನೆಯ 10 ವರ್ಷಗಳ ಸಂಭ್ರಮಾಚರಣೆಯ ಅಂಗವಾಗಿ ಆಯೋಜಿಸಲಾದ ಕಾರ್ಯಕ್ರಮದಲ್ಲಿ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಪಿಡಿಎಸ್ ವಿತರಕರು ಫಲಾನುಭವಿಗಳಿಗೆ ನೀಡುವ ಒಂದು ಕೆಜಿ ಅಕ್ಕಿಯ ಕಮಿಷನ್ ಮೊತ್ತವನ್ನು 1.24 ರೂಪಾಯಿಯಿಂದ 1.5 ರೂಪಾಯಿಗೆ ಹೆಚ್ಚಿಸುವುದಾಗಿ ಹೇಳಿದ್ದಾರೆ.
ಕರ್ನಾಟಕವನ್ನು ಹಸಿವು ಮುಕ್ತಗೊಳಿಸುವುದೇ ಈ ಯೋಜನೆಯ ಉದ್ದೇಶವಾಗಿದೆ. ಪ್ರತಿಪಕ್ಷ ಬಿಜೆಪಿಯು ಬಡವರಿಗಾಗಿ ಉದ್ದೇಶಿಸಿರುವ ಯೋಜನೆಯನ್ನು ಲೇವಡಿ ಮಾಡಿರುವುದು ದುರಂತ ಎಂದು ಹೇಳಿದರು.