
ಬೆಂಗಳೂರು : ನಾನಾ ಯಾತ್ರೆಗಳಿಗೆ ತೆರಳುವ ಯಾತ್ರಾರ್ಥಿಗಳು ಇನ್ನು ಮುಂದೆ ಅರ್ಜಿ ಸಲ್ಲಿಸಲು ಹಾಗೂ ಸಹಾಯಧನ ಪಡೆಯಲು ಪದೇಪದೆ ಇಲಾಖೆಗೆ ಅಲೆಯಬೇಕಾಗಿಲ್ಲ. ಇನ್ನು ಮುಂದೆ ಆನ್ಲೈನ್ನಲ್ಲೇ ಅರ್ಜಿ ಸಲ್ಲಿಸಿ, ಆರ್ಟಿಜಿಎಸ್ ಮೂಲಕ ನೇರವಾಗಿ ಸಹಾಯಧನ ಪಡೆಯಬಹುದು.
ಚಾರ್ಧಾಮ್ ಯಾತ್ರೆ (₹20 ಸಾವಿರ), ಕಾಶಿ ಯಾತ್ರೆ (₹5 ಸಾವಿರ), ಮಾನಸ ಸರೋವರ ಯಾತ್ರೆ (₹30 ಸಾವಿರ), ಕರ್ನಾಟಕ ಗೌರವ್ ಕಾಶಿ ಯಾತ್ರೆ (₹7.5 ಸಾವಿರ). – ಇವುಗಳಿಗೆ ಸಹಾಯಧನಕ್ಕಾಗಿ ಮೊಬೈಲ್ ಆ್ಯಪ್ ಮೂಲಕ ಅರ್ಜಿ ಸಲ್ಲಿಸಬಹುದು.