ಶಿವಮೊಗ್ಗ : ದೈಹಿಕ ಶಿಕ್ಷಕ’ ಹುದ್ದೆ ಆಕಾಂಕ್ಷಿಗಳಿಗೆ ಗುಡ್ ನ್ಯೂಸ್ ಎಂಬಂತೆ 5,500 ಹುದ್ದೆಗಳ ಹುದ್ದೆಗಳ ಭರ್ತಿಗೆ ‘ರಾಜ್ಯ ಸರ್ಕಾರ’ ಸಿದ್ದತೆ ನಡೆಸಿದೆ . ಈ ಕುರಿತು ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಸಚಿವ ಮಧು ಬಂಗಾರಪ್ಪ ಮಾಹಿತಿ ನೀಡಿದ್ದಾರೆ.
ಸೊರಬದಲ್ಲಿ ಮಾತನಾಡಿದ ಅವರು ‘ದೈಹಿಕ ಶಿಕ್ಷಕ ಹುದ್ದೆಗಳ ನೇಮಕಾತಿ ಪ್ರಕ್ರಿಯೆಗೆ ಹಣಕಾಸು ಇಲಾಖೆಯ ಒಪ್ಪಿಗೆಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಸಿದ್ದರಾಮಯ್ಯ ಅವರೇ ಹಣಕಾಸು ಇಲಾಖೆ ಜವಾಬ್ದಾರಿ ಹೊಂದಿರುವುದರಿಂದ ಇದಕ್ಕೆ ಶೀಘ್ರ ಒಪ್ಪಿಗೆ ಸಿಗಲಿದೆ, ನಂತರ ನೇಮಕಾತಿ ಪ್ರಕ್ರಿಯೆ ಆರಂಭಿಸಲಾಗುತ್ತದೆ ಎಂದರು. ಅಲ್ಲದೇ ಇಲಾಖೆಗೆ 40 ಸಾವಿರ ಚಿತ್ರಕಲಾ ಶಿಕ್ಷಕರ ಅಗತ್ಯವಿದ್ದು, ಇದರ ನೇಮಕಾತಿ ಪ್ರಕ್ರಿಯೆ ಕೂಡ ಹಂತ ಹಂತವಾಗಿ ಆರಂಭಿಸಲಾಗುತ್ತದೆ ಎಂದರು.
ಇದೇ ವೇಳೆ ಮಾತನಾಡಿದ ಅವರು ರಾಜ್ಯದ 1.80 ಲಕ್ಷ ಮಕ್ಕಳಿಗೆ ರಾಗಿ ಮಾಲ್ಟ್ ನೀಡುವ ಯೋಜನೆಯನ್ನು ಮುಂದಿನ ಶೈಕ್ಷಣಿಕ ವರ್ಷದಿಂದಲೇ ಆರಂಭಿಸಲಾಗುವುದು ಎಂದರು.