
ಪಿಂಚಣಿದಾರರಿಗೆ ಖುಷಿ ಸುದ್ದಿಯೊಂದು ಸಿಕ್ಕಿದೆ. ಸಿಬ್ಬಂದಿ, ಸಾರ್ವಜನಿಕ ಕುಂದು ಕೊರತೆ ಮತ್ತು ಪಿಂಚಣಿ ಸಚಿವಾಲಯವು, ಪಿಂಚಣಿದಾರರಿಗೆ ನೆಮ್ಮದಿ ಸುದ್ದಿ ನೀಡಿದೆ.
ಜೀವನ ಪ್ರಮಾಣಪತ್ರವನ್ನು ಸಲ್ಲಿಸುವ ಗಡುವನ್ನು ವಿಸ್ತರಿಸಿದೆ. ಪಿಂಚಣಿದಾರರಿಗೆ, ಜೀವನ ಪ್ರಮಾಣ ಪತ್ರ ಸಲ್ಲಿಸಲು ಡಿಸೆಂಬರ್ 31ರವರೆಗೆ ಅವಕಾಶವಿದೆ.
ಕೇಂದ್ರ ಸರ್ಕಾರಿ ನಿವೃತ್ತ ಉದ್ಯೋಗಿಗಳು, ಪಿಂಚಣಿ ಪಡೆಯಲು ಪ್ರತಿ ವರ್ಷ ನವೆಂಬರ್ ತಿಂಗಳಿನಲ್ಲಿ ಜೀವನ ಪ್ರಮಾಣ ಪತ್ರವನ್ನು ಸಲ್ಲಿಸಬೇಕಾಗುತ್ತದೆ. ಪಿಂಚಣಿದಾರರು ಜೀವಂತವಾಗಿದ್ದಾರೆ ಎಂಬುದಕ್ಕೆ ಇದು ಸಾಕ್ಷಿಯಾಗಿದೆ.
ಪಿಂಚಣಿದಾರರಿಗೆ ಆನ್ಲೈನ್ ನಲ್ಲಿ ಜೀವನ ಪ್ರಮಾಣ ಪತ್ರ ಸಲ್ಲಿಸುವ ವ್ಯವಸ್ಥೆ ಮಾಡಲಾಗಿದೆ. ಆದ್ರೆ ಅನೇಕ ಪಿಂಚಣಿದಾರರು, ಬ್ಯಾಂಕ್ ಶಾಖೆಗೆ ಹೋಗಲು ಆದ್ಯತೆ ನೀಡುತ್ತಾರೆ. ವಿವಿಧ ರಾಜ್ಯಗಳಲ್ಲಿ ಕೊರೊನಾ ಹೆಚ್ಚಿರುವ ಕಾರಣ, ಇದು ಅಪಾಯಕ್ಕೆ ಆಹ್ವಾನ ಮಾಡಿಕೊಡುತ್ತದೆ. ಈ ಕಾರಣಕ್ಕೆ ಸಚಿವಾಲಯ, ಪಿಂಚಣಿದಾರರಿಗೆ ನೆಮ್ಮದಿ ಸುದ್ದಿ ನೀಡಿದೆ.
ಎಲ್ಲಾ ವಯೋಮಾನದ ಪಿಂಚಣಿದಾರರಿಗೆ ಜೀವಿತ ಪ್ರಮಾಣಪತ್ರವನ್ನು ಸಲ್ಲಿಸುವ ಸಮಯವನ್ನು ವಿಸ್ತರಿಸಿದೆ. ಪಿಂಚಣಿದಾರರು ಡಿಸೆಂಬರ್ 31ರ ಒಳಗೆ ಜೀವನ ಪ್ರಮಾಣ ಪತ್ರ ಸಲ್ಲಿಸಬಹುದಾಗಿದೆ. ಪಿಂಚಣಿ ಪ್ರಮಾಣ ಪತ್ರ ಪಡೆಯುವ ಬ್ಯಾಂಕ್ ಶಾಖೆಗಳು, ಕೊರೊನಾ ನಿಯಮ ಪಾಲನೆ ಮಾಡಬೇಕೆಂದು ಸಚಿವಾಲಯ ಹೇಳಿದೆ.