![](https://kannadadunia.com/wp-content/uploads/2024/02/QR-Code.jpg)
ಧಾರವಾಡ : ಫೆಬ್ರವರಿ 8, 2024 ರಿಂದ ಜಾರಿಗೆ ಬರುವಂತೆ ವಾ.ಕ.ರ.ಸಾ ಸಂಸ್ಥೆಯ ಧಾರವಾಡ ಘಟಕದ ಅನುಸೂಚಿಗಳ ವಾಹನಗಳಲ್ಲಿ ಪ್ರಯಾಣಿಸುವ ಪ್ರಯಾಣಿಕರಿಗೆ ಚಿಲ್ಲರೆ ಸಮಸ್ಯೆ ನೀಗಿಸುವ ಹಾಗೂ ಡಿಜಿಟಲ್ ಪೇಮೆಂಟ್ ಪ್ರೋತ್ಸಾಹಿಸಿ ಸಮಯ ಉಳಿತಾಯ ಮಾಡುವ ಉದ್ದೇಶದಿಂದ ಯು.ಪಿ.ಆಯ್ ಮುಖಾಂತರ ಕ್ಯೂ.ಆರ್ ಕೋಡ್ ಬಳಸಿ ಟಿಕೇಟ್ ನೀಡುವ ವ್ಯವಸ್ಥೆಯನ್ನು ಜಾರಿಗೆ ತರಲಾಗಿದೆ.
ಮುಂಬರುವ ಕೆಲವೇ ದಿನಗಳಲ್ಲಿ ವಿಭಾಗದ ವ್ಯಾಪ್ತಿಯ ಘಟಕಗಳಾದ ಸವದತ್ತಿ, ರಾಮದುರ್ಗ, ಹಳಿಯಾಳ, ದಾಂಡೇಲಿಯಲ್ಲಿಯೂ ಸಹ ಈ ವ್ಯವಸ್ಥೆ ಜಾರಿಯಾಗುತ್ತದೆ. ಸದರಿ ವ್ಯವಸ್ಥೆಯನ್ನು ಅತೀ ಹೆಚ್ಚಿನ ಸಾರ್ವಜನಿಕ ಪ್ರಯಾಣಿಕರು ಉಪಯೋಗಿಸಿಕೊಳ್ಳುವಚಿತೆ ವಾ.ಕ.ರ.ಸಾ.ಸಂಸ್ಥೆ.ಧಾರವಾಡ (ಗ್ರಾ)ವಿಭಾಗದ ವಿಭಾಗೀಯ ನಿಯಂತ್ರಣಾಧಿಕಾರಿ ಶಶಿಧರ ಚನ್ನಪ್ಪಗೌಡರ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.