ಬೆಂಗಳೂರು : ದಸರಾ ಹಬ್ಬದ ಸಮಯದಲ್ಲಿ ಪ್ರಯಾಣಿಕರ ಸಂಖ್ಯೆ ಹೆಚ್ಚಳವಾಗಲಿದ್ದು, ದಟ್ಟಣೆ ಕಡಿಮೆಗೊಳಿಸಲು ಅಕ್ಟೋಬರ್ 1 ರಿಂದ ಅಕ್ಟೋಬರ್ 15ರ ವರೆಗೆ ನೈಋತ್ಯ ರೈಲ್ವೆಯು 34 ರೈಲುಗಳಿಗೆ ತಾತ್ಕಾಲಿಕವಾಗಿ ಹೆಚ್ಚುವರಿ ಬೋಗಿಗಳನ್ನು ಜೋಡಿಸಲು ನಿರ್ಧರಿಸಿದೆ.
ದಸರಾ ಹಬ್ಬಕ್ಕೆ ವಿಶೇಷ ರೈಲು ಸೇವೆ
ಅಕ್ಟೋಬರ್ 1 ರಿಂದ ಅಕ್ಟೋಬರ್ 15ರ ವರೆಗೆ 34 ರೈಲುಗಳಿಗೆ ಹೆಚ್ಚುವರಿ ಬೋಗಿ
ಮೈಸೂರು – ಬೆಳಗಾವಿ- ಮೈಸೂರು ಎಕ್ಸ್ಪ್ರೆಸ್, ಮೈಸೂರು – ಚಾಮರಾಜನಗರ – ಮೈಸೂರು ಎಕ್ಸ್ಪ್ರೆಸ್, ಮೈಸೂರು – ಬಾಗಲಕೋಟೆ – ಮೈಸೂರು ಬಸವ ಎಕ್ಸ್ಪ್ರೆಸ್, ಹುಬ್ಬಳ್ಳಿ – ಮೈಸೂರು – ಹುಬ್ಬಳ್ಳಿ ಹಂಪಿ ಎಕ್ಸ್ ಪ್ರೆಸ್, ಮೈಸೂರು – ಪಂಡರಪುರ – ಮೈಸೂರು ಗೋಲ್ ಗುಂಬಜ್ ಎಕ್ಸ್ಪ್ರೆಸ್ ರೈಲುಗಳಿಗೆ ತಲಾ 1 ಸ್ಟೀಪರ್ ಕ್ಲಾಸ್ ಬೋಗಿಗಳ ಜೋಡಣೆ
ಮೈಸೂರು – ತಾಳಗುಪ್ಪ – ಮೈಸೂರು ಎಕ್ಸ್ಪ್ರೆಸ್ ರೈಲುಗಳಿಗೆ ತಲಾ ಎರಡು ಸ್ಟೀಪರ್ ಕ್ಲಾಸ್ ಬೋಗಿಗಳ ಜೋಡಣೆ
ಮೈಸೂರು – ಚಾಮರಾಜನಗರ – ಮೈಸೂರು ಪ್ಯಾಸೆಂಜರ್ ಸ್ಪೆಷಲ್, ತಾಳಗುಪ್ಪ- ಮೈಸೂರು – ತಾಳಗುಪ್ಪ ಕುವೆಂಪು ಎಕ್ಸ್ಪ್ರೆಸ್, ಕೆಎಸ್ಆರ್ ಬೆಂಗಳೂರು – ಅರಸೀಕೆರೆ – ಕೆಎಸ್ಆರ್ ಬೆಂಗಳೂರು ಪ್ಯಾಸೆಂಜರ್, ಕೆಎಸ್ಆರ್ ಬೆಂಗಳೂರು – ಚನ್ನಪಟ್ಟಣ – ಕೆಎಸ್ಆರ್ ಬೆಂಗಳೂರು ಪ್ಯಾಸೆಂಜರ್. ಅರಸೀಕೆರೆ – ಮೈಸೂರು – ಅರಸೀಕೆರೆ ಪ್ಯಾಸೆಂಜರ್, ಮೈಸೂರು – ಶಿವಮೊಗ್ಗ – ಮೈಸೂರು ಎಕ್ಸ್ಪ್ರೆಸ್, ಶಿವಮೊಗ್ಗ – ಚಿಕ್ಕಮಗಳೂರು – ಶಿವಮೊಗ್ಗ ಪ್ಯಾಸೆಂಜರ್, ಚಿಕ್ಕಮಗಳೂರು – ಯಶವಂತಪುರ – ಚಿಕ್ಕಮಗಳೂರು ಎಕ್ಸ್ ಪ್ರೆಸ್, ಅರಸೀಕೆರೆ – ಮೈಸೂರು – ಅರಸೀಕೆರೆ ಪ್ಯಾಸೆಂಜರ್, ಮೈಸೂರು – ಎಸ್ಎಂವಿಟಿ ಬೆಂಗಳೂರು – ಮೈಸೂರು ಎಕ್ಸ್ಪ್ರೆಸ್, ಎಸ್ಎಂವಿಟಿ ಬೆಂಗಳೂರು – ಕರೈಕಲ್ – ಎಸ್ಎಂವಿಟಿ ಬೆಂಗಳೂರು ಎಕ್ಸ್ಪ್ರೆಸ್ ರೈಲುಗಳಿಗೆ ತಲಾ ಒಂದು ಸಾಮಾನ್ಯ ದ್ವಿತೀಯ ದರ್ಜೆ ಬೋಗಿಗಳ ಜೋಡಣೆ