alex Certify ಹೊಸದಾಗಿ ಸೇವೆಗೆ ಸೇರಿದ ʻಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕಿಯರಿಗೆʼ ಗುಡ್ ನ್ಯೂಸ್ : ರಾಜ್ಯ ಸರ್ಕಾರದಿಂದ ʻಹೆರಿಗೆ ರಜೆʼ ಮಂಜೂರು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹೊಸದಾಗಿ ಸೇವೆಗೆ ಸೇರಿದ ʻಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕಿಯರಿಗೆʼ ಗುಡ್ ನ್ಯೂಸ್ : ರಾಜ್ಯ ಸರ್ಕಾರದಿಂದ ʻಹೆರಿಗೆ ರಜೆʼ ಮಂಜೂರು

ಬೆಂಗಳೂರು : ರಾಜ್ಯ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಪದವೀಧರ ಪ್ರಾಥಮಿಕ ಶಿಕ್ಷಕರಾಗಿ (6 ರಿಂದ 8ನೇ ತರಗತಿಗೆ) ಹೊಸದಾಗಿ ಸೇವೆಗೆ ಸೇರಿದ ಶಿಕ್ಷಕಿಯರಿಗೆ ಹೆರಿಗೆ ರಜೆ ಮಂಜೂರಾತಿ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

ವಿಷಯಕ್ಕೆ ಸಂಬಂಧಿಸಿದಂತೆ ಉಲ್ಲೇಖ (1) ರ ಪತ್ರದಲ್ಲಿ ಹಾವೇರಿ ಜಿಲ್ಲೆಯಲ್ಲಿನ ಬ್ಯಾಡಗಿ ತಾಲ್ಲೂಕಿನ, ಬಿಸಿಲಹಳ್ಳಿಯ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಗೆ ನೇಮಕಾತಿಗೊಂಡಿರುವ ಶ್ರೀಮತಿ. ಮಂಜವ್ಯ ಸೆರೆಯಣ್ಣನವರು ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕಿಯಾಗಿ ದಿನಾಂಕ : 27.10.2023 ರಂದು ನೇಮಕಗೊಂಡಿದ್ದು, ಸದರಿ ಶಿಕ್ಷಕಿಯು ಅಕ್ಟೋಬರ್ 08 ರಂದು ಎರಡನೇ ಮಗುವಿಗೆ ಜನ್ಮ ನೀಡಿರುತ್ತಾರೆ. ಅದೇ ರೀತಿಯಾಗಿ ಹಾನಗಲ್ ತಾಲ್ಲೂಕಿನ ಬಾಳಂಬೀಡು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಶ್ರೀವತಿ. ವಿದ್ಯಾಶ್ರೀ ಚ ಪಾಟೀಲ ಇವರು ದಿನಾಂಕ : 31.10.2023 ರಂದು ಶಾಲಾ ಕರ್ತವ್ಯಕ್ಕೆ ಹಾಜರಾಗಿದ್ದು, ದಿನಾಂಕ : 26.09.2023 ರಂದು ಮೊದಲನೇ ಮಗುವಿಗೆ ಜನ್ಮ ನೀಡಿರುತ್ತಾರೆ. ಸದರಿ ಇಬ್ಬರು ಶಿಕ್ಷಕರುಗಳು ಸರ್ಕಾರಿ ಸೇವೆಗೆ ಸೇರುವ ಪೂರ್ವದಲ್ಲಿ ಮಗುವಿಗೆ ಜನ್ಮ ನೀಡಿರುವ ಹಿನ್ನೆಲೆಯಲ್ಲಿ ಸದರಿಯವರುಗಳಿಗೆ ಹೆರಿಗೆ ರಜೆ ಮಂಜೂರಾತಿ ನೀಡಲು ಮಾರ್ಗದರ್ಶನ ಕೋರಿರುತ್ತಾರೆ.

ಮುಂದುವರೆದು, ಉಲ್ಲೇಖ (2) ರ ಪತ್ರದಲ್ಲಿ ಶ್ರೀಮತಿ. ಹೇಮಲತಾ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಶೆಟ್ಟಿಹಳ್ಳಿ, ನಾಗಮಂಗಲ ತಾಲ್ಲೂಕು, ಮಂಡ್ಯ ಜಿಲ್ಲೆ, ಇವರು ದಿನಾಂಕ : 21.11.2023 ರಂದು ಶಾಲಾ ಕರ್ತವ್ಯಕ್ಕೆ ಹಾಜರಾಗಿದ್ದು 01 ತಿಂಗಳು 15 ದಿವಸಗಳ ಮಗುವಿದ್ದು, ಇವರಿಗೆ ಶಿಶುಪಾಲನಾ ರಜೆ ಮಂಜೂರಾತಿ ನೀಡುವ ಬಗ್ಗೆ ಮಾರ್ಗದರ್ಶನ ಕೋರಿರುತ್ತಾರೆ.

ಕೆ.ಸಿ.ಎಸ್.ಆರ್. ನಿಯಮ 135 ರನ್ವಯ ಮಹಿಳಾ ಸರ್ಕಾರಿ ನೌಕರರಿಗೆ 180 ದಿನಗಳಿಗೆ ಪ್ರಾರಂಭದ ದಿನಾಂಕದಿಂದ ಮಂಜೂರು ಮಾಡಲು ಅವಕಾಶವನ್ನು ಕಲ್ಪಿಸಲಾಗಿದೆ. ಆದರೆ, ಈ ಪ್ರಕರಣದಲ್ಲಿ ಸದರಿ ಶಿಕ್ಷಕಿಗೆ ಸರ್ಕಾರಿ ನೌಕರಿಗೆ ಸೇರುವ ಪೂರ್ವದಲ್ಲಿಯೇ ಹೆರಿಗೆಯಾಗಿದ್ದು, ಆ ನಂತರದಲ್ಲಿ ಸರ್ಕಾರಿ ಸೇವೆಯ ಕರ್ತವ್ಯಕ್ಕೆ ಹಾಜರಾಗಿರುವುದು ಕಂಡುಬಂದಿರುತ್ತದೆ.

ಸರ್ಕಾರಿ ಆದೇಶ ಸಂಖ್ಯೆ: ಆಇ 4(ಇ) ಸೇನಿಸೇ 2021, ದಿನಾಂಕ : 21.06.2021 ರಲ್ಲಿನ ಪ್ರಕಾರ, ಯಾವುದೇ ಮಹಿಳಾ ಸರ್ಕಾರಿ ನೌಕರರಿಗೆ ಕಿರಿಯ ಮಗುವು 18 ವರ್ಷ ತಲುಪುವವರೆಗಿನ ಅವಧಿಗೆ ಶಿಶುಪಾಲನಾ ರಜೆಗೆ ಅರ್ಹತೆ ಇರುತ್ತದೆ. ಪ್ರಯುಕ್ತ, ಮೇಲಿನ ಪ್ರಕರಣಗಳ ಹಿನ್ನೆಲೆಯಲ್ಲಿನ ವಿಶೇಷ ಸಂದರ್ಭವನ್ನು ಪರಿಗಣಿಸಿದೆ. ಇಂತಹ ಪ್ರಕರಣಗಳಲ್ಲಿ ಸೇವೆಗೆ ಸೇರುವ ಮೊದಲೇ ಹೆರಿಗೆಯಾಗಿರುವುದರಿಂದ ಮತ್ತು ಈಗಾಗಲೇ ಸೇವೆಯಲ್ಲಿರುವ ನೌಕರರಿಗೆ 06 ತಿಂಗಳ ಹರಿಗೆ ರಜೆ ಸೌಲಭ್ಯವಿರುವುದನ್ನು ಗಮನಿಸಿ, ತಾಯಿಯ ಹಾಗೂ ಮಗುವಿನ ಆರೈಕೆಯ ಹಿತದೃಷ್ಟಿಯಿಂದ ಮಗುವಿಗೆ 6 ತಿಂಗಳು ತುಂಬುವವರೆಗೆ ದಿನಾಂಕ : 21.06.2021 ರ ಸರ್ಕಾರಿ ಆದೇಶದ ಷರತ್ತುಗಳಿಗೆ ಒಳಪಟ್ಟು, ಶಿಶುಪಾಲನಾ ರಜೆಯನ್ನು ಮಂಜೂರು ಮಾಡಲು ತಿಳಿಸಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...