ಬೆಂಗಳೂರು : ರಾಜ್ಯ ಸರ್ಕಾರವು ಅಲ್ಪಸಂಖ್ಯಾತ ಸಮುದಾಯವದರಿಗೆ ಭರ್ಜರಿ ಸಿಹಿಸುದ್ದಿ ನೀಡಿದ್ದು, 2023-24ನೇ ಸಾಲಿನ ಅಲ್ಪಸಂಖ್ಯಾತರ ಕೌಶಲ್ಯಭಿವೃದ್ಧಿ ಯೋಜನೆಯಡಿ ಭಾರತೀಯ ಸೇನೆ, ವಾಯುಪಡೆ, ನೌಕಾಪಡೆ, CISF, BSF, RPF, ಪೊಲೀಸ್, ಅಬಕಾರಿ ಇತ್ಯಾದಿ ಹುದ್ದೆಗೆ ಸೇರಲು ಇಚ್ಚಿಸುವ ಅಭ್ಯರ್ಥಿಗಳಿಂದ ಪೂರ್ವ ನೇಮಕಾತಿ ದೈಹಿಕ ಕೌಶಲ್ಯದ ತರಬೇತಿಗೆ ಅರ್ಜಿ ಆಹ್ವಾನಿಸಲಾಗಿದೆ.
ರಾಜ್ಯದ ರಾಮನಗರ, ಬೆಳಗಾವಿ, ದಾವಣಗೆರೆ, ಕಲಬುರಗಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳ ಅಲ್ಪಸಂಖ್ಯಾತರ ಸಮುದಾಯದ ಅಭ್ಯರ್ಥಿಗಳಿಂದ ಪೂರ್ವ ನೇಮಕಾತಿ ದೈಹಿಕ ಕೌಶಲ್ಯದ ತರಬೇತಿಗೆ ಅರ್ಜಿ ಆಹ್ವಾನಿಸಲಾಗಿದ್ದು, ಅರ್ಜಿ ಸಲ್ಲಿಸಲು 05/01/2024 ಕೊನೆಯ ದಿನವಾಗಿದೆ.
ಈ ಜಿಲ್ಲೆಗಳ ಅಲ್ಪಸಂಖ್ಯಾತರ ಸಮುದಾಯದ ಅಭ್ಯರ್ಥಿಗಳು ಮಾತ್ರ ಅರ್ಜಿ ಸಲ್ಲಿಸಬೇಕು
ಅಲ್ಪಸಂಖ್ಯಾತರ ಕೌಶಲ್ಯ ಅಭಿವೃದ್ಧಿ ಯೋಜನೆಯಡಿ ರಕ್ಷಣಾ/ಏಕರೂಪದ ಸೇವೆಗಳಿಗೆ (ಭಾರತೀಯ ಸೇನೆ, ವಾಯುಪಡೆ, ನೌಕಾಪಡೆ, CISF, BSF, RPF, ಪೊಲೀಸ್, ಅಬಕಾರಿ ಇತ್ಯಾದಿ) ಸೇರಲು ಇಚ್ಛಿಸುವ ರಾಮನಗರ, ಬೆಳಗಾವಿ, ದಾವಣಗೆರೆ, ಕಲಬುರಗಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳ ಅಲ್ಪಸಂಖ್ಯಾತರ ಸಮುದಾಯದ ಅಭ್ಯರ್ಥಿಗಳಿಂದ ಪೂರ್ವ ನೇಮಕಾತಿ ದೈಹಿಕ ಕೌಶಲ್ಯದ ತರಬೇತಿಗಾಗಿ ಆನ್‌ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಅರ್ಹತೆಗಳು
ರಾಮನಗರ, ಬೆಳಗಾವಿ, ದಾವಣಗೆರೆ, ಕಲಬುರಗಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳ ಅಭ್ಯರ್ಥಿಗಳಾಗಿರಬೇಕು.
ಅಲ್ಪಸಂಖ್ಯಾತರ ಮುಸ್ಲಿಂ, ಕ್ರಿಶ್ಚಿಯನ್, ಜೈನ್, ಬೌದ್ಧ, ಸಿಖ್ ಮತ್ತು ಪಾರ್ಸಿ ಸಮುದಾಯದವರಾಗಿರಬೇಕು.
ನಿಗಧಿತ ವಯೋಮಾನ ಹೊಂದಿರಬೇಕು.
ಕನಿಷ್ಠ ಎಸ್.ಎಸ್.ಎಲ್.ಸಿ ಉತ್ತೀರ್ಣರಾಗಿರಬೇಕು.
ಅಭ್ಯರ್ಥಿಯ ಮೀರಿರಬಾರದು. ಕುಟುಂಬದ ವಾರ್ಷಿಕ ಆದಾಯವು 8.00 ಲಕ್ಷಗಳು
ತರಬೇತಿ ಕುರಿತು
ತರಬೇತಿ ಕಾಲಾವಧಿಯು 60 ದಿನಗಳಾಗಿರುತ್ತದೆ.
ತರಬೇತಿಯನ್ನು ಊಟ, ವಸತಿ ಸೌಲಭ್ಯದೊಂದಿಗೆ ನೀಡಲಾಗುವುದು.
ಅಭ್ಯರ್ಥಿಗೆ ಯಾವುದೇ ತರಹದ ಸೈಫಂಡ್ನೀ ಡಲಾಗುವುದಿಲ್ಲ.
ನಿಗಧಿತ ದೈಹಿಕ ದಾರ್ಡ್ಯತೆ ಹೊಂದಿರಬೇಕು.
ಕೊನೆಯ ದಿನಾಂಕ: ಅನ್‌ಲೈನ್ ಅರ್ಜಿಗಳನ್ನು ಸಲ್ಲಿಸಲು ಕೊನೆಯ ದಿನಾಂಕ: 05/01/2024.
ಅರ್ಜಿದಾರರಿಗೆ ಸೂಚನೆಗಳು
ಅರ್ಜಿದಾರರು https://dom.karnataka.gov.in ಈ ಲಿಂಕ್ ಮೂಲಕ “2023-24ನೇ | ಸಾಲಿನ ರಕ್ಷಣಾ/ಏಕರೂಪದ ಸೇವೆಗಳಿಗೆ ವಸತಿ ಸಹಿತವಾಗಿ ಪೂರ್ವ ನೇಮಕಾತಿ ದೈಹಿಕ ಕೌಶಲ್ಯದ ಕುರಿತಾದ ತರಬೇತಿಗೆ ಅರ್ಜಿ” (ಕ್ಲಿಕ್ ಮಾಡಿ) ಮೂಲಕ ಅರ್ಜಿ ಸಲ್ಲಿಸಲು ಸೂಚಿಸಲಾಗಿದೆ.