ಬೆಂಗಳೂರು : ನಮ್ಮ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ, ಇಂದಿನಿಂದ ಪ್ರಯಾಣಿಕರ ಅನುಕೂಲ ಕಲ್ಪಿಸುವ ದೃಷ್ಟಿಯಿಂದ ಮೆಟ್ರೋ ಮಿತ್ರ ಸೇವೆಯನ್ನು ಆರಂಭಿಸಲಾಗುತ್ತಿದೆ.
ಪ್ರಯಾಣಿಕರ ಅನುಕೂಲಕ್ಕಾಗಿ ಮೆಟ್ರೋ ಮಿತ್ರಾ ಆ್ಯಪ್ ಆಧಾರಿತ ಆಟೋರಿಕ್ಷಾ ಸೌಲಭ್ಯವನ್ನು ಆರಂಭಿಸಲಾಗುತ್ತಿದೆ, ಆಟೋ-ರಿಕ್ಷಾ ಮೆಟ್ರೋ ನಿಲ್ದಾಣಗಳ ಆರಂಭದಿಂದ ಕೊನೆವರೆಗೂ ಸೇವೆ ಲಭ್ಯವಾಗಲಿದೆ.
ಪ್ರಯಾಣಿಕರು ಆಟೋ ಬುಕ್ ಮಾಡಲು ಮೆಟ್ರೋ ನಿಲ್ದಾಣಗಳ ಹೊರಗೆ ಪ್ರದರ್ಶಿಸಲಾಗುವ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಬೇಕು. ಆಗ ನಿಲ್ದಾಣದ 5 ಕಿ.ಮೀ ವ್ಯಾಪ್ತಿಯಲ್ಲಿರುವ ಪ್ರಮುಖ ಪ್ರದೇಶಗಳನ್ನು ಪಟ್ಟಿ ಮಾಡಲಾದ ಲಿಂಕ್ ಗೆ ಕರೆದೊಯ್ಯುತ್ತದೆ. ಪ್ರಯಾಣಿಕರು ನಿರ್ದಿಷ್ಟ ಸ್ಥಳವನ್ನು ಆಯ್ಕೆ ಮಾಡಿದ ನಂತರ ಪ್ರಯಾಣವನ್ನು ಬುಕ್ ಮಾಡಲು ಒಟಿಪಿ ಕಳುಹಿಸಲಾಗುತ್ತದೆ. ಕೂಡಲೇ ಅಪ್ಲಿಕೇಷನ್ ಹೊಂದಿರುವ ಚಾಲಕರಿಗೆ ಸಂದೇಶ ರವಾನೆಯಾಗುತ್ತದೆ. ನಂತರ ಪ್ರಯಾಣಿಕರಿರುವ ಸ್ಥಳಕ್ಕೆ ಬರುತ್ತಾರೆ.
ಮೆಟ್ರೋ ಇಳಿದ ತಕ್ಷಣ ಬೇರೋಂದು ಆಟೋಗೆ ಕಾಯುವುದು ಹಾಗೂ ಬುಕಿಂಗ್ ಮಾಡುತ್ತ ನಿಲ್ಲುವ ರಗಳೆ ಪ್ರಯಾಣಿಕರಿಗಿರುವುದಿಲ್ಲ. ಮೊದಲ ಎರಡು ಕಿಲೋಮೀಟರ್‌ಗಳಿಗೆ 30 ರೂ. ಮತ್ತು ನಂತರದ ಪ್ರತಿ ಕಿಲೋಮೀಟರ್‌ಗೆ 15 ರೂ. ಜೊತೆಗೆ 10 ರೂ. ಇತರೆ ಚಾರ್ಜಸ್ಗೆ ಎಂದು ದರ ಫಿಕ್ಸ್ ಮಾಡಲಾಗಿದೆ.