ಬೆಂಗಳೂರು : ಕಾರ್ತಿಕ ಮಾಸದ ಪರಿಣಾಮ ಬೆಂಗಳೂರು ಸೇರಿ ಹಲವೆಡೆ ಕೋಳಿ ಬೆಲೆಯಲ್ಲಿ ಕುಸಿತವಾಗಿದೆ . ಹೌದು. ಕಳೆದ ಹಲವು ದಿನಗಳಿಂದ ಚಿಕನ್ ಬೆಲೆ 260 ರಿಂದ 300 ರೂಪಾಯಿ ವರೆಗೆ ಇತ್ತು. ಸದ್ಯ, ಬೆಂಗಳೂರಿನಲ್ಲಿ 1 ಕೆಜಿ ಚಿಕನ್ 160 ರೂಪಾಯಿಗೆ ಮಾರಾಟವಾಗ್ತಿದೆ ಎನ್ನಲಾಗಿದೆ.
ಕಾರ್ತಿಕ ಮಾಸದಲ್ಲಿ ಮಾಂಸಾಹಾರ ಸೇವಿಸುವವರ ಸಂಖ್ಯೆ ಕಡಿಮೆ. ಆದ್ದರಿಂದ ಚಿಕನ್ ಬೆಲೆ ಕಡಿಮೆಯಾಗಿದೆ ಎಂದು ಹೇಳಲಾಗುತ್ತಿದೆ.
ಕಳೆದ ಹಲವು ದಿನಗಳಿಂದ ಚಿಕನ್ ಬೆಲೆ 260 ರಿಂದ 300 ರೂಪಾಯಿ ವರೆಗೆ ಇತ್ತು, ಇದೀಗ ಬೆಂಗಳೂರು ಸೇರಿದಂತೆ ಹಲವೆಡೆ 1 ಕೆಜಿ ಚಿಕನ್ ಬೆಲೆ 160 ರೂಪಾಯಿಗೆ ಮಾರಾಟವಾಗುತ್ತಿದೆ. ನಾಟಿ ಕೋಳಿ 360 ರೂಪಾಯಿ, ಲೈವ್ ಚಿಕನ್ ರೂ. 130 ಹಾಗೂ ಸ್ಕಿನ್ಲೆಸ್ ಚಿಕನ್ ಕೆಜಿಗೆ ರೂ. 200 ರೂಪಾಯಿ ಇದೆ. ಆದರೆ ಕೆಲವು ಕಡೆ ಚಿಕನ್ ಕೆಜಿಗೆ 200, 180 ರೂಗೆ ಮಾರಾಟವಾಗುತ್ತಿದೆ.