ಬೆಂಗಳೂರು : ಪ್ರಯಾಣಿಕರಿಗೆ ಕೆಎಸ್ ಆರ್ ಟಿಸಿ ಸಿಹಿಸುದ್ದಿಯೊಂದನ್ನು ನೀಡಿದ್ದು, ಶೀಘ್ರವೇ ಬಸ್ ಗಳಲ್ಲಿ ಯುಪಿಐ, ಡೆಬಿಟ್,ಕ್ರೆಡಿಟ್ ಕಾರ್ಡ್ ಬಳಸಿ ಪ್ರಯಾಣಿಸುವ ವ್ಯವಸ್ಥೆ ಜಾರಿಗೆ ಸಿದ್ಧತೆ ನಡೆಸಲಾಗಿದೆ.
ಹೌದು, ಕೆಎಸ್ ಆರ್ ಟಿಸಿ ಕ್ಯಾಶ್ ಲೆಸ್ ಟಿಕೆಟಿಂಗ್ ವ್ಯವಸ್ಥೆ ಜಾರಿಗೆ ಮುಂದಾಗಿದ್ದು, ಏಪ್ರಿಲ್ ಅಥವಾ ಮೇ ವೇಳೆಗೆ ನೂತನ ವ್ಯವಸ್ಥೆ ಜಾರಿಗೆ ಬರಲಿದ್ದು, ಅದಕ್ಕಾಗಿ ಎಲೆಕ್ಟ್ರಾನಿಕ್ ಟಿಕೆಟಿಂಗ್ ಯಂತ್ರವನ್ನು ಬಾಡಿಗೆ ಆಧಾರದಲ್ಲಿ ಪಡೆಯಲು ಮುಂದಾಗಿದೆ.
ಈಗಾಗಲೇ ಎಲೆಕ್ಟ್ರಾನಿಕ್ ಯಂತ್ರಗಳ ಮೂಲಕ ಟಿಕೆಟ್ ವಿತರಣೆ ಮಾಡಲಾಗುತ್ತಿದ್ದು, ಇದೀಗ ಟಿಕೆಟ್ ವಿತರಣೆಗೆ ಸ್ಮಾರ್ಟ್ ಇಟಿಎಂಗಳನ್ನು ಪರಿಚಯಿಸಲು ಮುಂದಾಗಿದೆ. ಸ್ಮಾರ್ಟ್ ಇಟಿಎಂಗಳನ್ನು ಮಾಸಿಕ ಬಾಡಿಗೆ ಆಧಾರದಲ್ಲಿ ಪಡೆಯಲು ನಿರ್ಧರಿಸಲಾಗಿದೆ. ಪ್ರಯಾಣಿಕರು ಯಪಿಐ ಸೇರಿದಂತೆ ಇನ್ನಿತರ ಪೇಮೆಂಟ್ ಆಯಪ್ ಗಳ ಮೂಲಕ ಟಿಕೆಟ್ ಮೊತ್ತವನ್ನು ಪಾವತಿಸಲು ಸ್ಮಾರ್ಟ್ ಇಟಿಎಂ ಕ್ಯೂ ಆರ್ ಕೋಡ್ ಗಳ ಮೂಲಕ ಹಣ ಪಾವತಿಸಬಹುದು.