ಬೆಂಗಳೂರು : ರಾಜ್ಯದಲ್ಲಿ ಸಫಲ್ ಹೂಡಿಕೆ ಮಾಡಲಿದ್ದು, 800 ಕ್ಕೂ ಹೆಚ್ಚು ಉದ್ಯೋಗ ಸೃಷ್ಟಿಯಾಗಲಿದೆ.
ಸರ್ಕಾರದ ಸಹಯೋಗದಲ್ಲಿ ನಡೆಯುತ್ತಿರುವ ಸಫಲ್ ಸೆಮಿಕಂಡಕ್ಟರ್ ಆಧಾರಿತ 200ಕ್ಕೂ ಹೆಚ್ಚು ಆವಿಷ್ಕಾರಗಳಿಗೆ ಉತ್ತೇಜನ ನೀಡಿದೆ. ಇದೊಂದು ವಿಶಿಷ್ಟ ಮಾದರಿಯಾಗಿದ್ದು, ಗುಜರಾತ್ ಮತ್ತು ತಮಿಳುನಾಡು ರಾಜ್ಯಗಳು ಈಗ ನಮ್ಮ ರಾಜ್ಯದ ಮಾದರಿಯನ್ನೇ ಅಳವಡಿಸಿಕೊಳ್ಳಲು ಮುಂದಾಗಿವೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.
ಸಫಲ್ನಿಂದ 800 ಉದ್ಯೋಗ ಸೃಷ್ಟಿ
“ಸೆಮಿಕಂಡಕ್ಟರ್ ಆಧಾರಿತ ನವೋದ್ಯಮಗಳ ಬೆಳವಣಿಗೆಗೆ ಪ್ರೋತ್ಸಾಹ ನೀಡುತ್ತಿರುವ ಸಫಲ್ ನಿಂದ 95ಕ್ಕೂ ಹೆಚ್ಚು ಕಂಪೆನಿಗಳು ಪ್ರತ್ಯಕ್ಷ ಮತ್ತು ಪರೋಕ್ಷ ಫಲಾನುಭವಿಗಳಾಗಿವೆ. ಈ ಕಂಪೆನಿಗಳಿಂದ ಇಎಸ್ ಡಿಎಂ ( ಎಲೆಕ್ಟ್ರಾನಿಕ್ಸ್ ಸಿಸ್ಟಂ ಡಿಸೈನ್ ಆಂಡ್ ಮ್ಯಾನುಫಾಕ್ಚರಿಂಗ್) 800 ಉದ್ಯೋಗಗಳು ಸೃಷ್ಟಿಯಾಗಿವೆ. ಸಫಲ್ಗೆ ಸರ್ಕಾರ ಆರಂಭದಲ್ಲಿ ವೆಚ್ಚ ಮಾಡಿದ್ದು * 21.56 ಕೋಟಿ. ಇದರಿಂದ ಪ್ರಯೋಜನ ಪಡೆದ ಕಂಪೆನಿಗಳಿಗೆ ₹ 114 ಕೋಟಿ ಹೂಡಿಕೆ ದೊರೆತಿದೆ. ಸಂಸ್ಥೆಯನ್ನು ಇನ್ನೂ ಐದು ವರ್ಷ ಮುಂದುವರೆಸಲಾಗುತ್ತದೆ” ಎಂದು ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.