ಬೆಂಗಳೂರು : ವರ್ಗಾವಣೆಯ ನಿರೀಕ್ಷೆಯಲ್ಲಿರುವ ಆರೋಗ್ಯ ಇಲಾಖೆಯ ಅಧಿಕಾರಿ/ಸಿಬ್ಬಂದಿಗಳಿಗೆ ರಾಜ್ಯ ಸರ್ಕಾರವು ಸಿಹಿಸುದ್ದಿ ನೀಡಿದ್ದು, ಮಾರ್ಚ್, ಏಪ್ರೀಲ್ ನಲ್ಲಿ ಕೌನ್ಸಿಲಿಂಗ್ ಮೂಲಕ ವರ್ಗಾವಣೆ ನಡೆಸಲು ಮುಂದಾಗಿದೆ.
ಮೇಲ್ಕಂಡ ಸರ್ಕಾರದ ಪತ್ರಗಳಲ್ಲಿ ಸನ್ಮಾನ್ಯ ಮುಖ್ಯಮಂತ್ರಿಯವರ ಮತ್ತು ಸರ್ಕಾರದ ಹಂತದಲ್ಲಿ ಸ್ವೀಕೃತಗೊಂಡಿರುವ ಮನವಿಗಳು /ನಡವಳಿ/ ಅಡಕಗಳಲ್ಲಿನ ಅಂಶಗಳನ್ನು ಪ್ರಸ್ತುತ ಚಾಲ್ತಿಯಲ್ಲಿರುವ 2011ರ ಕೌನ್ಸಿಲಿಂಗ್ ವರ್ಗಾವಣಾ ಕಾಯ್ದೆಯನ್ವಯ ಪರಿಶೀಲಿಸಿ ನಿಯಮಾನುಸಾರ ಕ್ರಮಕೈಗೊಳ್ಳುವಂತೆ ಹಾಗೂ ನಿಯೋಜನೆಯ ಪ್ರಸ್ತಾವನೆಗಳನ್ನು ನಿಯೋಜನಾ ನಿಯಮಗಳನ್ವಯ ನಿಯಮಾನುಸಾರ ಪರಿಶೀಲಿಸಿ ನಿಯೋಜನೆ ಹೊಂದಲು ಅರ್ಹತೆ ಹೊಂದಿರುವ ಬಗ್ಗೆ/ಖಾಲಿ ಹುದ್ದೆಯ ಮಾಹಿತಿಯೊಂದಿಗೆ ಹಾಗೂ ಸ್ಪಷ್ಟವಾದ ಅಭಿಪ್ರಾಯದೊಂದಿಗೆ ಸಲ್ಲಿಸಲು ನಿರ್ದೇಶಿಸಿರುತ್ತಾರೆ.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ಅಧಿಕಾರಿಗಳು/ಸಿಬ್ಬಂದಿ ವರ್ಗಾವಣೆಯನ್ನು ಕರ್ನಾಟಕ ರಾಜ್ಯ ಸಿವಿಲ್ ಸೇವೆಗಳ (ವೈದ್ಯಾಧಿಕಾರಿಗಳು ಮತ್ತು ಇತರೆ ಸಿಬ್ಬಂದಿಯ ವರ್ಗಾವಣೆ ನಿಯಂತ್ರಣ) ನಿಯಮಗಳು 2011, 2013 ಮತ್ತು 2017ರ (ತಿದ್ದುಪಡಿ) ವರ್ಗಾವಣೆ ಕಾಯ್ದೆಯನ್ವಯ ವರ್ಗಾವಣೆಯನ್ನು ಕೌನ್ಸಿಲಿಂಗ್ ಮುಖಾಂತರ ಮಾರ್ಚ್ ಮತ್ತು ಏಪ್ರಿಲ್ ತಿಂಗಳಲ್ಲಿ ಕೈಗೊಳ್ಳಬೇಕಾಗಿರುತ್ತದೆ ಹಾಗೂ ಉಲ್ಲೇಖ(7)ರಲ್ಲಿ ಸರ್ಕಾರದ ಪ್ರಧಾನ ಕಾರ್ಯದರ್ಶಿಗಳು ಮಾನ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವರ ಟಿಪ್ಪಣಿ ಸಂಖ್ಯೆ: ಆಕುಕುಸ/ಟಿ/910/2023-24, ದಿನಾಂಕ: 18.11.2023ರಂತೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಮುಂದಿನ ಎಲ್ಲಾ ಗ್ರೂಪ್ ಎ, ಬಿ, ಸಿ ಮತ್ತು ಡಿ ಸಿಬ್ಬಂದಿಗಳ ವರ್ಗಾವಣೆಯನ್ನು ಕೌನ್ಸಿಲಿಂಗ್ ಕಾಯ್ದೆ ಅನ್ವಯ ಕಡ್ಡಾಯವಾಗಿ ನಿರ್ವಹಿಸಲು ಸೂಚಿಸಿದ್ದು ಅದರಂತೆ ಇನ್ನು ಮುಂದೆ ಎಲ್ಲಾ ವರ್ಗಾವಣೆಗಳನ್ನು ಕೌನ್ಸಿಲಿಂಗ್ ನಿಯಮಗಳನ್ವಯ ನಿರ್ವಹಿಸಲು ಸೂಚಿಸಿದ್ದು, ಅದರಂತೆ 2024ನೇ ಸಾಲಿನ ಸಾರ್ವತ್ರಿಕ ವರ್ಗಾವಣೆ ಸಮಯದಲ್ಲಿ ವರ್ಗಾವಣೆ ಕೋರಿ ನಿಯಮನುಸಾರ ಅರ್ಜಿ ಸಲ್ಲಿಸುವಂತೆ ತಿಳಿಸಿ ಈ ಮೂಲಕ ಹಿಂಬರಹ ನೀಡಿದೆ.