ನವದೆಹಲಿ: ಸಿಬ್ಬಂದಿ ಆಯ್ಕೆ ಆಯೋಗ(SSC) 15,247 ಹುದ್ದೆಗಳಿಗೆ ನೇಮಕಾತಿ ಪತ್ರಗಳನ್ನು ನೀಡುವ ಪ್ರಕ್ರಿಯೆಯನ್ನು ಶೀಘ್ರದಲ್ಲೇ ಪೂರ್ಣಗೊಳಿಸಲಿದ್ದು, ಮುಂದಿನ ಒಂದೆರಡು ತಿಂಗಳಲ್ಲಿ ವಿವಿಧ ಇಲಾಖೆಗಳಿಂದ ಈ ಪತ್ರಗಳನ್ನು ನೀಡಲಾಗುವುದು.
42,000 ನೇಮಕಾತಿಗಳನ್ನು ಡಿಸೆಂಬರ್ 2022 ರ ಮೊದಲು ಪೂರ್ಣಗೊಳಿಸಲಾಗುವುದು. SSC ತನ್ನ ಮುಂಬರುವ ಪರೀಕ್ಷೆಗಳಿಗೆ 67,768 ಖಾಲಿ ಹುದ್ದೆಗಳನ್ನು ತಕ್ಷಣವೇ ಭರ್ತಿ ಮಾಡಲು ಯೋಜನೆಗಳನ್ನು ರೂಪಿಸಿದೆ ಎಂದು ಪಿಐಬಿ ತಿಳಿಸಿದೆ.
‘ಅಗ್ನಿಪಥ’ ಯೋಜನೆಗೆ ಸಂಬಂಧಿಸಿದಂತೆ ದೇಶದಲ್ಲಿ ಹಿಂಸಾತ್ಮಕ ಪ್ರತಿಭಟನೆಗಳು ನಡೆಯುತ್ತಿರುವ ಪ್ರಸ್ತುತ ಸಂದರ್ಭದಲ್ಲಿ ಈ ನೇಮಕಾತಿ ವಿಚಾರ ಗಮನ ಸೆಳೆದಿದೆ. SSC 15,247 ಹುದ್ದೆಗಳಿಗೆ ನೇಮಕಾತಿ ಪತ್ರಗಳ ವಿತರಣೆಯನ್ನು ಪ್ರಕ್ರಿಯೆಗೊಳಿಸುತ್ತಿದ್ದು, ಮುಂದಿನ ತಿಂಗಳುಗಳಲ್ಲಿ ವಿವಿಧ ಇಲಾಖೆಗಳು ನೇಮಕಾತಿ ಪತ್ರ ನೀಡಲಿವೆ ಎನ್ನಲಾಗಿದೆ.