ಬೆಂಗಳೂರು : ಜಿಲ್ಲಾ ಪಂಚಾಯತ್ ಹಾಗೂ ತಾಲ್ಲೂಕು ಪಂಚಾಯತ್ ನೌಕರರ ವೇತನಕ್ಕೆ ರಾಜ್ಯ ಸರ್ಕಾರ ಹೆಚ್ಚುವರಿ ಅನುದಾನ ಬಿಡುಗಡೆ ಮಾಡಿ ಆದೇಶ ಹೊರಡಿಸಿದೆ.
ವಿವಿಧ_ತಾಲ್ಲೂಕು_ಪಂಚಾಯತಿಗಳ ಹಾಗೂ ಜಿಲ್ಲಾ ಪಂಚಾಯತಿಗಳ ಹಾಗೂ ಅವುಗಳ ವ್ಯಾಪ್ತಿಯ ಇಲಾಖೆಗಳಲ್ಲಿ ಬಾಕಿ/ಪ್ರಸಕ್ತ ಸಾಲಿನ ವೇತನ ವೆಚ್ಚಕ್ಕಾಗಿ ದಿನಗೂಲಿ ನೌಕರರ ವೇತನ/ನಿವೃತ್ತಿ ಸೌಲಭ್ಯ ಹೊರಗುತ್ತಿಗೆ ನೌಕರರ ವೇತನ ಮತ್ತು ವೈದ್ಯಕೀಯ ವೆಚ್ಚ ಮರು ಪಾವತಿಗಾಗಿ ಹೆಚ್ಚುವರಿ ಅನುದಾನವನ್ನು ಬಿಡುಗಡೆಗೊಳಿಸಿ ಆದೇಶ ಹೊರಡಿಸಿದೆ.
ತಾಲ್ಲೂಕು ಪಂಚಾಯತ್
ಬಾಕಿ/ಪ್ರಸಕ್ತ ಸಾಲಿನ ವೇತನ ವೆಚ್ಚಕ್ಕಾಗಿ, ದಿನಗೂಲಿ ನೌಕರರ ವೇತನ/ನಿವೃತ್ತಿ ಸೌಲಭ್ಯ, ಹೊರಗುತ್ತಿಗೆ ನೌಕರರ ವೇತನ ಮತ್ತು ವೈದ್ಯಕೀಯ ವೆಚ್ಚ ಮರು ಪಾವತಿಗಾಗಿ ಹೆಚ್ಚುವರಿ ಅಗತ್ಯವಿರುವ ಅನುದಾನವನ್ನು ಕಾಲಂ 4ರ ಲೆಕ್ಕ ಶೀರ್ಷಿಕೆಯಡಿ ರೂ.1726.05ಲಕ್ಷ (ರೂಪಾಯಿ ಒಂದು ಸಾವಿರದ ಏಳು ನೂರ ಇಪ್ಪತ್ತಾರು ಲಕ್ಷದ ಐದು ಸಾವಿರ ಮಾತ್ರ) ಗಳನ್ನು ಬಿಡುಗಡೆಗೊಳಿಸಿದೆ.
ಜಿಲ್ಲಾ ಪಂಚಾಯತಿ
ಜಿಲ್ಲಾ ಪಂಚಾಯತಿಗಳಿಗೆ ಕಾಲಂ 3 ಕಾರ್ಯಕ್ರಮದಡಿ ಬಾಕಿ/ಪ್ರಸಕ್ತ ಸಾಲಿನ ವೇತನ, ದಿನಗೂಲಿ ನೌಕರರ ವೇತನ/ಉಪದಾನ, ಹೊರಗುತ್ತಿಗೆ ಸಿಬ್ಬಂದಿ ವೇತನ ಹಾಗೂ ವೈದ್ಯಕೀಯ ವೆಚ್ಚ ಮರು ಪಾವತಿಗಾಗಿ ಅನುದಾನವನ್ನು ಕಾಲಂ 4ರ ಲೆಕ್ಕ ಶೀರ್ಷಿಕೆಯಡಿ ರೂ.967.70ಲಕ್ಷ (ರೂಪಾಯಿ ಒಂಬತ್ತು ನೂರ ಅರವತ್ತೇಳು ಲಕ್ಷದ ಎಪ್ಪತ್ತು ಸಾವಿರಗಳು ಮಾತ್ರ) ಗಳನ್ನು ಬಿಡುಗಡೆಗೊಳಿಸಿದೆ.
![](https://kannadadunia.com/wp-content/uploads/2024/01/1-10.jpg)
![](https://kannadadunia.com/wp-content/uploads/2024/01/2-9.jpg)
![](https://kannadadunia.com/wp-content/uploads/2024/01/3-7.jpg)
![](https://kannadadunia.com/wp-content/uploads/2024/01/4-5.jpg)
![](https://kannadadunia.com/wp-content/uploads/2024/01/5-5.jpg)
![](https://kannadadunia.com/wp-content/uploads/2024/01/6-4.jpg)